ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು 'ಗೋಡ್ಸೆ ಜಿಂದಾಬಾದ್': ವರುಣ್ ಗಾಂಧಿ ಕಿಡಿ!

* ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನ ಆಚರಣೆ

* ಗಾಂಧಿ ಜಯಂತಿಯಂದು ಟ್ವಿಟರ್‌ನಲ್ಲಿ ಟ್ರೆಂಡ್‌ ಆಯ್ತು ಗೋಡ್ಸೆ ಜಿಂದಾಬಾದ್

* ಟ್ವಿಟರ್‌ ಟ್ರೆಂಡ್‌ ಬಗ್ಗೆ ವರುಣ್ ಗಾಂಧಿ ಆಕ್ರೋಶ

Those tweeting Godse zindabad are irresponsibly shaming nation Varun Gandhi on Gandhi Jayanti pod

ನವದೆಹಲಿ(ಅ.02): ಇಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ(Mahatma gandhi) ಜನ್ಮದಿನ ಆಚರಿಸಲಾಗುತ್ತಿದೆ. ಆದರೆ ಈ ಮಧ್ಯೆ, ಟ್ವಿಟರ್‌ನಲ್ಲಿ/Twitter) 'ನಾಥೂರಾಮ್ ಗೋಡ್ಸೆ ಜಿಂದಾಬಾದ್'(Nathuram Godse Zindabad) ಟ್ರೆಂಡಿಂಗ್ ಆಗಿದ್ದು, ಭಾರೀ ವಿವಾದ ಭುಗಿಲೆದ್ದಿದೆ. ಬಿಜೆಪಿ ಸಂಸದ ವರುಣ್ ಗಾಂಧಿ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವರುಣ್ ಗಾಂಧಿ ಈ ಬಗ್ಗೆ ಟ್ವೀಟ್ ಮಾದ್ದಾರೆ. ಇನ್ನು ಅತ್ತ ಮುಂಜಾನೆ, ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್(President Ram Nath Kovind) ಸೇರಿದಂತೆ ದೇಶದ ಗಣ್ಯರು ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ವಾರ್ಷಿಕೋತ್ಸವದಂದು ಅವರಿಗೆ ಗೌರವ ಸಲ್ಲಿಸಿದ್ದಾರೆ.

'ನಾಥೂರಾಮ್ ಗೋಡ್ಸೆ ಜಿಂದಾಬಾದ್' ಟ್ರೆಂಡ್ ಸೃಷ್ಟಿಯಾದ ಬೆನ್ನಲ್ಲೇ ಸ್ವತಃ ವರುಣ್ ಗಾಂಧಿ(Varun Gandhi) ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ. 'ನಾಥೂರಾಮ್ ಗೋಡ್ಸೆ ಜಿಂದಾಬಾದ್' ಎಂದು ಟ್ವೀಟ್ ಮಾಡುತ್ತಿರುವವರು ತಮ್ಮ ಬೇಜವಾಬ್ದಾರಿತನದಿಂದ ದೇಶವನ್ನು ಮುಜುಗರಕ್ಕೀಡು ಮಾಡುತ್ತಿದ್ದಾರೆ ಎಂದು ವರುಣ್ ಗಾಂಧಿ ಹೇಳಿದ್ದಾರೆ ಕಿಡಿ ಕಾರಿದ್ದಾರೆ. 

ಇನ್ನು 1948 ರ ಜನವರಿ 30 ರಂದು ನಾಥೂರಾಮ್ ಗೋಡ್ಸೆ ಮಹಾತ್ಮಾ ಗಾಂಧಿಯನ್ನು ಗುಂಡಿಕ್ಕಿ ಕೊಂದಿದ್ದರು ಎಂಬುವುದು ಉಲ್ಲೇಖನೀಯ. ಈ ತಪ್ಪಿನ ಶಿಕ್ಷೆಯಾಗಿ ಗೋಡ್ಸೆಗೆ ಮರಣದಂಡನೆ ವಿಧಿಸಲಾಯಿತು. ವಿಭಜನೆಗೆ ಗಾಂಧಿಯೇ ಕಾರಣವೆಂದು ಗೋಡ್ಸೆ ದೂಷಿಸುತ್ತಿದ್ದರು. 

ಇನ್ನು ಈ ಬಗ್ಗೆ ಮಾಡಿರುವ ಮತ್ತೊಂದು ಟ್ವೀಟ್‌ನಲ್ಲಿ ವರುಣ್ ಗಾಂಧಿ ಹೇಳಿದರು 'ಭಾರತ ಯಾವಾಗಲೂ ಆಧ್ಯಾತ್ಮಿಕ ಮಹಾಶಕ್ತಿಯಾಗಿದೆ. ಅವರು ಮಹಾತ್ಮರು, ಅವರು ನಮ್ಮ ಅಸ್ತಿತ್ವದ ಮೂಲಕ ನಮ್ಮ ದೇಶದ ಆಧ್ಯಾತ್ಮಿಕ ಅಡಿಪಾಯವನ್ನು ವ್ಯಕ್ತಪಡಿಸಿದರು ಮತ್ತು ನಮಗೆ ನೈತಿಕ ಅಧಿಕಾರವನ್ನು ನೀಡಿದರು, ಅದು ಇಂದಿಗೂ ನಮ್ಮ ದೊಡ್ಡ ಶಕ್ತಿಯಾಗಿದೆ. 'ಗೋಡ್ಸೆ ಜಿಂದಾಬಾದ್' ಎಂದು ಟ್ವೀಟ್ ಮಾಡುವವರು ಬೇಜವಾಬ್ದಾರಿಯಿಂದ ದೇಶವನ್ನು ಅವಮಾನಿಸುತ್ತಿದ್ದಾರೆ ಎಂದಿದ್ದಾರೆ.

ಗೋಡ್ಸೆ ಗಾಂಧಿಯನ್ನು ಕೊಂದಿದ್ದೇಕೆ?

ಜನವರಿ 30, 1948, ಬಿರ್ಲಾ ಭವನ, ನವದೆಹಲಿ. ಸಂಜೆ 5.20 ರ ಸುಮಾರಿಗೆ. ಬಿರ್ಲಾ ಭವನದಲ್ಲಿ ಪ್ರತಿದಿನ ಸಂಜೆ ಐದು ಗಂಟೆಗೆ ಪ್ರಾರ್ಥನೆ ನಡೆಯುತ್ತಿತ್ತು. ಆದರೆ ಈ ದಿನ ಗಾಂಧೀಜಿ ಸರ್ದಾರ್ ಪಟೇಲ್ ಅವರೊಂದಿಗಿನ ಸಭೆಯಲ್ಲಿ ನಿರತರಾಗಿದ್ದರು. ಅವರು ಪ್ರಾರ್ಥನೆಗಾಗಿ ತಡವಾಗಿ ಹೊರಟರು. ಬಾಪು ಅಭಾ ಮತ್ತು ಮನು ಅವರ ಭುಜದ ಮೇಲೆ ಕೈಗಳನ್ನು ಇಟ್ಟು ವೇದಿಕೆಯ ಕಡೆಗೆ ತೆರಳಿದರು. ಅಷ್ಟರಲ್ಲಿ ಅಲ್ಲಿ ಗೋಡ್ಸೆಯೂ ತಲುಪಿದ್ದರು. ಮೊದಲು ಗೋಡ್ಸೆ, ಗಾಂಧೀಜಿಗೆ ಕೈಮುಗಿದು ನಮಸ್ಕರಿಸಿದರು. ಅಲ್ಲದೇ  ಮನು ಬಳಿ ಸಹೋದರನೇ, ಎದುರಿನಿಂದ ಬದಿಗೆ ಸರಿದುನಿಲ್ಲು, ಬಾಪು ಹೋಗಲಿ, ಈಗಾಗಲೇ ತಡವಾಗಿದೆ ಎಂದಿದ್ದಾರೆ. ಇದಾದ ಬೆನ್ನಲ್ಲೇ ಗೋಡ್ಸೆ ಮನುವನ್ನು ತಳ್ಳಿ, ತನ್ನ ಕೈಯಲ್ಲಿ ಅಡಗಿಟ್ಟಿದ್ದ ಚಿಕ್ಕ ಬೆರೆಟ್ಟಾ ಪಿಸ್ತೂಲನ್ನು ತೆಗೆದು ಗಾಂಧೀಜಿಯ ಎದೆಗೆ ಮೂರು ಗುಮಡುಗಳನ್ನು ಹಾರಿಸಿದರು. ಎರಡು ಗುಂಡುಗಳು ಹಾದು ಹೋದರೆ, ಕೊನೆಯ ಗುಂಡು ಎದೆಯಲ್ಲೇ ಉಳಿದುಕೊಮಡಿತ್ತು. ಹೀಗೆ 78 ವರ್ಷ ವಯಸ್ಸಿನ ಮಹಾತ್ಮ ಗಾಂಧಿಯವರು ನಿಧನರಾದರು. ಗೋಡ್ಸೆ ಗಾಂಧಿಯನ್ನು ಕೊಂದದ್ದಕ್ಕೆ ನಿಜವಾದ ಕಾರಣ ಬಹಿರಂಗವಾಗಲಿಲ್ಲ. ದೇಶ ವಿಭಜನೆಯ ಬಗ್ಗೆ ಅವರು ಕೋಪಗೊಂಡಿದ್ದರು ಎಂದು ಹೇಳಲಾಗಿದೆ.

Latest Videos
Follow Us:
Download App:
  • android
  • ios