Asianet Suvarna News Asianet Suvarna News

ಅವಹೇಳನಕಾರಿ ಪೋಸ್ಟ್‌ನಿಂದ ಗಲಭೆ : ಲಿಂಗಸುಗೂರಲ್ಲಿ ನಿಷೇಧಾಜ್ಞೆ ಜಾರಿ

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದು, ತೀವ್ರ ಗಲಭೆಗೆ ಕಾರಣವಾಗಿ ರಾಯಚೂರು ಜಿಲ್ಲೆ ಲಿಂಗಸುಗೂರಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

clashes between Youths Group 144 Section imposed in Lingasugur
Author
Bengaluru, First Published Aug 26, 2019, 11:47 AM IST

ಲಿಂಗಸುಗೂರು [ಆ.26]:  ಕಿಡಿಗೇಡಿ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಹಿಂದು ಧಾರ್ಮಿಕ ಮಹಾಪುರಷರ ವಿರುದ್ಧ ಅವಹೇಳನಕಾರಿಯಾಗಿ ಪೋಸ್ಟ್‌ ಹರಿಬಿಟ್ಟಿದ್ದರಿಂದ ಆಕ್ರೋಶಗೊಂಡು ಯುವಕರು ಗುಂಪು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗಿದ್ದರಿಂದ ಪೋಲಿಸ್‌ರ ಜೀಪ್‌ ಮೇಲೆ ಕಲ್ಲು ತೂರಾಟ ನಡೆಸಿ ಪಟ್ಟಣದಲ್ಲಿ ಅಶಾಂತಿ ವಾತವರಣ ನಿರ್ಮಾಣಗೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ ಪಟ್ಟಣದ ನಿವಾಸಿ ಸೈಯದ್‌ ಬೀನ್‌ ಅಹಮ್ಮದ ತಂದೆ ಅಹ್ಮದ್‌ಬಿನ್‌ ಸೈಯದ್‌ ಜಾವೂಸ್‌ (20) ಪೋಲಿಸ್‌ರು ರವಿವಾರ ಬಂಧಿಸಿದ್ದಾರೆ.

ಸೈಯದ್‌ ಬಿನ್‌ ಅಹಮ್ಮದ ಜಾವೂಸ್‌ ತನ್ನ ಫೇಸ್‌ಬುಕ್‌ ಖಾತೆಯಲ್ಲಿ ಛತ್ತಪತಿ ಶಿವಾಜಿ, ಸಂಗೊಳ್ಳಿ ರಾಯಣ್ಣ, ಹಾಗೂ ಮಹರ್ಷಿ ವಾಲ್ಮೀಕಿ ಭಾವಚಿತ್ರಗಳ ಮೇಲೆ ಟಿಪ್ಪು ಸುಲ್ತಾನ್‌ನ ಎಡಗಾಲು ಇಟ್ಟಂತ ಭಾವಚಿತ್ರಕ್ಕೆ ಟಿಪ್ಪು ಒಬ್ಬನೇ ರಾಜ ಇವರೆಲ್ಲಾ ಟಿಪ್ಪುವಿನ ನಾಯಿಗಳು ಎಂದು ಬರೆದು ಪೋಸ್ಟ್‌ ಮಾಡಿದ್ದಲ್ಲದೆ ಇದನ್ನು 42 ಹಿಂದು ಯುವಕರಿಗೆ ಟ್ಯಾಗ್‌ ಮಾಡಿದ್ದು ಹಾಗೂ ಇದನ್ನು ವ್ಯಾಟ್ಸಪ್‌ನಲ್ಲಿ ಹರಿಬಿಟ್ಟಿದ್ದು ಮರಾಠ, ವಾಲ್ಮೀಕಿ ಹಾಗೂ ಹಾಲುಮತ ಸಮುದಾಯದ ಹಾಗೂ ಹಿಂದು ಸಂಘಟನೆಗಳ ಯುವಕರ ಆಕ್ರೋಶಕ್ಕೆ ಕಾರಣವಾಗಿದೆ. ಇದುಲ್ಲದೆ ಪಾಕಿಸ್ಥಾನ ದೇಶದ ಧ್ವಜ ಹಾಕಿಕೊಂಡಿದ್ದಾನೆ.

ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್‌ ಹರಿದಾಡಿದ್ದರಿಂದ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಯುವಕರು ಮಧ್ಯಾಹ್ನ 2 ಗಂಟೆಗೆ ಒಂದಡೆ ಸೇರಿ ಗಡಿಯಾರ ವೃತ್ತ ಬಳಿ ಇರುವ ಆರೋಪಿ ಮನೆಗೆ ನುಗ್ಗುವ ಪ್ರಯತ್ನ ಮಾಡಿದ್ದಾರೆ. ಇದಕ್ಕೆ ಹೆದರಿ ಮನೆಯಲ್ಲಿದ್ದ ಆರೋಪಿ ಮನೆ ಹಿಂಬಾಗಿಲಿನಿಂದ ಓಡಿಹೋಗಿ ಪೋಲಿಸ್‌ ಠಾಣೆಗೆ ಹೋಗಿ ಶರಣಾಗಿದ್ದಾನೆ. ಅರೋಪಿಯ ಸ್ನೇಹಿತ ಮಂಜುನಾಥ ಎಂಬುವವನು ಉದ್ರೀಕ್ತ ಗುಂಪಿನ ವಿರುದ್ಧ ರೇಗಾಡಿದ್ದರಿಂದ ಯುವಕರ ಮತ್ತಷ್ಟುಆಕ್ರೋಶಕ್ಕೆ ಕಾರಣವಾಗಿದೆ ಇದರಿಂದ ರೊಚ್ಚಿಗೆದ್ದ ಗುಂಪು ಮಂಜುನಾಥನ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ಗಮನಿಸಿದ ಸಿಪಿಐ ಯಶವಂತ ಬಿಸನಳ್ಳಿ ಅವರು ಮಧ್ಯೆ ಪ್ರವೇಶಿಸಿ ಯುವಕನ್ನು ರಕ್ಷಿಸಿ ಆಸ್ಪತ್ರೆಗೆ ಕಳಿಸಲಾಯಿತು. ನಂತರ ಉದ್ರೀಕ್ತ ಗುಂಪು ಪಟ್ಟಣದ ಪೋಲಿಸ್‌ ಠಾಣೆ ಎದುರು ಆರೋಪಿಯ ವಿರುದ್ಧ ಘೋಷಣೆ ಕೂಗಿ, ನಮಗೆ ಒಪ್ಪಿಸಿ ನಾವು ಬುದ್ದಿ ಕಲಿಸುತ್ತೇವೆ ಎಂದು ಒತ್ತಾಯಿಸಿದರು. ಗಡಿಯಾರ ವೃತ್ತದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಪಟ್ಟಣದಲ್ಲಿ ಹಿಂದೂಗಳ ಭಾವನೆಗೆ ದಕ್ಕೆಯಾಗುವ ರೀತಿಯಲ್ಲಿ ಪೋಸ್ಟ್‌ಗಳು ಹರಿಬಿಡುವುದು ಹೆಚ್ಚಾಗಿದೆ ಇದಕ್ಕೆ ಕಡಿವಾಣ ಹಾಕುವಂತೆ ಪ್ರತಿಭಟಿಸಿದರು.

ಹೆಚ್ಚಿನ ಜಿಲ್ಲಾಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಥಳಕ್ಕೆ ದಾವಿಸಿದ ಸಿಪಿಐ ಯಶವಂತ ಬಿಸನಳ್ಳಿ ಅವರು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಪೋಸ್ಟ್‌ ಮಾಡಿದ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ಆತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕಾನೂನಿನ ಪ್ರಕಾರ ಆತನ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ನೀವೆಲ್ಲರೂ ಪ್ರತಿಭಟನೆ ನಿಲ್ಲಿಸಿ ಕಾನೂನು ಸುವ್ಯವಸ್ಥೆಕಾಪಾಡುವಂತೆ ಉದ್ರೀಕ್ತ ಗುಂಪಿನ ಯುವಕರ ಮನವೂಲಿಸಲು ಮುಂದಾದರು ಆದರೆ ಇದಕ್ಕೆ ಬಗ್ಗದ ಯುವಕರು ಆರೋಪಿಯನ್ನು ಗಡಿಪಾರು ಮಾಡಬೇಕು ಇಲ್ಲವೇ ನಮಗೆ ಒಪ್ಪಿಸಿ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದರು.

ಉದ್ರೀಕ್ತ ಗುಂಪಿನ ಪೋಲಿಸ್‌ರು ಲಾಠಿ ಜಾರ್ಚ ಮಾಡುತ್ತಿದ್ದರಿಂದ ಗಡಿಯಾರ ಚೌಕ, ಪೋಲಿಸ್‌ ಠಾಣೆ, ಪುರಸಭೆ, ಪಶು ಆಸ್ಪತ್ರೆ ಸುತ್ತಮುತ್ತಲಿನ ಅಂಗಡಿ-ಮುಗ್ಗಟ್ಟು ಮುಚ್ಚಿದ್ದವು. ಪರಿಸ್ಥಿತಿ ಹತೋಟಿಗೆ ತರಲು 144 ಕಲಂ ಜಾರಿಗೊಳಿಸಲಾಗಿದೆ. ಪರಿಸ್ಥಿತಿ ವಾಸ್ತುಸ್ಥಿತಿ ಅರಿಯಲು ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಪಟ್ಟಣಕ್ಕೆ ಭೇಟಿ ನೀಡಿದ್ದಾರೆ.

Follow Us:
Download App:
  • android
  • ios