Kolar: ಇನ್ನೂ ಮುಗಿದಿಲ್ಲ ಕ್ಲಾಕ್ ಟವರ್ ವಿವಾದ!
ಅಲ್ಲಿ 75 ವಷ೯ಗಳ ಬಳಿಕ ಭಾರತದ ಬಾವುಟ ಹಾರಿಸಲಾಯ್ತು. ಜಿಲ್ಲಾಡಳಿತ ಸೇರಿದಂತೆ 500ಕ್ಕೂ ಹೆಚ್ಚು ಪೊಲಿಸರನ್ನು ಬಳಸಿಕೊಂಡು ಬಾವುಟ ಹಾರಿಸಲಾಯ್ತು. ನಮ್ಮದೇ ದೇಶದಲ್ಲಿರುವ ಆ ಸೂಕ್ಷ್ಮ ಪ್ರದೇಶದಲ್ಲಿ ಬಾವುಟ ಹಾರಿಸಿದ ಬಳಿಕ ದಿನಕೊಬ್ಬರು ಕಿಡಿ ಹಚ್ಚಿಸಿ ಹೋಗ್ತಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೇಲ್ ಇಲ್ಲಿದೆ ನೋಡಿ.
ವರದಿ : ದೀಪಕ್, ಏಷ್ಯಾನೆಟ್ ಸುವರ್ಣ ನ್ಯೂಸ್ ಕೋಲಾರ.
ಕೋಲಾರ (ಮಾ.27): ಅಲ್ಲಿ 75 ವಷ೯ಗಳ ಬಳಿಕ ಭಾರತದ ಬಾವುಟ ಹಾರಿಸಲಾಯ್ತು. ಜಿಲ್ಲಾಡಳಿತ ಸೇರಿದಂತೆ 500ಕ್ಕೂ ಹೆಚ್ಚು ಪೊಲಿಸರನ್ನು ಬಳಸಿಕೊಂಡು ಬಾವುಟ ಹಾರಿಸಲಾಯ್ತು. ನಮ್ಮದೇ ದೇಶದಲ್ಲಿರುವ ಆ ಸೂಕ್ಷ್ಮ ಪ್ರದೇಶದಲ್ಲಿ ಬಾವುಟ ಹಾರಿಸಿದ ಬಳಿಕ ದಿನಕೊಬ್ಬರು ಕಿಡಿ ಹಚ್ಚಿಸಿ ಹೋಗ್ತಿದ್ದಾರೆ. ಈ ಕುರಿತ ಕಂಪ್ಲೀಟ್ ಡಿಟೇಲ್ ಇಲ್ಲಿದೆ ನೋಡಿ.
ಹರಿಸು ಬಣ್ಣದ ಬಾವುಟವನ್ನು ಕೆಳಗೆ ಇಳಿಸುತ್ತಿರುವ ಜಿಲ್ಲಾಡಳಿತ..ಎಲ್ಲೆಲ್ಲೂ ಪೊಲೀಸರ ಕಣ್ಗಾವಲು. ತಮ್ಮ ಕೋಮಿನ ಬಾವುಟವನ್ನು ಇಳಿಸುತ್ತಿರೋದನ್ನೂ ವೀಕ್ಷಣೆ ಮಾಡ್ತಿರುವ ಯುವಕರು,ಮುಖಂಡರು.ಅಂದಹಾಗೆ ಈ ಎಲ್ಲಾ ಘಟನೆಗಳು ನಡೆದಿದ್ದು ಇದೇ ತಿಂಗಳ 19ನೇ ತಾರೀಖಿನಂದು ಕೋಲಾರದ ನಗರದ ಕ್ಲಾಕ್ ಟವರ್ ಪ್ರದೇಶದಲ್ಲಿ. ಕಳೆದ 75 ವಷ೯ಗಳಿಂದ ಇದೇ ಕ್ಲಾಕ್ ಟವರ್ ನ ಮೇಲೆ ಒಂದೂ ಕೋಮಿನ ಗುರುತಾಗಿರುವ ಹಸಿರು ಬಣ್ಣದ ಬಾವುಟ ಹಾರಾಡುತ್ತಿತ್ತು, ಆದರೆ ಇದು ಸಕಾ೯ರಿ ಜಾಗದಲ್ಲಿರುವ ಪ್ರದೇಶ ಆಗಿರೋದ್ರಿಂದ ಬಾವುಟವನ್ನು ತೆರವು ಮಾಡಿ ಭಾರತದ ತ್ರಿವಣ೯ ಧ್ವಜ ಹಾರಿಸಬೇಕು ಎಂದು ಸಂಸದ ಮುನಿಸ್ವಾಮಿ ಪಟ್ಟು ಹಿಡಿದ ಬಳಿಕ ಜಿಲ್ಲಾಡಳಿತವೇ ಭಾರಿ ಭದ್ರತೆಯೊಂದಿಗೆ ಅಂಜುಮನ್ ಮುಖಂಡರ ಸಮ್ಮುಖದಲ್ಲೇ ಹಸಿರು ಬಣ್ಣದ ಭಾವುಟ ಇಳಿಸಿ,ಭಾರತದ ತ್ರಿವಣ೯ ಹಾರಿಸುವ ಮೂಲಕ ವಿವಾದಕ್ಕೆ ತೆರೆ ಎಳೆದರು.
ಆದರೆ ಇದರ ಲಾಭವನ್ನು ಪಡೆದುಕೊಳ್ತಿರುವ ರಾಜಕೀಯ ಪಕ್ಷಗಳು ಒಂದಿಲ್ಲೊಂದು ಹೇಳಿಕೆ ನೀಡುವ ಮೂಲಕ ಆಗಾಗ ತುಪ್ಪ ಸುರಿಯುವ ಕೆಲಸ ಮಾಡ್ತಿದ್ದಾರೆ.ಇನ್ನು ಇಂದು ಸಂಸದ ತೇಜಸ್ವಿ ಸೂಯ೯ ರೆವಿಧಾನಸೌದದಿಂದ ಕೋಲಾರದ ವರೆಗೂ ಸೈಕಲ್ ಜಾತ ಮಾಡುವ ಮೂಲಕ ಭಾರತದ ಧ್ವಜದ ಪ್ರದಶ೯ನ ಮಾಡಿದ್ರು.ಕ್ಲಾಕ್ ಟವರ್ ವಿವಾದಿತ ಸ್ಥಳ ಆಗಿರೋದ್ರಿಂದ ಅಲ್ಲಿಗೆ ತೇಜಸ್ವಿ ಸೂಯ೯ ಅವರ ಸೈಕಲ್ ಜಾತಾ ಗೆ ಪೊಲೀಸರು ನಿರ್ಬಂಧ ಹಾಕುವ ಮೂಲಕ ಯಾವುದೇ ಗಲಭೆಗೆ ಕಾರಣವಾಗದೆ ರೀತಿ ಕ್ರಮವಹಿಸಿದರು. ಇನ್ನು ಇದೇ ವೇಳೆ ತಮ್ಮ ಪರಿಚಯಸ್ಥರ ಮದುಗೆಂದು ಕೋಲಾರಕ್ಕೆ ಬಂದಿದ್ದ ಮಾಜಿ ಸಿಎಂ ಕುಮಾರಸ್ವಾಮಿಗೆ ಸೈಕಲ್ ಜಾತಾ ಬಗ್ಗೆ ಮಾತನಾಡಿದ್ದಾರೆ. ಕೋಲಾರದಲ್ಲಿ ಹಿಂದು ಮುಸ್ಲಿಂ ಸೌಹಾ೯ದತೆಯಿಂದ ಇದ್ದಾರೆ,ಶಾಂತಿ ಕದಡುವ ಕೆಲಸ ಮಾಡಲು ಬಂದಿದ್ದಾರೆ ಎಂದು ತೇಜಸ್ವಿ ಸೂಯ೯ ವಿರುದ್ದ ಗುಡುಗಿದರು.
Kolar: ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಬಹುದಿನಗಳ ಕನಸು ಕೊನೆಗೂ ನನಸು
ಇನ್ನು ಬೆಂಗಳೂರಿನಿಂದ ಕೋಲಾರಕ್ಕೆ ಬಂದ ಸೈಕಲ್ ಜಾತದಲ್ಲಿ 450 ಹೆಚ್ಚು ಸೈಕಲಿಸ್ಟ್ ಗಳು ಭಾಗಿಯಾಗಿದ್ರು,ಪ್ರತಿ ಸೈಕಲ್ ನಲ್ಲಿ ಬಾವುಟವನ್ನು ಕಟ್ಟಿಕೊಂಡು ಜಿಲ್ಲೆಗೆ ಎಂಟ್ರಿ ಕೊಡ್ತಾ ಇದ್ದಂತೆ ಪಟಾಕಿ ಸಿಡಿಸಿ,ಹೂವಿನ ಸುರಿಮಳೆ ಸುರಿಸು ಕೋಲಾರದ ಗಡಿ ರಾಮಸಂದ್ರದಲ್ಲಿ ಸ್ವಾಗತ ಕೋರಲಾಯ್ತು. ಪೊಲೀಸರು ಕ್ಲಾಕ್ ಟವರ್ ಮಾಗ೯ವನ್ನು ತಡೆದು ಅನ್ಯ ಮಾಗ೯ದಲ್ಲಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ಸಿದ್ದತೆ ಮಾಡಿಕೊಂಡಿದ್ದ ವೇದಿಕೆ ಕಾಯ೯ಕ್ರದವರೆಗೂ ಪೊಲೀಸರು ಬಂದೋಬಸ್ಥ್ ಮೂಲಕ ಕರೆದುಕೊಂಡು ಬಂದರು.
ವೇದಿಕೆಯ ಭಾಷಣದಲ್ಲಿ ಕ್ಲಾಕ್ ಟವರ್ ವಿಚಾರವನ್ನು ಪ್ರಸ್ಥಾಪಿಸಿದ ಸಂಸದ ತೇಜಸ್ವಿ ಸೂಯ೯ ಕ್ಲಾಕ್ ಟವರ್ ನಲ್ಲಿ 75 ವಷ೯ಗಳು ನಂತರ ಭಾರತ್ ಬಾವುಟವನ್ನು ಹಾರಿಸಬೇಕಾಯ್ತು ,ಇಷ್ಟು ವಷ೯ಗಳ ಕಾಲ ಇಲ್ಲಿದ್ದ ಸಂಸದರು ಕೇವಲ ದೆಹಲಿಯಲ್ಲಿ ಮಾತ್ರ ಸಿಗ್ತಿದ್ರು ಅಂತ ಉದ್ದೇಶಿಸಿ ಮಾತನಾಡಿದ್ರು.ಬಳಿಕ ಮಾಜಿ ಸಿಎಂ ಕುಮಾರಸ್ವಾಮಿಗೆ ತಿರುಗೇಟು ನೀಡಿದ ತೇಜಸ್ವಿ ಸೂಯ೯ ಜೆಡಿಎಸ್ ಪಕ್ಷ ಕೊನೆ ಹಂತಕ್ಕೆ ಬಂದು ನಿಂತಿದೆ,ಒಬ್ಬ ಪ್ರಬುದ್ದ ರಾಜಕಾರಣಿ ಈ ರೀತಿ ಮಾತನಾಡಬಾರದಿತ್ತುಸೈಕಲ್ ರ್ಯಾಲಿಯ ಬಗ್ಗೆ ಯುವಕರಿಗೆ ಏನು ಎಂದು ತಿಳಿದಿದೆ,ಬಾವುಟ ಹಾರಿಸಿರುವ ಬಗ್ಗೆ ಜೆಡಿಎಸ್ ನವರ ಸಿದ್ದಾಂತ ಏನು ಅನ್ನೋದನ್ನು ತಿಳಿಸಲು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದರು.
ಇನ್ನು ಕ್ಲಾಕ್ ಟವರ್ ನಲ್ಲಿ ಹಸಿರು ಬಣ್ಣದ ಬಾವುಟ ಇಳಿಸಿ, ಭಾರತದ ಧ್ವಜ ಹಾರಿಸಿರುವ ಬಗ್ಗೆ ಸಂಸದ ಮುನಿಸ್ವಾಮಿ ಒಬ್ಬ ಸಾಂಧಭಿ೯ಕ ಶಿಶು ಎಂದು ಅದಿವೇಶನದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದರು. ಇದಕ್ಕೆ ಮೊದಲ ಬಾರಿಗೆ ರಮೇಶ್ ಕುಮಾರ್ ವಿರುದ್ದ ತಿರುಗೇಟು ನೀಡಿದ ಸಂಸದ ಮುನಿಸ್ವಾಮಿ,ಹೌದು ಕ್ಲಾಕ್ ಟವರ್ ನಲ್ಲಿ ಭಾರತದ ಧ್ವಜ ಹಾರಿಸಿದ್ದೇನೆ,ಅವರಿಗೆ ಅದು ದೇಶದ್ರೋಹ ಕೆಲಸ ಅಂತ ಅನಿಸಿದರೆ ಇನ್ಮುಂದೆ ಪ್ರತಿದಿನಾ ದೇಶದ್ರೋಹ ಕೆಲಸ ಮಾಡ್ತೇನೆ. ಅತ್ಯಾಚಾರ ಮಾಡುವ ವೇಳೆ ತಪ್ಪಿಸಿಕೊಳ್ಳು ಆಗದೇ ಹೋದರೆ ಅತ್ಯಾಚಾರವನ್ನು ಅನುಭವಿಸು ಎಂದು ಅದಿವೇಶನದಲ್ಲಿ ಮಾತನಾಡಿರೋದನ್ನು ಗಮನಿಸಿದ್ದೇನೆ.
ಏಪ್ರಿಲ್ನಲ್ಲಿ ಎರಡು KGFಗಳು ರಿಲೀಸ್: ಅಷ್ಟಕ್ಕೂ ಇನ್ನೊಂದು 'ಕೆಜಿಎಫ್' ಯಾವ್ದು ಗೊತ್ತಾ?
ಇದರಲ್ಲೇ ಗೊತ್ತಾಗುತ್ತೆ ಅವರ ಮನಸ್ಥಿತಿ ಏನು ಎಂದು,ಇಲ್ಲಿ ಯಾರು ಸಾಂಧಭಿ೯ಕ ಶಿಶು ಎಂದು ಗೊತ್ತಿದೆ, ಮುಂದೆ ಇದಕ್ಕೇ ಸರಿಯಾಗಿ ತಿರುಗೇಟು ಕೊಡ್ತೇನೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಗೆ ಸಂಸದ ಮುನಿಸ್ವಾಮಿ ತಿರುಗೇಟು ನೀಡಿದರು. ಒಟ್ಟಾರೆ ಕೋಲಾರ್ ಕ್ಲಾಕ್ ಟವರ್ ನ ವಿಚಾರ ಮುಂದಿಟ್ಟುಕೊಂಡು ರಾಜಕಾರಿಣಿಗಳು ತಮ್ಮ ಬೇಳೆ ಬೇಯಿಸಿಕೊಳ್ತಿರೋದಂತು ಸುಳ್ಳಲ್ಲಾ.ಆದ್ರೇ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಎಲ್ಲಾ ಕೋಮಿನ ಜನರು ಒಟ್ಟಾಗಿ ಬಾಳಲಿ ಅನ್ನೋದು ನಮ್ಮ ಆಶಯ ಕೂಡ.