ಮಂಡ್ಯ(ಆ.310): ಕೆಆರ್‌ಎಸ್‌ ನಲ್ಲಿ ಕಾವೇರಿ ಮಾತೆಗೆ ಸಿಎಂ ಬಾಗಿನ ಅರ್ಪಣೆ ಮಾಡುವ ಹಿನ್ನೆಲೆಯಲ್ಲಿ ಕೃಷ್ಣ ರಾಜಸಾಗರವನ್ನು ಪ್ರಮುಖ ಸ್ಥಳಗಳಲ್ಲಿ ಮದುವಣಗಿತ್ತಿಯಂತೆ ಸಿಂಗಾರ ಮಾಡಲಾಗಿತ್ತು.

ಕೆಆರ್‌ಎಸ್‌ ಅಣೆಕಟ್ಟೆಅಣೆಕಟ್ಟೆಮೇಲ್ಭಾಗ ಬಾಳೆಕಂದು, ತಳಿರು ತೋರಣ ಕಟ್ಟಿ, ಬಣ್ಣ ಬಣ್ಣದ ಹೂವಿನಿಂದ ಅಲಂಕಾರ ಮಾಡಲಾಗಿತ್ತು. ಅಣೆಕಟ್ಟೆಮುಂಭಾಗ ಸಿಎಂಗೆ ಸ್ವಾಗತ ಕೋರಿ ಬಿಜೆಪಿ ಮುಖಂಡರ ಭಾವಚಿತ್ರಗಳು ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿದ್ದವು.

ಬಾಗಿನ ಅರ್ಪಿಸುವುದರಲ್ಲಿ ಬಿಎಸ್‌ವೈ ದಾಖಲೆ..!

ಅಣೆಕಟ್ಟೆಮುಖ್ಯದ್ವಾರದ ಬಳಿ ಮುಖ್ಯಮಂತ್ರಿ ಬಿಎಸ್‌ವೈ ಹಾಗೂ ಜೆಡಿಎಸ್‌ ಶಾಸಕ ರವೀಂದ್ರ ಶ್ರೀಕಂಠಯ್ಯರ ಬೃಹತ್‌ ಕಟೌಚ್‌ ಕಣ್ಣು ಕುಕ್ಕುವಂತಿತ್ತು. ಆಣೆಕಟ್ಟೆಯ ಕೆಳಭಾಗದಲ್ಲಿರುವ ಕಾವೇರಿ ಪ್ರತಿಮೆಗೂ ಚಂದವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ಕಾವೇರಿ ಪ್ರತಿಮೆ ಮುಂಭಾಗ ವೇದಿಕೆ ಹಾಕಲಾಗಿತ್ತು. ಸಿಎಂ ಆಗಮನದ ಹಿನ್ನೆಲೆ ಯಲ್ಲಿ ಕೆಆರ್‌ಎಸ್‌ ಅಣೆಕಟ್ಟೆಗೆ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು.

ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ