ಪಿಓಪಿ ಗಣೇಶ ಗಲಾಟೆಗೆ ಬ್ರೇಕ್ ಹಾಕಿಸಿದ ರಾಜ್ಯದ ಮೊದಲ ಫೈಬರ್ ಗಣೇಶ ಮೂರ್ತಿ!
ಪಿಓಪಿ ಗಣೇಶ ಗಲಾಟೆಗೆ ಬ್ರೇಕ್ ಹಾಕಿಸಿದ ರಾಜ್ಯದ ಮೊದಲ ಫೈಬರ್ ಗಣೇಶ ಮೂರ್ತಿ. ಫಲ ಕೊಡ್ತು ಮಾಜಿ ಸಚಿವ ಅಪ್ಪು ಹೊಸ ಪ್ರಯತ್ನ. ಈ ಪರಿಸರ ಸ್ನೇಹಿ ಫೈಬರ್ ಗಣೇಶನ ವಿಶೇಷತೆ ಏನು?
ವರದಿ: ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಸೆ. 4) : ಗಣೇಶೋತ್ಸವ ಪ್ರಾರಂಭವಾಗುತ್ತಲೇ ಪಿಓಪಿ ಹಾಗೂ ಮಣ್ಣಿನ ಮೂರ್ತಿಗಳ ಕುರಿತು ಗೊಂದಲವೂ ಜೊತೆಗೂಡಿ ಬರುತ್ತದೆ. ಸರಕಾರ ಮಣ್ಣಿನ ಗಣಪತಿ ಎಂದ್ರೆ ಭಕ್ತರು ಸುಂದರವಾಗಿ ಕಾಣಿಸೋ ಪಿಓಪಿ ಗಣೇಶ ಮೂರ್ತಿ ಎನ್ನುತ್ತಾರೆ. ಈ ಗೊಡವೆಯೇ ಬೇಡಾ ಎಂದು ನಗರದ ಗಣೇಶ ಮಹಾಮಂಡಳಿ ಇಡೀ ರಾಜ್ಯದಲ್ಲಿಯೇ ಮೊದಲ ಹೊಸ ಐಡಿಯಾ ಕಂಡುಕೊಂಡು ಅದರಲ್ಲಿ ಯಶಸ್ವಿಯಾಗಿದೆ. ಈ ಮಂಡಳಿಯ ಹೊಸ ಐಡಿಯಾಗೆ ಫೀದಾ ಆಗಿ ಹಲವು ಗಣೇಶ ಉತ್ಸವ ಮಂಡಳಿಗಳು ಕೂಡಾ ಪಾಲಿಸುತ್ತಿವೆ. ಈಗ ಈ ಹೊಸ ಐಡಿಯಾ ಎಲ್ಲೇಡೆ ಫೇಮಸ್ ಆಗುವತ್ತ ಸಾಗುತ್ತಿದೆ. ನಗರದಲ್ಲಿನ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಲ್ಲಿ ಇರುವ ಗಣೇಶ ಉತ್ಸವ ಮಂಡಳಿಗಳ ಮಹಾ ಮಂಡಳಿ ಪರಿಸರ ಸ್ನೇಹಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಸೈ ಎನ್ನಿಸಿಕೊಂಡಿದೆ. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಇವರ ನೇತೃತ್ವದಲ್ಲಿ ನಡೆಯುತ್ತಿರುವ ಮಹಾಮಂಡಳವು ಕಳೆದ ಐದು ವರ್ಷಗಳ ಹಿಂದೆ ಪಿಓಪಿ ಹಾಗೂ ಮಣ್ಣಿನ ಮೂರ್ತಿ ಜಟಾಪಟಿಯನ್ನು ಗಮನಿಸಿ ಪರಿಸರ ಸ್ನೇಹಿ ಗಣೇಶ ಪ್ರತಿಷ್ಠಾಪಿಸಲು ಯೋಚಿಸುತ್ತಿದ್ದಾಗ ಹೊಳೆದಿದ್ದೆ ಪೈಬರ್ ಗಣೇಶ ಮೂರ್ತಿ ಪ್ರತಿಷ್ಠಾಪಿಸೋ ಐಡಿಯಾ.
ಏನಿದು ಫೈಬರ್ ಗಣೇಶ ಮೂರ್ತಿ..!?
ನೋಡಲು ಥೇಟ್ ಪಿಓಪಿ ಗಣೇಶ ಮೂರ್ತಿ ತರಾ ಕಂಡ್ರೂ ಇದು ಪಕ್ಕಾ ಪರಿಸರ ಸ್ನೇಹಿ ಫೈಬರ್ ಗಣೇಶ. ಕಳೆದ ಐದು ವರ್ಷಗಳ ಕಾಲ ಈ ಗಣೇಶ ನನ್ನು ಪ್ರತಿಷ್ಠಾಪಿಸಿ ಒಂಭತ್ತು ದಿನಗಳ ಕಾಲ ಪೂಜಿಸಲಾಗುತ್ತಿದೆ. ಈ ಪೈಬರ್ ಗಣೇಶ ಮೂರ್ತಿ ಎದುರು ಮಣ್ಣಿನ ಗಣಪತಿ ಪ್ರತಿಷ್ಠಾಪಿಸಿ ಅದನ್ನು ಒಂಬತ್ತು ದಿವಸಗಳ ಬಳಿಕ ವಿಸರ್ಜನೆ ಮಾಡಲಾಗುತ್ತದೆ. ಬಳಿಕ ಫೈಬರ್ ಗಣೇಶನನ್ನು ಸುರಕ್ಷಿತವಾಗಿ ತೆಗೆದಿಡಲಾಗುತ್ತದೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಬಳಕೆ ಮಾಡಿದ ಬಳಿಕ ಮತ್ತೆ ರಿಸೈಕಲ್ ಮಾಡಬಹುದಾಗಿದೆ.
ರಾಜ್ಯದ ಮೊದಲ ಪ್ರಯೋಗ ಯಶಸ್ವಿ..!
ಇಡೀ ರಾಜ್ಯದಲ್ಲಿಯೇ ಮೊದಲ ಪ್ರಯೋಗ ಯಶಸ್ವಿಯಾಗಿದ್ದು ಇದನ್ನು ಕಂಡ ವಿಜಯಪುರ ನಗರದ ಪ್ರಮುಖ ಗಣೇಶ ಮಂಡಳಿಗಳು ಮಹಾಮಂಡಳದ ಹಾದಿಯಲ್ಲೇ ಸಾಗುತ್ತಿವೆ. ಈಗಾಗಲೇ ಹತ್ತಕ್ಕೂ ಹೆಚ್ಚು ಮಂಡಳಿಗಳು ಪೈಬರ್ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಮ್ (asianetsuvarnanews.com) ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಈ ಸಂಖ್ಯೆ ಹೆಚ್ಚಿಸುವತ್ತ ಪ್ರಯತ್ನಿಸಲಾಗುತ್ತಿದೆ ಎಂದಿದ್ದಾರೆ.
ಫೈಬರ್ ಗಣೇಶನ ಜೊತೆಗೆ ಸೆಲ್ಫಿಗೆ ಮುಗಿಬೀಳ್ತಿರೋ ಭಕ್ತರು.!
ಈ ಗಣೇಶ ಮೂರ್ತಿ ನೋಡಲು ಬಂದವರು ಸೆಲ್ಪಿ, ಫೊಟೊ ತೆಗೆದುಕೊಳ್ಳಲು ಮುಗಿ ಬಿಳುತ್ತಿದ್ದಾರೆ. ಗಣೇಶೋತ್ಸವ ಬಳಿಕ ಫೈಬರ್ ಗಣೇಶನಿಗೆ ನಿರ್ಮಿಸಿರುವ ಕೊಣೆಯಲ್ಲಿ ಸಂಕಷ್ಟಿ ಸಮಯದಲ್ಲಿ ಪೂಜಿಸಲಾಗುತ್ತದೆ. ಬಿಸಿಲು ಮಳೆಗೆ ಏನು ಆಗದ ಕಾರಣ ವಿಜಯಪುರದಲ್ಲಿ ಸಾಕಷ್ಟು ಮಂಡಳಿಗಳು ಮಹಾಮಂಡಳದ ಹಾದಿಯಲ್ಲೇ ಸಾಗಿ ಪರಿಸರ ರಕ್ಷಿಸುವ ಸಲುವಾಗಿ ಈ ಗಣೇಶ ಪ್ರತಿಷ್ಠಾಪಿಸಲು ಮುಂದಾಗುತ್ತಿವೆ.
Gadag; ಭಾವೈಕ್ಯತೆಯ ಗಣೇಶೋತ್ಸವಕ್ಕೆ ಸಾಕ್ಷಿಯಾದ ಕಳಸಾಪುರ
20 ವರ್ಷಗಳ ಕಾಲ ಯಾವುದೇ ನಿರ್ವಹಣೆ ಬೇಕಾಗಿಲ್ಲ..!
ಈ ಫೈಬರ್ ಗಣೇಶನ ಮೂರ್ತಿಗೆ ಇಪ್ಪತ್ತು ವರ್ಷಗಳ ಕಾಲ ಯಾವುದೇ ನಿರ್ವಹಣೆ ಬೇಕಿಲ್ಲ, ನೋಡಲು ಸುಂದರವಾಗಿರುತ್ತದೆ. ಪಿಓಪಿ ಗಣೇಶ ಮೂರ್ತಿ ಇರೊ ಹಾಗೆ ಇರೊದ್ರಿಂದ ಭಕ್ತರ ಮನ ಗೆಲ್ಲುತ್ತಿದೆ. ಇನ್ನೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ನೇತೃತ್ವದಲ್ಲಿ ನಡೆಯುತ್ತಿರುವ ಮಹಾ ಮಂಡಳದ ಪೈಬರ್ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲು ಒಂದೊಂದು ಗಣೇಶ ಮಂಡಳಿಗಳು ಮುಂದೆ ಬರುತ್ತಿದ್ದು ಇನ್ನೂ ಹೆಚ್ಚಿನ ಸಂಖ್ಯೆಯ ಪೈಬರ್ ಗಣೇಶ ಮೂರ್ತಿಗಳು ಸದ್ಯದಲ್ಲೇ ಕಾಣಸಿಗಲಿವೆ.
ತಗಡಿನ ಶೆಡ್‌ನಲ್ಲಿ ಸಂತ್ರಸ್ತರ ಗಣೇಶೋತ್ಸವ; ಸರ್ಕಾರಕ್ಕೆ ಒಳ್ಳೆ ಬುದ್ಧಿ ಕೊಡಲಿ ಎಂದು ಪ್ರಾರ್ಥನೆ
ಫೈಬರ್ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಆಸಕ್ತಿ ತೋರಿಸುತ್ತಿರುವ ಮಂಡಳಗಳು..!
ಅತ್ತ ಪಿಓಪಿ ಗಣೇಶ ಮೂರ್ತಿ ಗಲಾಟೆ ಗೊಡವೇಯೆ ಬೇಡಾ ಎಂದು ಮಹಾರಾಷ್ಟ್ರದಿಂದ ತಂದಿರುವ ಫೈಬರ್ ಗಣೇಶ ಪರಿಸರ ಸ್ನೇಹಿಯಾಗಿದ್ದು, ಪರಿಸರ ರಕ್ಷಣೆಗೆ ಪ್ರತಿ ವರ್ಷ ಮೂರ್ತಿಗಾಗಿ ಖರ್ಚು ತಗ್ಗಿಸಲು ಕೂಡಾ ಸಹಾಯಕ ವಾಗಿರೋದ್ರಿಂದ ಗುಮ್ಮಟನಗರಿ ಗಣೇಶ ಮಂಡಳಿಗಳು ಫೈಬರ್ ಗಣೇಶನತ್ತ ಮುಖಮಾಡುತ್ತಿವೆ. ಪರಿಸರ ರಕ್ಷಿಸಲು ಮುಂದಾಗುತ್ತಿವೆ.