Asianet Suvarna News Asianet Suvarna News

ಗಾಂಧಿ ಜಯಂತಿ ಪ್ರಯುಕ್ತ MGNREGA ನೌಕರರ ಸಂಘದಿಂದ ಸ್ವಚ್ಛತಾ ಕಾರ್ಯ

ಗಾಂಧಿ ಜಯಂತಿ ಆಚರಣೆ ಪ್ರಯುಕ್ತ 'ಕರ್ನಾಟಕ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ'ದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ವತಿಯಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಸಸಿಹಿತ್ಲು ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

Cleaning work by MGNREGA Employees Association  occasion of Gandhi Jayanti rav
Author
First Published Oct 3, 2022, 11:31 AM IST

ಮಂಗಳೂರು (ಅ.3) : ಗಾಂಧಿ ಜಯಂತಿ ಆಚರಣೆ ಪ್ರಯುಕ್ತ 'ಕರ್ನಾಟಕ ಮಹಾತ್ಮ ಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ'ದ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮಂಗಳೂರು ವತಿಯಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ಸಹಕಾರದಲ್ಲಿ ಸಸಿಹಿತ್ಲು ಸಮುದ್ರ ಕಿನಾರೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.  ಸಸಿಹಿತ್ಲು ಸಮುದ್ರ ಕಿನಾರೆಯಿಂದ ಸುಮಾರು 50 ಮೂಟೆಯಷ್ಟು ಪ್ಲಾಸ್ಟಿಕ್ ಬಾಟಲ್, ಗಾಜಿನ ಬಾಟಲ್, ಪ್ಲಾಸ್ಟಿಕ್ ಕಸವನ್ನು ಹೆಕ್ಕಿ ಹಳೆಯಂಗಡಿ ಸ್ವಚ್ಛ ಸಂಕೀರ್ಣಕ್ಕೆ ಸಾಗಿಸಲಾಯಿತು.

Gandhi Jayanti 2022: ಜಗತ್ತಿಗೇ ಶಕ್ತಿ ತುಂಬಿದ ಗಾಂಧಿ ಆದರ್ಶಗಳು: ಸಚಿವ ಅಶ್ವತ್ಥ್‌

ಕಾರ್ಯಕ್ರಮದಲ್ಲಿ ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪೂರ್ಣಿಮಾ ಮಾತನಾಡಿ, 'ಗಾಂಧಿ ಕಂಡ ಕನಸಿನಂತೆ ಇದೊಂದು ಮಾದರಿ ಕಾರ್ಯವಾಗಿದ್ದು, ಇನ್ನಷ್ಟು ಸಾಮಾಜಿಕ ಕಳಕಳಿಯ ಕೆಲಸಗಳು ನಿರಂತರವಾಗಿ ಸಾಗಲಿ‌ ಎಂದು ಶುಭಹಾರೈಸಿದರು. ಮೂಲ್ಕಿ, ಮೂಡುಬಿದಿರೆ ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯಾದ ದಯಾವತಿ ಮಾತನಾಡಿ, ನಿಗದಿತ ಗುರಿ ಹಾಗೂ ಛಲ ಇದ್ದಾಗ ಯಶಸ್ಸು ಸಾಧ್ಯ. ನರೇಗಾ ಯಶಸ್ಸಿಗೆ ತಾವೆಲ್ಲರೂ ಕಾರಣೀಭೂತರು. ಯೋಜನೆಯನ್ನು ಜನರಿಗೆ ಮುಟ್ಟಿಸುವ ಮೂಲಕ ಅವರ ಆರ್ಥಿಕ ಸದೃಢತೆಗೆ ಪರೋಕ್ಷವಾಗಿ ನರೇಗಾ ಸಿಬ್ಬಂದಿ ವರ್ಗದವರು ಕಾರಣರಾಗುತ್ತಾರೆ. ಗಾಂಧಿ ಜಯಂತಿಯಂದು ಎಲ್ಲೆಡೆ ಸ್ಚಚ್ಛತಾ ಕಾರ್ಯಕ್ರಮ ನಡೆಯುತ್ತಿದೆ. ಅದೇ ರೀತಿ ವಿಶೇಷವಾಗಿ ನರೇಗಾ ನೌಕರರ ಸಂಘದಿಂದ ಈ ಸ್ವಚ್ಛತೆ ಕಾರ್ಯಕ್ರಮ ನಡೆಸಿ ಸ್ವಚ್ಛಗೊಳಿಸುವ ಕಾರ್ಯ ಮಾಡಿರುತ್ತೀರಿ ತಮ್ಮೆಲ್ಲರಿಗೂ ಶುಭವಾಗಲಿ ಹಾರೈಸಿದರು.

ಮಹಾತ್ಮಗಾಂಧಿ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷರಾದ  ಕಿಶನ್ ರಾವ್ ಬಿ.ಎಸ್. ಮಾತನಾಡಿ, ಈ ಹಿಂದೆ ಕುಕ್ಕೆಸುಬ್ರಹ್ಮಣ್ಯದ ಸ್ನಾನಘಟ್ಟವನ್ನು ಸ್ವಚ್ಛತೆ ಮಾಡಲಾಗಿದೆ. ಈಗ ಸಂಘದ ಎರಡನೇ ಹಂತದ ಸ್ವಚ್ಛತಾ ಕಾರ್ಯದಲ್ಲಿ ಸಸಿಹಿತ್ಲು ಕಡಲ‌ಕಿನಾರೆ ಸ್ವಚ್ಛತೆಯನ್ನು ಯಶಸ್ವಿಯಾಗಿ ಮುಗಿಸಿದ್ದೇವೆ. ಸಂಘ ಬಲವಿರುವುದು ಎಲ್ಲರ ಭಾಗವಹಿಸುವಿಕೆ ಮತ್ತು ಸಕ್ರಿಯವಾಗಿ ತೊಡಗಿಸಿಕೊಳ್ಳುವಿಕೆಯಿಂದ  ಇಂದು   ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯವಾಗಿದೆ  ಎಂದರು.

ಬೀಳ್ಕೊಡುಗೆ:

ಸರಕಾರಿ ನೌಕರಿ ಪಡೆದುಕೊಂಡ ಇಬ್ಬರು ಸಂಘದ ಸದಸ್ಯರಾದ ನಳಿನ್ ಕುಮಾರ್, ನೇಹಾ ಮತ್ತು ವರ್ಗಾವಣೆಗೊಂಡ ನಳಿನಾ ಕುಮಾರಿ ಅವರನ್ನು ಶಾಲು, ಹಾರ, ಸ್ಮರಣಿಕೆ ನೀಡಿ ಬೀಳ್ಕೊಡಲಾಯಿತು‌.  

ಆಟೋಟ ಸ್ಪರ್ಧೆ:

ಸಭಾ ಕಾರ್ಯಕ್ರಮದ ಬಳಿಕ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಿಗೆ ವಿವಿಧ ಆಟೋಟ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.

ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು 'ಗೋಡ್ಸೆ ಜಿಂದಾಬಾದ್': ವರುಣ್ ಗಾಂಧಿ ಕಿಡಿ!

ವೇದಿಕೆಯಲ್ಲಿ ಹಳೆಯಂಗಡಿ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ದೀಪ್ತಿ, ನೌಕರರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ರೋಷನ್ ಉಪಸ್ಥಿತರಿದ್ದರು. ಜಿಲ್ಲಾ ಘಟಕದ ಪ್ರತಿನಿಧಿ ನಿತಿನ್ ಸ್ವಾಗತಿಸಿ, ಖಜಾಂಜಿ ವಿನೋದ್ ವಂದಿಸಿದರು.  ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.

Follow Us:
Download App:
  • android
  • ios