Asianet Suvarna News Asianet Suvarna News

ವಿಜಯಪುರದಲ್ಲಿ ಶಿಕ್ಷಕನಿಗಾಗಿಯೇ ದೇಗುಲ ನಿರ್ಮಾಣ, ಶಿಕ್ಷಕ ದೇವರಾದ ಕಥೆ ಇದು!

ವಿಜಯಪುರ ಜಿಲ್ಲೆ ಗ್ರಾಮವೊಂದರಲ್ಲಿ ಆದರ್ಶ ಶಿಕ್ಷಕರೊಬ್ಬರಿಗೆ ಜನ್ರು ನೀಡುತ್ತಿರೋ ಗೌರವವನ್ನ ನೀವು ನೋಡಿದ್ರೆ ಖಂಡಿತ ಹುಬ್ಬೇರಿಸ್ತೀರಿ. ಇಲ್ಲಿ ತಮ್ಮ ನೆಚ್ಚಿನ ಶಿಕ್ಷಕರಿಗೆ ದೇವಸ್ಥಾನ ಕಟ್ಟಿ ಪೂಜಿಸುತ್ತಿದ್ದಾರೆ.

temple constructed for teacher in vijayapura gow
Author
First Published Sep 5, 2022, 7:42 PM IST

ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಸೆ. 5) : ಶಿಕ್ಷಕರ ದಿನಾಚರಣೆಯ ದಿನ ಆದರ್ಶ ಶಿಕ್ಷಕರನ್ನ ಗುರುತಿಸುವ ಸರ್ಕಾರ ಅವರಿಗೆ ಸನ್ಮಾನ, ಪ್ರಶಸ್ತಿ ನೀಡಿ ಕೈ ತೊಳೆದುಕೊಳ್ಳುತ್ತೆ. ಆದ್ರೆ ವಿಜಯಪುರ ಜಿಲ್ಲೆ ಗ್ರಾಮವೊಂದರಲ್ಲಿ ಆದರ್ಶ ಶಿಕ್ಷಕರೊಬ್ಬರಿಗೆ ಜನ್ರು ನೀಡುತ್ತಿರೋ ಗೌರವವನ್ನ ನೀವು ನೋಡಿದ್ರೆ ಖಂಡಿತ ಹುಬ್ಬೇರಿಸ್ತೀರಿ. ಇಲ್ಲಿ ತಮ್ಮ ನೆಚ್ಚಿನ ಶಿಕ್ಷಕರಿಗೆ ದೇವಸ್ಥಾನ ಕಟ್ಟಿ ಪೂಜಿಸುತ್ತಿದ್ದಾರೆ. ಪ್ರತಿ ನಿತ್ಯ ಶಿಕ್ಷಕ ಮೂರ್ತಿ ಮುಂದೆ ಶ್ರದ್ಧಾ ಭಕ್ತಿಯಿಂದ ಭಜನೆ ಮಾಡ್ತಿದ್ದಾರೆ.  ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗ ಗ್ರಾಮದಲ್ಲಿ ಅಪರೂಪದ ದೇಗುಲ ಇದೆ. ಗ್ರಾಮದಲ್ಲಿ ಹಿಂದೆ ಶಿಕ್ಷಕರಾಗಿದ್ದ ರೇವಣಸಿದ್ದಪ್ಪ ಮಾಸ್ತರ್‌ ಅನ್ನೋರೆ ಈ ಗ್ರಾಮದಲ್ಲಿ ಇಂದು ದೇವರಾಗಿ ನೆಲೆನಿಂತಿದ್ದಾರೆ. ನಿತ್ಯ ದೇಗುಲದಲ್ಲಿ ಇವರಿಗೆ ಗ್ರಾಮಸ್ಥರು ಪೂಜೆ, ಪುನಸ್ಕಾರ ಸಲ್ಲಿಸುತ್ತಿದ್ದಾರೆ. ದೇಗುಲದಲ್ಲಿ ದೇವರಿಗೆ ಪೂಜೆ ನಡೆದಂತೆ ಗ್ರಾಮದಲ್ಲಿ ಶಿಕ್ಷಕರಾಗಿದ್ದ ರೇವಣಸಿದ್ದಪ್ಪ ಮಾಸ್ತರರ ಮೂರ್ತಿಗೆ ಇಲ್ಲಿ ನಿತ್ಯ ಪೂಜೆ ನಡೆಯುತ್ತೆ. ನಿತ್ಯ ನೂರಾರು ಜನರು ರೇವಣಸಿದ್ದಪ್ಪ ಮಾಸ್ತರರ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಮನಗೂಳಿಯಲ್ಲಿ ಹುಟ್ಟಿ ಅಥರ್ಗದಲ್ಲಿ ದೇವರಾದ ಮಾಸ್ತರ್..!
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ 1889 ರಲ್ಲಿ ಜನಿಸಿದ ರೇವಣಸಿದ್ದಪ್ಪ ಐಹಿರಸಂಗ‌ ಮಾಸ್ತರರು ಇಂದು ಅಥರ್ಗಾ ಗ್ರಾಮದಲ್ಲಿ ಸಾಕ್ಷಾತ್ ದೇವರಾಗಿದ್ದಾರೆ. ಶಿವಪ್ಪ ಲಕ್ಷಿಂಬಾಯಿ ದಂಪತಿಯ ಹೆಮ್ಮೆಯ ಪುತ್ರನಾದ ರೇವಣಸಿದ್ದಪ್ಪ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಕೇವಲ ಆರು ವರ್ಷ ಸೇವೆ ಸಲ್ಲಿಸಿದ್ದಾರೆ. ರೇವಣಸಿದ್ದಪ್ಪ ಮಾಸ್ತರ ಮಕ್ಕಳಿಗೆ ಒಳ್ಳೆಯ ಶಿಕ್ಷಕನಾಗಿ ಆರು ವರ್ಷದಲ್ಲಿ ಅಪಾರವಾದ ಅಭಿಮಾನಿಗಳನ್ನು ಹೊಂದಿದ್ದಾರೆ. ಮೂರು ವರ್ಷ ಹುಟ್ಟಿದ ಊರು ಮನಗೂಳಿಯಲ್ಲಿ ಸೇವೆ ಸಲ್ಲಿಸಿದರೆ. ಇನ್ನೂ ಮೂರು ವರ್ಷ ಅಥರ್ಗಾ ಗ್ರಾಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಈ ಮೂರೆ ವರ್ಷ ಅವಧಿಯಲ್ಲಿ ಇಡಿ ಊರೆ ಇವರನ್ನು ಇವತ್ತು ದೇವಸ್ಥಾನದಲ್ಲಿ ಕೂಡಿಸಿ ಇಟ್ಟಿದ್ದಾರೆ. 

ಮನೆ-ಅಂಗಡಿಗಳಲ್ಲಿ ಪೂಜೆ, ಮಕ್ಕಳಿಗೆ ಶಿಕ್ಷಕನ ಹೆಸರು..!
ಅಲ್ಲದೆ ಮನೆ ಮನೆಯಲ್ಲಿ, ಅಂಗಡಿಗಳಲ್ಲಿ ಈ ರೇವಣಸಿದ್ದಪ್ಪ ಅವರ ಭಾವಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತದೆ. ಅಲ್ಲದೆ ಹುಟ್ಟು ಮಕ್ಕಳ್ಳಿಗೆ ಇವರ ಹೆಸರನ್ನು ಇಡಲಾಗುತ್ತದೆ. ಊರಲ್ಲಿ ಬಹುತೇಕರ ಹೆಸರು ರೇವಣ್ಣ, ರೇವಣಸಿದ್ದಪ್ಪ, ರೇವಣಸಿದ್ದೇಶ್ವರ ಅಂತಾ ಇರೋದು ಅಚ್ಚರಿಯ ವಿಚಾರ..

ಗ್ರಾಮದಲ್ಲಿ ದಾರ್ಶನಿಕರಾಗಿ ನಿಂತ ಶಿಕ್ಷಕ ರೇವಣಸಿದ್ಧಪ್ಪ..!
ಅವರು ನಮ್ಮ ಗ್ರಾಮವನ್ನು ತಿದ್ದಿ ತೀಡಿ,ಸಮಾನತೆಯ ಪಾಠವನ್ನು ಮಾಡಿದ ದಾರ್ಶನಿಕ, ಅವರ ಆದರ್ಶ, ಜೀವನ ಶೈಲಿಯನ್ನು ರೂಢಿಸಿಕೊಂಡು ಹೋದರೆ ಜೀವನದಲ್ಲಿ ಯಶಸ್ಸು ಕಂಡಿತ ಅನ್ನೋದು ಅಥರ್ಗ ಗ್ರಾಮದ ಪ್ರತಿಯೊಬ್ಬರ ಮಾತಾಗಿದೆ. ಇಂದಿಗು ರೇವಣಸಿದ್ದ ಮಾಸ್ತರರು ನೀಡಿದ ಮಾರ್ಗದರ್ಶನದಲ್ಲೆ ಊರಿನ ಜನರು ನಡೆಯುತ್ತಿದ್ದಾರೆ ಅನ್ನೋದು ಕೂಡ ಅಷ್ಟೇ ಅಚ್ಚರಿಯ ಸಂಗತಿ..

ಶಿಕ್ಷಕರು ದೇವರಾಗಿ ನೆಲೆನಿಂತಿದ್ದು ಹೇಗೆ.!?
1919 ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಆರಂಭಿಸಿದ ರೇವಣಸಿದ್ದಪ್ಪ 1922 ಕ್ಕೆ ಅಥರ್ಗಾ ಗ್ರಾಮಕ್ಕೆ ಬಂದಿದ್ದಾರೆ. ಇಲ್ಲಿ ಬಂದ ನಂತರ ಊರಿನಲ್ಲಿದ್ದ ಮೂಡನಂಭಿಕೆಗಳನ್ನು ಹೊಗಲಾಡಿಸಲು ಪ್ರಯತ್ನ ಸುರು ಮಾಡಿದ್ದಾರೆ. ಅಚ್ಚು-ಮೆಚ್ಚಿನ ಮಕ್ಕಳಿಗೆಪಾಠ ಹೇಳಿಕೊಡುತ್ತಾ, ಊರಿನಲ್ಲಿ ಇದ್ದ ದೆವ್ವ-ಭೂತಗಳನ್ನು ಹೊಗಲಾಡಿಸಲು ಶ್ರಮ ಪಟ್ಟಿದ್ದಾರೆ.   ಪಂಚಮಿಗೆ ಈ ಊರಿನಲ್ಲಿಸಗಣಿ ಮತ್ತು ರಾಡಿ, ಕೆಸರಿನಿಂದ ಹಬ್ಬವನ್ನು ಆಚರಿಸುತ್ತಿದ್ದರು. ಒಂದು ದಿನ ಇವರು ಧ್ಯಾನಕ್ಕೆ ಕೂಳಿತಾಗ ಸಗಣಿ ಹಚ್ಚಲು ಬಂದಜನರಿಗೆ ಇವರು ಹುಲಿ ಕಂಡತೆ ಆಯಿತಂತೆ. ಅಂದಿನಿಂದ ಅಥರ್ಗಾ ಗ್ರಾಮದಲ್ಲಿ ಸಗಣಿ ಮತ್ತು ರಾಡಿ ಬಿಟ್ಟು ಬಣ್ಣ ಆಡುವದು ಶುರುವಾಯಿತಂತೆ. ಅಂದಿನಿಂದ ಇವರು ಕೇವಲ ಶಿಕ್ಷಕರಲ್ಲ ದೇವರು ಅನ್ನೋ ಅಭಿಪ್ರಾಯಕ್ಕೆ ಬಂದರಂತೆ ಊರ ಜನರು..

ರೇವಣಸಿದ್ದಪ್ಪರ ಶಿಸ್ತಿನ ಸಿಪಾಯಿ, ಅವರಿಗಿತ್ತು ದೈವ ಶಕ್ತಿ..!
ಕೇವಲ 36 ವರ್ಷ ಬದುಕಿದ್ದ ರೇವಣಸಿದ್ದಪ್ಪ ಮಾಸ್ತರ 1925ರಲ್ಲಿ ತೀರಿಕೊಂಡರು. ಇವರ ದೈವ ಭಕ್ತಿ ಇತ್ತು. ಸದಾಕಾಲವೂ ಧ್ಯಾನದಲ್ಲಿ ಮಗ್ನರಾಗಿರುತ್ತಿದ್ದರು. ದೇವರ ಭಜನೆ, ಧ್ಯಾನ, ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಕೊಡುತ್ತಿದ್ದರು. ಜೊತೆ ಜೊತೆಗೆ ಅವರದಲ್ಲಿ ದೈವ ಶಕ್ತಿಯು ಅಡಗಿತ್ತು.. ತಾವು ಶಿಸ್ತಿನ ಸಿಪಾಯಿಯಾಗಿದ್ದರು ಅಲ್ಲದೇ, ಮಕ್ಕಳನ್ನು ಶಿಸ್ತಿನ ಸಿಪಾಯಿಗಳನ್ನಾಗಿ ರೆಡಿ ಮಾಡಿದ್ದರು.

ಎನ್ಇಪಿ ಜಾರಿಗೆ ಶಿಕ್ಷಕರ ಕೊಡುಗೆ ನಿರ್ಣಾಯಕ: ಬೊಮ್ಮಾಯಿ

ರೇವಣಸಿದ್ದಪ್ಪ ಮಾಸ್ತರರ ಶಕ್ತಿ, ಗ್ರಾಮಸ್ಥರಿಗೆ ಸಿದ್ದಿ..!
ಉದ್ಯೋಗ , ಶಿಕ್ಷಣ ಯಾವುದೇ ಕೆಲವು ಈ ಶಿಕ್ಷಕರ ದಯೆಯಿಂದ ನಮಗೆ ಸಿದ್ದಿಯಾಗುತ್ತಿದೆ ಅನ್ನೋದು ಸ್ಥಳೀಯರ ಮಾತು ಇಲ್ಲಿ ನಿತ್ಯವು ಮುಂಜಾನೆ ಸಂಜೆ ಪೂಜೆಯನ್ನು ಸಲ್ಲಿಸುತ್ತಾರೆ. ಅಲ್ಲದೆ ಜಿಲ್ಲೆ ಮತ್ತು ರಾಜ್ಯದಿಂದ ಹಲವರು ಈ ಶಿಕ್ಷಕರ ದೇವಸ್ಥಾನವನ್ನು ನೋಡಲು ಬರುತ್ತಾರೆ.

Teachers Dayಗೆ ಹೊಸ ಯೋಜನೆ ಘೋಷಿಸಿದ ಪ್ರಧಾನಿ ಮೋದಿ, ದೇಶದ 14,500 ಶಾಲೆಗಳ ಉನ್ನತೀಕರಣ!

 

ಶಿವರಾತ್ರಿಯ ದಿನ ನಡೆಯುತ್ತೆ ಶಿಕ್ಷಕನಿಗೆ ಜಾತ್ರೆ..!
 ಪ್ರತಿ ವರ್ಷ ಶಿವರಾತ್ರಿದಿನ ಇಲ್ಲಿ ಜಾತ್ರೆ ನಡೆಯುತ್ತಿದೆ. ಜಾತ್ರೆ ದಿವಸ ರೇವಣಸಿದ್ದಪ್ಪ ಮಾಸ್ತರರ ಅಡ್ಡ ಪಲ್ಲಕಿ ಉತ್ಸವ ಮಾಡುತ್ತಾರೆ. ಶ್ರಾವಣ ಮಾಸದಲ್ಲಿಇಲ್ಲಿ ಒಂದು ತಿಂಗಳು ಪ್ರತಿ ದಿನ ಭಜನೆ ಮತ್ತು ಕೀರ್ತನೆಗಳು, ನಡೆಯುತ್ತವೆ.  ಮಕ್ಕಳು ಭಕ್ತಿ ಯಿಂದ ಇಲ್ಲಿ ಪಾರ್ಥನೆ ಮಾಡುತ್ತಾರೆ.

Follow Us:
Download App:
  • android
  • ios