ಕೆಲ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ತುಂಬಿದ ಕೆಆರ್‌ಎಸ್‌ಗೆ ಜು.20 ರಂದು ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ

ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ(ಜು.18): ಕೆಲ ದಿನಗಳಿಂದ ಕಾವೇರಿ ಜಲಾನಯನ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೆಆರ್‌ಎಸ್ ಜಲಾಶಯ ಭರ್ತಿಯಾಗಿದೆ. ತುಂಬಿದ ಕೆಆರ್‌ಎಸ್‌ಗೆ ಜು.20 ರಂದು ಸಿಎಂ ಬಸವರಾಜ ಬೊಮ್ಮಾಯಿ ಬಾಗಿನ ಅರ್ಪಿಸಲಿದ್ದಾರೆ. ಬಸವರಾಜ ಬೊಮ್ಮಾಯಿ(Basavaraj Bommai) ಎರಡನೇ ಬಾರಿಗೆ ಕೆಆರ್‌ಎಸ್ ಜಲಾಶಯ(KrishnaRajaSagara Dam)ಕ್ಕೆ ಬಾಗಿನ ಸಮರ್ಪಿಸುತ್ತಿದ್ದಾರೆ. ಜು.20 ರಂದು ಮೈಸೂರಿನ ಚಾಮುಂಡಿ ಬೆಟ್ಟ(Chamundeshwari Temple)ದಲ್ಲಿ ಪೂಜೆ ಸಲ್ಲಿಸಿದ ಬಳಿಕ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲಿದ್ದಾರೆ. ಬಳಿಕ 11:50ಕ್ಕೆ ಕೆಆರ್‌ಎಸ್ ಹೆಲಿಪ್ಯಾಡ್‌ಗೆ ಬಂದಿಳಿಯಲಿರುವ ಸಿಎಂ ಬೊಮ್ಮಾಯಿ ರಸ್ತೆ ಮಾರ್ಗವಾಗಿ ಕೃಷ್ಣರಾಜಸಾಗರ ಅಣೆಕಟ್ಟೆಗೆ ಬಂದು ಮಧ್ಯಾಹ್ನ 12:10ರ ಶುಭ ಮುಹೂರ್ತದಲ್ಲಿ ಕಾವೇರಿ ಮಾತಗೆ ಬಾಗಿನ ಸಮರ್ಪಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್(Helicopter) ಮೂಲಕ ಬೆಂಗಳೂರಿ (Banglore)ಗೆ ವಾಪಾಸ್ ಆಗಲಿದ್ದಾರೆ.

ಕೆಆರ್‌ಎಸ್‌ಗೆ‌ ಎರಡನೇ ಬಾರಿ ಬಾಗಿನ ಅರ್ಪಿಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‌ಕಳೆದ ವರ್ಷ ಅಕ್ಟೋಬರ್‌ನಲ್ಲಿ ಬಾಗಿನ ಅರ್ಪಿಸಿದ್ದರು. ಈ ಬಾರಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭರ್ಜರಿ ಮಳೆಬಿದ್ದ ಹಿನ್ನೆಲೆ ಜಲಾಶಯಕ್ಕೆ ಭಾರೀ ಪ್ರಮಾಣದ ನೀರು ಹರಿದುಬಂದಿದ್ದು ಕೆಆರ್‌ಎಸ್ ಡ್ಯಾಂ ಅವಧಿ ಮುನ್ನ ಭರ್ತಿಯಾಗಿದೆ. ಡ್ಯಾಂ ಇತಿಹಾಸದಲ್ಲಿ ಜುಲೈ ತಿಂಗಳಲ್ಲಿ ಭರ್ತಿಯಾಗಿರುವುದು 6 ಬಾರಿ. ಜುಲೈ ಎರಡನೇ ವಾರದಲ್ಲಿ ಈವರೆಗೆ ಎರಡು ಬಾರಿ ಕೆಆರ್‌ಎಸ್ ತುಂಬಿದೆ. ಇದನ್ನೂ ಓದಿ: ಭರ್ತಿಯಾದ ಕೆಆರ್‌ಎಸ್ ಜಲಾಶಯ, ರೈತರಲ್ಲಿ ಸಂತಸ, ತಗ್ಗು ಪ್ರ​ದೇ​ಶ​ದ​ಲ್ಲಿ​ರುವವರಿಗೆ

ಸಾಮಾನ್ಯವಾಗಿ ಮಳೆಗಾಲದಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ ಕಳೆದ ವರ್ಷ ಆಗಸ್ಟ್‌ ಕಳೆದರೂ ತುಂಬದೆ ಆತಂಕ ಮೂಡಿಸಿತ್ತು. ಇದೇ ಕಾರಣಕ್ಕೆ ದಸರಾಗೆ ಆಗಮಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರು ಕೆಆರ್‌ಎಸ್‌ನಲ್ಲಿ ಪರ್ಜನ್ಯ ಹೋಮವನ್ನೂ ಮಾಡಿ ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿದ್ದರು. ಕಾಕತಾಳಿಯವೆಂಬಂತೆ ಆ ನಂತರ ಉತ್ತಮ ಮಳೆಯಾಗಿ ಜಲಾಶಯ ಅಕ್ಟೋಬರ್ ತಿಂಗಳಲ್ಲಿ ಭರ್ತಿಯಾಗಿದ್ದನ್ನು ಸ್ಮರಿಸಬಹುದು.

124.80 ಗರಿಷ್ಠ ಮಟ್ಟ ಹೊಂದಿರುವ ಕೆಆರ್‌ಎಸ್ ಜಲಾಶಯದಲ್ಲಿ ಸದ್ಯ 123.36 ಅಡಿ ನೀರು ತುಂಬಿದೆ. 77,586 ಕ್ಯೂಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದ್ದು ಡ್ಯಾಂ‌ನಿಂದ 74,414 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ಕಾವೇರಿ ನದಿ: ಮಂಡ್ಯದ ಪ್ರವಾಸಿ ಸ್ಥಳಗಳಿಗೆ ಸಾರ್ವಜನಿಕ ಪ್ರವೇಶ ನಿಷೇಧ