ಐವರಿಗೆ ಗಂಭೀರ ಗಾಯ| 55ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ| ಎರಡು ಗ್ರಾಮಗಳ ಜನರಿಂದ ದೂರು, ಪ್ರತಿದೂರು ದಾಖಲು| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗೋವಿಂದಗಿರಿ ಗ್ರಾಮದಲ್ಲಿ ನಡೆದ ಘಟನೆ|

ಕೂಡ್ಲಿಗಿ(ಜೂ.22): ತಾಲೂಕಿನ ಗೋವಿಂದಗಿರಿಯಲ್ಲಿ ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಎರಡು ಗ್ರಾಮಗಳ ನಡುವೆ ಮಾರಾಮಾರಿ ಸಂಭವಿಸಿದ್ದು, 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಇವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

Add Asianetnews Kannada as a Preferred SourcegooglePreferred

ಕೂಡ್ಲಿಗಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೋವಿಂದಗಿರಿ ಗೊಲ್ಲರಹಟ್ಟಿ ಹಾಗೂ ಗೋವಿಂದಗಿರಿ ತಾಂಡಾ ಎರಡು ಅವಳಿ ಗ್ರಾಮಗಳಿದ್ದು ಎರಡು ಗ್ರಾಮಗಳು ಕೂಡಿಕೊಂಡಿವೆ. ಗೋವಿಂದಗಿರಿ ಗೊಲ್ಲರಹಟ್ಟಿಯ ಯುವಕ ಚಕ್ಕಡಿಯನ್ನು ಓಡಿಸುತ್ತಿದ್ದಾಗ ಗೋವಿಂದಗಿರಿ ತಾಂಡಾದ ಬಾಲಕನಿಗೆ ಚಕ್ಕಡಿ ತಾಗಿದೆ. ಹೀಗಾ​ಗಿ ಗೊಲ್ಲರಹಟ್ಟಿಯ ಚಕ್ಕಡಿ ಓಡಿಸುತ್ತಿದ್ದ ಯುವಕನಿಗೆ ತಾಂಡಾದ ಯುವಕನೊಬ್ಬ ಹೊಡೆದಿದ್ದಾನೆ. 

ಬಳ್ಳಾರಿ ಜಿಲ್ಲೆಯಲ್ಲಿ ಹೊಸ 14 ಕೊರೋನಾ ಪಾಸಿಟಿವ್‌ ಕೇಸ್‌

ಈ ಪ್ರಕರಣ ಶನಿವಾರ ಕೂಡ್ಲಿಗಿ ಪೊಲೀಸ್‌ ಠಾಣೆಗೆ ಬಂದಿತ್ತು. ಆಗ ಎರಡು ಗ್ರಾಮಗಳ ಹಿರಿಯರ ಮಧ್ಯಸ್ಥಿಕೆಯಲ್ಲಿ ದೂರು ನೀಡುವುದು ಬೇಡ ಎಂದು ನಿರ್ಧ​ರಿ​ಸಿದ್ದರು. ಆದರೆ, ಶನಿವಾರ ಮಧ್ಯಾಹ್ನದ ನಂತರ ಪುನಃ ಎರಡು ಗ್ರಾಮಗಳ ಜನತೆಯ ನ​ಡು​ವೆ ಮಾತಿಗೆ ಮಾತು ಬೆಳೆ​ದು ಹೊಡೆದಾಟ ಶುರುವಾಗಿದ್ದು, 5 ಜನರು ಗಂಭೀರವಾಗಿ ಗಾಯಗೊಂಡಿದ್ದಾ​ರೆ. ಗಾಯಗೊಂಡಿದ್ದ 10 ಜನರನ್ನು ತಕ್ಷಣವೇ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಗಂಭೀರ ಗಾಯಗಳಾಗಿರುವ 5 ಜನರನ್ನು ಬಳ್ಳಾರಿ ವಿಮ್ಸ್‌ಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಎರಡು ಗ್ರಾಮಗಳ ಜನರಿಂದ ದೂರು, ಪ್ರತಿದೂರು ದಾಖಲಾಗಿದೆ. 55ಕ್ಕೂ ಹೆಚ್ಚು ಜನರ ವಿರುದ್ದ ಕೂಡ್ಲಿಗಿ ಪೊಲೀಸ್‌ ಠಾಣೆಯಲ್ಲಿ ಶನಿವಾರ ರಾತ್ರಿ ಪ್ರಕರಣ ದಾಖಲಾಗಿದೆ. ಎರ​ಡೂ ಗ್ರಾಮಗಳ ಹಿರಿಯರಿಗೆ ಈ ಪ್ರಕರಣದಿಂದ ಬೇಸರವಾಗಿದ್ದು, ಹಿರಿಯರು ಮನವೊಲಿಸಲು ಪ್ರಯತ್ನಿಸಿದ್ದಾರೆ.