ಈ ಬಾರಿ ದೇಶದಲ್ಲಿಕೊರೋನಾ ಆತಂಕವಿದ್ದು, ದಸರಾ ಆಚರಣೆ ಹೇಗಿರಲಿದೆ ಎನ್ನುವ ಕುತೂಹಲ ಎಲ್ಲರಲ್ಲಿದೆ. ಈ ಬಗ್ಗೆ ಮುಖ್ಯಮಂತ್ರಿ ಸುಳಿವನ್ನು ನೀಡಿದ್ದಾರೆ.
ಸರಗೂರು (ಮೈಸೂರು) (ಆ.22): ಕೋವಿಡ್ ಕರಿನೆರಳು ನಾಡಹಬ್ಬ, ವಿಶ್ವವಿಖ್ಯಾತ ಮೈಸೂರು ದರಸಾ ಮೇಲೂ ಬೀಳಲಿದೆ. ಪ್ರತಿಬಾರಿ ಅದ್ಧೂರಿಯಾಗಿ ನಡೆಯುವ ದಸರಾ ಮಹೋತ್ಸವವನ್ನು ಈ ಬಾರಿ ಸರಳವಾಗಿ ಹೇಗೆ ಆಚರಿಸಬಹುದು ಎಂಬ ಕುರಿತು ಚರ್ಚಿಸಿ ತೀರ್ಮಾನಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಬೀಚನಹಳ್ಳಿಯ ಕಬಿನಿ ಜಲಾಶಯ ಬಳಿ ಶುಕ್ರವಾರ ಮಾತನಾಡಿ, ದಸರಾ ಮಹೋತ್ಸವವನ್ನು ಸರಳವಾಗಿ ಹೇಗೆ ಆಚರಿಸಬೇಕೆಂಬ ಕುರಿತು ಚರ್ಚೆ ನಡೆಸಲಾಗುವುದು.
ಸಾರ್ವಜನಿಕವಾಗಿ ಆಚರಿಸಲ್ಪಡುವ ಹಬ್ಬಗಳಿಗೆ ರಾಜ್ಯ ಸರ್ಕಾರ ಕಡಿವಾಣ ..?...
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರ ಜತೆಗೆ ಈ ಕುರಿತು ಮಾತುಕತೆ ನಡೆಸಿ ಉನ್ನತ ಮಟ್ಟದ ಸಮಿತಿಯ ಸಭೆ ನಡೆಸಲಾಗುವುದು ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.
ಕೆಆರ್‌ಎಸ್‌ಗೆ ಬಾಗೀನ ಅರ್ಪಿಸಲು ಆಗಮಿಸಿದ್ದ ವೇಳೆ ಈ ವಿಚಾರ ತಿಳಿಸಿದರು.
