Asianet Suvarna News Asianet Suvarna News

ವಿಜಯಪುರ: ಸೆ. 9ರಂದು 1000 ಕೋಟಿ ವೆಚ್ಚದ ಕಾಮಗಾರಿಗಳಿಗೆ ಸಿಎಂ ಚಾಲನೆ, ಯತ್ನಾಳ

ವಿಜಯಪುರ ಒಣದ್ರಾಕ್ಷಿಗೆ ವಿಫುಲವಾದ ಮಾರುಕಟ್ಟೆ ಇದೆ. ಹೀಗಾಗಿ ತೊರವಿ ಗ್ರಾಮದಲ್ಲಿ 35 ಕೋಟಿ ವೆಚ್ಚದಲ್ಲಿ ಶೀತಲ ಗೃಹ ನಿರ್ಮಿಸಲಾಗುತ್ತಿದ್ದು, ಈ ಕಾರ್ಯಕ್ಕೂ ಸಹ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದ ಯತ್ನಾಳ 

CM Basavaraj Bommai Will Be Launched the Works Costing 1000 Crores in Vijayapura grg
Author
First Published Sep 7, 2022, 9:07 PM IST

ವಿಜಯಪುರ(ಸೆ.07):  ಸೆ.9ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಜಯಪುರ ನಗರಕ್ಕೆ ಆಗಮಿಸಲಿದ್ದು, ಅಂದು ಅವರು ನಗರದಲ್ಲಿ 1,000 ಕೋಟಿ ಮೊತ್ತದ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಈಗಾಗಲೇ ಪೂರ್ಣಗೊಂಡ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಹೇಳಿದರು. ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರಾಷ್ಟ್ರೀಯ ಹೆದ್ದಾರಿ-50ರ ಬಳಿ ಇರುವ ಹೈಪರ್‌ ಮಾರ್ಟ್‌ದ ಪಕ್ಕದ ವಿಶಾಲ ಜಾಗೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದರು.

ಈಗಾಗಲೇ ನಗರದಲ್ಲಿ ಪ್ರಗತಿ ಪರ್ವ ಆರಂಭಗೊಂಡಿದ್ದು, ವಿಜಯಪುರದಲ್ಲಿ ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಷ್ಠಾನಗೊಂಡಿರುವ .282.66 ಕೋಟಿ ಮೊತ್ತದ ಕಾಮಗಾರಿಗಳಿಗೆ ಉದ್ಘಾಟನೆ ಮಾಡಲಿದ್ದಾರೆ. ಟೆಂಡರ್‌ ಹಂತದಲ್ಲಿರುವ .172.18 ಕೋಟಿ ಮೊತ್ತದ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ವಿಜಯಪುರ ನಗರದ ಜನತೆಯ ಆಶೀರ್ವಾದದಿಂದ ಆಯ್ಕೆಯಾಗಿ ಅವರಿಗೆ ನೀಡಿದ ಭರವಸೆಯನ್ನು ಈಡೇರಿಸುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ. ನನ್ನ ಕೆಲಸದ ಬಗ್ಗೆ ನನಗೆ ತೃಪ್ತಿ ಇದೆ. ಬರಲಿರುವ ದಿನಗಳಲ್ಲಿ ವಿಜಯಪುರ ನಗರ ಕ್ಷೇತ್ರ ಮಾದರಿ ಕ್ಷೇತ್ರವಾಗಿ ಹೊರ ಹೊಮ್ಮಲಿದೆ ಎಂದು ಹೇಳಿದರು.

ವಿಜಯಪುರದಲ್ಲಿ ಶಿಕ್ಷಕನಿಗಾಗಿಯೇ ದೇಗುಲ ನಿರ್ಮಾಣ, ಶಿಕ್ಷಕ ದೇವರಾದ ಕಥೆ ಇದು!

ವಿಜಯಪುರ ನಗರದ ಗಲ್ಲಿಗಲ್ಲಿಗಳಲ್ಲಿಯೂ ಸಿಸಿ ರಸ್ತೆ ನಿರ್ಮಾಣವಾಗಿದೆ, ಉದ್ಯಾನನವಗಳಲ್ಲಿ ಓಪನ್‌ ಜಿಮ್‌ ನಿರ್ಮಾಣ, ಈಜುಕೊಳಗಳು ನಿರ್ಮಾಣಗೊಂಡಿವೆ. ಲೋಕೋಪಯೋಗಿ ಇಲಾಖೆಯ ವತಿಯಿಂದ 10750 ಲಕ್ಷ ವೆಚ್ಚದಲ್ಲಿ ಮಾಣಿಕಬಾಗ-ಆಶ್ರಮ ರಸ್ತೆ, ಜೊರಾಪುರ ವಾಟರ್‌ ಟ್ಯಾಂಕ್‌-ಜಿಲ್ಲಾ ಕ್ರೀಡಾಂಗಣ, ಮರಾಠಿ ವಿದ್ಯಾಲಯದಿಂದ ವಿಡಿಎ ಕಚೇರಿ ಮಾರ್ಗ ಸೇರಿದಂತೆ ಹಲವಾರು ರಸ್ತೆ ಕಾಮಗಾರಿಗಳು, ಮಹಾನಗರ ಪಾಲಿಕೆ ವತಿಯಿಂದ . 3544.1 ಲಕ್ಷ ವೆಚ್ಚದಲ್ಲಿ ಅಫ್ಜಲಪೂರ್‌ ಟಕ್ಕೆಯ ಮಹಾಬಳೇಶ್ವರ ಕಾಲೋನಿ ಆಂತರಿಕ ರಸ್ತೆ, ಲಕ್ಷ್ಮೀ ನಗರ, ಇಬ್ರಾಹಿಂಪೂರ ಭಾಗದ ಆಂತರಿಕ ರಸ್ತೆ ನಿರ್ಮಾಣ, ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿಯಲ್ಲಿ ಕಾರ್ಮಿಕರ ಮನೆಗಳ ಮೇಲ್ಛಾವಣಿಗಳಿಗೆ ವಾಟರ್‌ ಫಂಲಪಿಂಗ್‌, ರಾಷ್ಟ್ರೀಯ ಹೆದ್ದಾರಿ ರಸ್ತೆಯಡಿಯಲ್ಲಿ . 3500 ಲಕ್ಷ ವೆಚ್ಚದಲ್ಲಿ ಸುಭಾಸಚಂದ್ರ ವೃತ್ತದಿಂದ ಅಕ್ಕಮಹಾದೇವಿ ಮಹಿಳಾ ವಿವಿವರೆಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ವಿಜಯಪುರ ಒಣದ್ರಾಕ್ಷಿಗೆ ವಿಫುಲವಾದ ಮಾರುಕಟ್ಟೆ ಇದೆ. ಹೀಗಾಗಿ ತೊರವಿ ಗ್ರಾಮದಲ್ಲಿ 35 ಕೋಟಿ ವೆಚ್ಚದಲ್ಲಿ ಶೀತಲ ಗೃಹ ನಿರ್ಮಿಸಲಾಗುತ್ತಿದ್ದು, ಈ ಕಾರ್ಯಕ್ಕೂ ಸಹ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು.

ಪಿಓಪಿ ಗಣೇಶ ಗಲಾಟೆಗೆ ಬ್ರೇಕ್ ಹಾಕಿಸಿದ ರಾಜ್ಯದ ಮೊದಲ ಫೈಬರ್ ಗಣೇಶ ಮೂರ್ತಿ!

1628 ಲಕ್ಷ ವೆಚ್ಚದಲ್ಲಿ ಮಹಾನಗರ ಪಾಲಿಕೆಯ ನೂತನ ಕಚೇರಿ ಕಟ್ಟಡವನ್ನು ಹಾಗೂ ಸರ್ದಾರ್‌ ವಲ್ಲಭಾಯಿ ಪಟೇಲ್‌ ವಾಣಿಜ್ಯ ಮಳಿಗೆ ಸಂಕೀರ್ಣವನ್ನು ಮತ್ತು ಡಾ.ಬಾಬು ಜಗಜೀವನ್‌ ರಾಂ ಭವನವನ್ನು ಹಾಗೂ ಸರ್ಕಾರಿ ವೀಕ್ಷಣಾಲಯ ಹೊಸ ಕಟ್ಟಡ, ಅಕ್ಕಮಹಾದೇವಿ ಮಹಿಳಾ ವಿವಿ ಆವರಣದಲ್ಲಿ ಅಂಬೇಡ್ಕರ್‌ ಸಮುದಾಯ ಭವನ ಹಾಗೂ ಮಹಿಳಾ ವಸ್ತು ಸಂಗ್ರಹಾಲಯ ಕಟ್ಟಡವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ, ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ. ಪಾಟೀಲ, ಆನಂದ ಸಿಂಗ್‌, ವಿ. ಸೋಮಣ್ಣ, ಮುನಿರತ್ನ ಸೇರಿದಂತೆ ಹಲವಾರು ಸಚಿವರ ದಂಡು ವಿಜಯಪುರಕ್ಕೆ ಆಗಮಿಸಲಿದೆ ಎಂದೂ ತಿಳಿಸಿದರು. ಪಾಲಿಕೆ ಮಾಜಿ ಸದಸ್ಯ ಪರಶುರಾಮ ರಜಪೂತ, ವಿಜಯಕುಮಾರ ಡೋಣಿ, ಚಂದ್ರು ಚೌಧರಿ, ಲಕ್ಷ್ಮಣ ಜಾಧವ, ರಾಘವ ಅಣ್ಣಿಗೇರಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
 

Follow Us:
Download App:
  • android
  • ios