ಮಂಡ್ಯ(ಆ.30): ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಹೆಸರು ಹೇಳದೇ ಸಿಎಂ ಯಡಿಯೂರಪ್ಪ ಟಾಂಗ್‌ ಕೊಟ್ಟಪ್ರಸಂಗ ಜರುಗಿತು. ಕಾವೇರಿಗೆ ಬಾಗಿನ ಅರ್ಪಿಸಿ ವೇದಿಕೆಯಲ್ಲಿ ಮಾತನಾಡುತ್ತಿದ್ದ ವೇಳೆ ಜೆಡಿಎಸ್‌ ಶಾಸಕರ ಸಮ್ಮುಖದಲ್ಲಿ ಸಿಎಂ ಯಡಿಯೂರಪ್ಪ ಹೇಳಿದ ಮಾತುಗಳು ಮೊನಚಾಗಿದ್ದವು.

ಕುಮಾರಸ್ವಾಮಿಗೆ ಟಾಂಗ್‌ ಕೊಟ್ಟರೀತಿಯಲ್ಲಿ ಇದ್ದವು. ಕೆಆರ್‌ಎಸ್‌ ಅಭಿವೃದ್ಧಿ ಮಾಡುತ್ತೇವೆ, ಕೆಆರ್‌ಎಸ್‌ ನಿವಾಸಿಗಳಿಗೆ ಹಕ್ಕು ಪತ್ರ ನೀಡಿ ಕಂದಾಯ ಗ್ರಾಮ ಎಂದು ಘೋಷಣೆ ಮಾಡುತ್ತೇವೆ ಎಂದರು.

ಮದುವಣಗಿತ್ತಿಯಂತೆ ಸಿಂಗಾರಗೊಂಡಿದ್ದ ಕನ್ನಂಬಾಡಿ

ಎಲ್ಲದಕ್ಕಿಂತಲೂ ಹೆಚ್ಚಾಗಿ ಮೈಷುಗರ್‌ ಹಾಗೂ ಪಿಎಸ್‌ಎಸ್‌ಕೆ ಕಾರ್ಖಾನೆಯನ್ನು ಸಾಲ ತಂದಾದರೂ ಸರಿ ಪುನಶ್ಚೇತನ ಮಾಡುತ್ತೇವೆ ಎಂಬ ಮಾತುಗಳು ಕೇವಲ ಯಡಿಯೂರಪ್ಪ ಕೊಟ್ಟಭರವಸೆಯ ಮಾತುಗಳಲ್ಲ. ಕೇವಲ ಭರವಸೆಯಾಗಿಯೂ ಉಳಿಯುವುದಿಲ್ಲ. ನಾನು ಕೊಟ್ಟಭರವಸೆ ಕಾರ್ಯರೂಪಕ್ಕೆ ಬರಲೇ ಬೇಕು ಅನ್ನೋದು ನನ್ನ ಅಭಿಲಾಷೆ. ಸಾಧನೆಗಳು ಮಾತಾಗಿ ಉಳಿಯಬಾರದು. ಮಾತುಗಳು ಸಾಧನೆಯಾಗಿರಬೇಕು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ