ಚಿಕ್ಕಮಗಳೂರು [ಜ.15]: ರಾಜ್ಯದ ಜನರ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು, ಮುಂದಿನ ಮೂರು ವರ್ಷ ರೈತರ ಏಳ್ಗೆಗೆ ಶ್ರಮಿಸಲಾಗುವುದು ಎಂದು ಸಿಎಂ ಯಡಿಯೂರಪ್ಪ ಹೇಳಿದರು. 

ಚಿಕ್ಕಮಗಳೂರಿನ ಸೊಲ್ಲಾಪುರದ ಗುರು ಸಿದ್ಧರಾಮ ಶಿವಯೋಗಿಗಳ 847ನೇ ಜಯಂತಿ ಮಹೋತ್ಸವದಲ್ಲಿ ಪಾಲ್ಗೊಂಡ ಸಿಎಂ, ರೈತರಿಗೆ ಎಲ್ಲಾ ರೀತಿಯ ಅನುಕೂಲತೆಗಳನ್ನು ಮಾಡಿಕೊಡಲಾಗುವುದು ಎಂದರು. 

ಸಿಎಂ ಗರಂ?

ರಾಜ್ಯದ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮಾಜಿ ಸಚಿವ ಎಚ್‌.ವಿಶ್ವನಾಥ್‌ ಅವರ ಹೆಸರು ಕೇಳಲು ಇಷ್ಟಇಲ್ಲವೇ? ಹೀಗೊಂದು ಪ್ರಶ್ನೆ ಇಲ್ಲಿನ ಕಾರ್ಯಕ್ರಮ ವೇಳೆ ಎದ್ದಿತು.

ಬಿಎಸ್‌ವೈ ಎದ್ದೇಳೋದಕ್ಕೂ ಮುನ್ನವೇ ಪ್ರತಿದಿನ ಹಾಜರಿರುವ ಶಾಸಕ!...
 
ಇನ್ನು ಇತ್ತೀಚಿನ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಎಚ್‌.ವಿಶ್ವನಾಥ್‌ ಅವರ ಹೆಸರು ಕುರಿತು ಪ್ರಶ್ನಿಸುತ್ತಿದ್ದಂತೆ ಮುಖ್ಯಮಂತ್ರಿಯವರು ಸ್ಥಳದಿಂದ ನಿರ್ಗಮಿಸಿದರು.

ಮಹತ್ವದ ಹೆಜ್ಜೆ ಇಟ್ಟ ಯಡಿಯೂರಪ್ಪ: ಸಂಪುಟ ವಿಸ್ತರಣೆ ಚಟುವಟಿಕೆ ಚುರುಕು...

ಸಂಪುಟ ವಿಸ್ತರಣೆ ಕುರಿತು ಕೇಳಿದ ಪ್ರಶ್ನೆಗೆ ಜ.18ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ರಾಜ್ಯಕ್ಕೆ ಬರಲಿದ್ದಾರೆ. ಅಂದೇ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.