ಹಡಪದ ಸಮುದಾಯ ಎಸ್ಸಿ ಕೆಟಗರಿಗೆ ಸೇರಿಸಲು ಶ್ರೀಗಳ ಒತ್ತಾಯ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ಹಡಪದ ಸಮುದಾಯದ ಬಗ್ಗೆ ನನಗೆ ಅರಿವಿದೆ, ಮೊದಲು ನೀವೆಲ್ಲ ನೈದರು ಎಂಬ ಸಮುದಾಯದ ಹೆಸರಿನಲ್ಲಿ ಒಟ್ಟಾಗಿದ್ರಿ. 2013ರ ನಂತ್ರ ಅದನ್ನ ತೆಗೆದು ರಾಜಕೀಯಕ್ಕೋಸ್ಕರ ನಿಮ್ಮನ್ನ ವಿಂಗಡಿಸಿದ್ರು. ಆಗಲೇ‌ ನೀವು ಒಗ್ಗಟ್ಟಾಗಬೇಕಿತ್ತು, ಜಾಗೃತರಾಗಬೇಕಿತ್ತು ಎಂದ ಸಿಎಂ ಬೊಮ್ಮಾಯಿ 

CM Basavaraj Bommai Talks Over Hadapad Community Reservation grg

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್‌

ವಿಜಯಪುರ(ಫೆ.01):  ಮುಂಬರುವ ಬಜೆಟ್‌ನಲ್ಲಿ ಹಡಪದ ಅಪ್ಪಣ್ಣ ನಿಗಮ ಘೋಷಣೆ ಮಾಡುವ ಕುರಿತಂತೆ ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು. ಆದಷ್ಟು ಬೇಗನೆ ಈ ಸಮಾಜದ ಕುಲಶಾಸ್ತ್ರ ಅಧ್ಯಯನ ಮಾಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ.

ರಾಜಕೀಯಕ್ಕಾಗಿ ನೈದರು ಸಮುದಾಯ ವಿಂಗಡಿಸಿದ್ರು: ಸಿಎಂ ಬೊಮ್ಮಾಯಿ 

ಮುದ್ದೇಬಿಹಾಳ ತಾಲೂಕಿನ ತಂಗಡಗಿಯಲ್ಲಿ ನಡೆದ ಹಡಪದ ಅಪ್ಪಣ್ಣ ಸಮುದಾಯ ಭವನ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಡಪದ ಸಮುದಾಯದ ಬಗ್ಗೆ ನನಗೆ ಅರಿವಿದೆ, ಮೊದಲು ನೀವೆಲ್ಲ ನೈದರು ಎಂಬ ಸಮುದಾಯದ ಹೆಸರಿನಲ್ಲಿ ಒಟ್ಟಾಗಿದ್ರಿ. 2013ರ ನಂತ್ರ ಅದನ್ನ ತೆಗೆದು ರಾಜಕೀಯಕ್ಕೋಸ್ಕರ ನಿಮ್ಮನ್ನ ವಿಂಗಡಿಸಿದ್ರು. ಆಗಲೇ‌ ನೀವು ಒಗ್ಗಟ್ಟಾಗಬೇಕಿತ್ತು, ಜಾಗೃತರಾಗಬೇಕಿತ್ತು ಎಂದರು. 

ರಾಹುಲ್‌ ಗಾಂಧಿ ತರದವರು ಇದ್ದಿದ್ದರೆ ದೇವರೆ ಕಾಪಾಡಬೇಕಿತ್ತು: ಸಿ.ಟಿ ರವಿ

ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಸಿಎಂ ಆಕ್ರೋಶ 

ಸಣ್ಣ ಸಮುದಾಯಗಳು ಒಕ್ಕಟ್ಟಾಗಿದ್ರೆ ಕೆಲವು ಪಟ್ಟಬದ್ಧ  ಹಿತಾಸಕ್ತಿಗಳಿಗೆ ಅನುಕೂಲ ಆಗೋದಿಲ್ಲ‌ ಎಂದು ಕೆಲವರು ಹೀಗೆ ಮಾಡಿದ್ದಾರೆ ಎನ್ನುವ ಮೂಲಕ ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ ವಿರುದ್ಧ ಸಿಎಂ ಬೊಮ್ಮಾಯಿ ವಾಗ್ದಾಳಿ ನಡೆಸಿದರು. 

ಹಡಪದ ಸಮುದಾಯ ಒಗ್ಗಟ್ಟಾಗಬೇಕು 

ಆದ್ರೆ ಈಗ ನೀವೆಲ್ಲ ಒಗ್ಗಟ್ಟಾಗಿದ್ದೀರಿ ಇನ್ನು ಮುಂದೆ ನಿಮ್ಮ ಶಕ್ತಿ, ಒಕ್ಕಟ್ಟು ನಿಮ್ಮ ಸಮುದಾಯಕ್ಕೆ ಅನುಕೂಲವಾಗಲಿದೆ. ಈ ಭಾಗದ ಅಭಿವೃದ್ಧಿಗೆ ಹಣ ಮೀಸಲು ಇಡ್ತೀನಿ. ವೃತ್ತಿ ಆಧಾರಿತ ಕುಲ ಕಸಬುಗಳನ್ನು ನಿಗಮದ ಮೂಲಕ ಸೇರಿಸಲು ಪ್ರಯತ್ನಿಸಲಾಗುತ್ತಿದೆ. ನಿಮ್ಮ ಸಮಾಜಕ್ಕೆ ನಿಗಮವನ್ನು ಮಾಡಲಾಗುವದು ಎಂದು ಭರವಸೆ ನೀಡಿದರು.

ಬಿಎಸ್ವೈ 1 ಕೋಟಿ, ನಾನು 3 ಕೋಟಿ ಕೊಟ್ಟಿದ್ದೀನಿ: ಬೊಮ್ಮಾಯಿ 

ಈ ಹಿಂದೆ ಸಿಎಂ ಆಗಿದ್ದ ಯಡಿಯೂರಪ್ಪ ಅವರು, ಈ ಕ್ಷೇತ್ರದ ಅಭಿವೃದ್ಧಿಗಾಗಿ ಒಂದು ಕೋಟಿ ಕೊಟ್ಟಿದ್ರು. ನಾನು ಬಂದಮೇಲೆ ಅದನ್ನ ಹೆಚ್ಚಿಸಿ ಮೂರು ಕೋಟಿ ಕೊಟ್ಟಿದ್ದೇನೆ. ಈಗ ಕೊಟ್ಟಿರುವ ಹಣದಲ್ಲಿ ಕಟ್ಟಡ ಮಾಡಿ, ನಾನು ಮುಂದೆ ಮತ್ತೆ ಸಹಕಾರ ಕೊಡುತ್ತೇನೆ ಎಂದರು.  ಹಳ್ಳಿಯಲ್ಲಿರುವ ಕಾಯಕಗಳು, ಬಡಿಗ, ಕುಂಬಾರ ಸೇರಿದಂತೆ ಕಾಯಕಗಳಿಗೆ ಯೋಜನೆ ಮೂಲಕ ಅನುದಾನ ನೀಡಲಾಗುವುದು. ಕಾಯಕ ಆಧಾರಿತ ಕರಕುಶಲ ಯೋಜನೆ ಮಾಡಿ ಪ್ರಥಮವಾಗಿ ಮಾಡಿದ್ದು ನಮ್ಮ ಸರ್ಕಾರ. ಈ ಭಾಗದ ಅಭಿವೃದ್ಧಿಗೆ ನಾವು ಅನುಕೂಲ ಕಲ್ಪಿಸಲಾಗುವುದು ಎಂದರು.

ಪ್ರಧಾನಿ ಮೋದಿ ಸಂಕಲ್ಪದಂತೆ ಪ್ರಾಣಿಗಳ ರಕ್ಷಣೆ: ಸಚಿವ ಪ್ರಭು ಚವ್ಹಾಣ್‌

ಹಡಪದ ಸಮುದಾಯ ಎಸ್ಸಿಗೆ ಸೇರಿಸಲು ಒತ್ತಾಯ 

ಇದಕ್ಕೂ ಮುನ್ನ ಮಾತನಾಡಿದ ಹಡಪದ ಅಪ್ಪಣ್ಣ ಪೀಠದ ಅನ್ನದಾನ ಭಾರತಿ ಅಪ್ಪಣ್ಣ ಶ್ರೀಗಳು, 2ಎ ಕೆಟಗರಿಯಲ್ಲಿರುವ ಹಡಪದ ಸಮುದಾಯವನ್ನ ಎಸ್ಸಿ ಕೆಟಗರಿಗೆ ಸೇರಿಸಬೇಕು. ಹಡಪದ ಸಮುದಾಯ ಲಿಂಗಾಯತ ಸಮುದಾಯದಲ್ಲಿದ್ದರು ನಮ್ಮನ್ನ ಕೀಳಾಗಿ ಕಾಣಲಾಗ್ತಿದೆ, ಹೀಗಾಗಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗಬೇಕು ನಮ್ಮ ಸಮುದಾಯವನ್ನ ಎಸ್ಸಿಗೆ ಸೇರಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಶಾಸಕರಾದ ಎ.ಎಸ್.ಪಾಟೀಲ ನಡಹಳ್ಳಿ, ದೊಡ್ದನಗೌಡ ಪಾಟೀಲ್, ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ಎಸ್ಪಿ ಆನಂದ ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ಸಿಂಧೆ ಹಾಜರಿದ್ದರು.

Latest Videos
Follow Us:
Download App:
  • android
  • ios