ಸ್ವಚ್ಚತೆ ನಮ್ಮ ಅದ್ಯತೆಯಾಗಬೇಕು: ಎಚ್‌.ವಿ.ಕುಮಾರಸ್ವಾಮಿ

ಶುದ್ಧ ಕುಡಿವ ನೀರು ಸೇವನೆ ಹಾಗೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಸುಧಾರಣೆ ಸಾಧ್ಯ ಎಂದು ತಾ.ಕಾಂಗ್ರೆಸ್‌ ಮುಖಂಡ ಎಚ್‌.ವಿ.ಕುಮಾರಸ್ವಾಮಿ ಹೇಳಿದರು.

Cleanliness should be our priority: HV Kumaraswamy snr

  ಪಾವಗಡ :  ಶುದ್ಧ ಕುಡಿವ ನೀರು ಸೇವನೆ ಹಾಗೂ ಮನೆಯ ಸುತ್ತಮುತ್ತ ಸ್ವಚ್ಛತೆ ಕಾಪಾಡಿಕೊಂಡಾಗ ಮಾತ್ರ ಉತ್ತಮ ಆರೋಗ್ಯ ಸುಧಾರಣೆ ಸಾಧ್ಯ ಎಂದು ತಾ.ಕಾಂಗ್ರೆಸ್‌ ಮುಖಂಡ ಎಚ್‌.ವಿ.ಕುಮಾರಸ್ವಾಮಿ ಹೇಳಿದರು.

ವಿಶ್ವ ಹಿರಿಯ ನಾಗರಿಕ ದಿನಾಚರಣೆ ಅಂಗವಾಗಿ ಹೆಲ್ಪ್ ಸೊಸೈಟಿ, ವೆಂಕಟೇಶ್ವರ ಎಜುಕೇಶನ್ ಸೊಸೈಟಿ ಹಾಗೂ ಎಂ ಎಸ್ ರಾಮಯ್ಯ ಆಸ್ಪತ್ರೆ ವತಿಯಿಂದ ಭಾನುವಾರ ತಾಲೂಕಿನ ವೈ.ಎನ್‌.ಹೊಸಕೋಟೆ ನಗರದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನೆ ನೆರೆವೇರಿಸಿ ಮಾತನಾಡಿದರು.

ವೈದ್ಯರು ದೇವರ ಸಮ. ವೈದ್ಯಯೋ ನಾರಾಯಣ ಹರಿ ಎಂದು ಹೇಳುವಂತೆ ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆ ಯ‌ ವೈದ್ಯರು ಉತ್ತಮ ಸೇವೆ ಸಲ್ಲಿಸುತ್ತಿದ್ದು, ಜನತೆ ಸಹ ಆರೋಗ್ಯದತ್ತ ಹೆಚ್ಚು ಕಾಳಜಿವಹಿಸಬೇಕು ಎಂದರು/

ಜನರಲ್ ಮೆಡಿಸಿನ್, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಸ್ತ್ರೀ ರೋಗ ತಜ್ಞರು, ಮೂಳೆ ಮತ್ತು ಕೀಲು ರೋಗ, ಮಕ್ಕಳ ತಜ್ಞರು, ಚರ್ಮರೋಗ, ಕಣ್ಣಿನ ತಪಾಸಣೆ, ದಂತ, ಬಿಪಿ, ಸಕ್ಕರೆ ಹಾಗೂ ಇಸಿಜಿಗೆ ಸಂಬಂಧಿಸಿದ ನುರಿತ ವೈದ್ಯರು ಆರೋಗ್ಯ ಶಿಬಿರದಲ್ಲಿ ಪಾಲ್ಗೊಂಡು ಚಿಕಿತ್ಸೆ ನೀಡಿದ್ದು, ಆರೋಗ್ಯ ಶಿಬಿರದಲ್ಲಿ 500 ಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು.

ತಾಲೂಕು ಪಿಕಾರ್ಡ್‌ ಬ್ಯಾಂಕ್‌ನ ಮಾಜಿ ಎನ್.ಆರ್ ಅಶ್ವತ್, ಉಮೇಶ್,ಆರೋಗ್ಯ ಶಿಬಿರವನ್ನು ಉದ್ದೇಶಿಸಿ ಮಾತನಾಡಿದರು. ಶಾಂತಿ ಮೆಡಿಕಲ್ ಶಾಪ್ ದೇವರಾಜು,ಸುರೇಂದ್ರ, ವೈ ಎನ್ ಹೊಸಕೋಟೆ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಶಿಬಿರದ ಯಶಸ್ವಿಗೆ ಸಹಕಾರ ನೀಡಿದರು. ಮಾಜಿ ಪುರಸಭೆ ಅಧ್ಯಕ್ಷ ವೇಲುರಾಜು, ಹೆಲ್ತ್‌ ಸೊಸೈಟಿಯ ಅಧ್ಯಕ್ಷ ಮಾನಂ ಶಶಿಕಿರಣ್‌, ಸುರೇಂದ್ರ, ಶಿವನಂದ್, ನಾರಾಯಣಪ್ಪ, ಜಯಕೃಷ್ಣ, ಕೆಟಿ ಹಳ್ಳಿ ರಾಜೇಶ್, ರಾಕೇಶ್, ಶಶಿಕಲಾ ಮತ್ತಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios