ರಾಯಚೂರು: ಕಾಲುವೆ ನೀರಿನಲ್ಲಿ ಜಾರಿಬಿದ್ದ ಪೌರ ಕಾರ್ಮಿಕ ನಾಪತ್ತೆ
ಇಲ್ಲಿನ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರ ಕಾರ್ಮಿಕ ಕಾಲುವೆಯಲ್ಲಿ ಜಾರಿ ಬಿದ್ದು ಕೊಚ್ಚಿಹೋಗಿರುವ ಘಟನೆ ಶುಕ್ರವಾರ ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಜರುಗಿದೆ.
ಮಸ್ಕಿ (ಏ.7) : ಇಲ್ಲಿನ ಪುರಸಭೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೌರ ಕಾರ್ಮಿಕ ಕಾಲುವೆಯಲ್ಲಿ ಜಾರಿ ಬಿದ್ದು ಕೊಚ್ಚಿಹೋಗಿರುವ ಘಟನೆ ಶುಕ್ರವಾರ ಪಟ್ಟಣದ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಜರುಗಿದೆ.
ಮೃತ ಪೌರ ಕಾರ್ಮಿಕ ಜಂಬಯ್ಯ ರಾಯಚೂರು(Jambayya raichur) (45) ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆಯಷ್ಟೆನಡೆದ ಆನ್‌ಲೈನ್ ನೇಮಕಾತಿಯಲ್ಲಿ ಆಯ್ಕೆಯಾಗಿ ಪಟ್ಟಣದ ಪುರಸಭೆಯಲ್ಲಿ ಪೌರ ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದರು.
ರಾತ್ರೋ ರಾತ್ರಿ ನಾಪತ್ತೆಯಾದ ಬಸ್ ನಿಲ್ದಾಣ: ಪೊಲೀಸ್ ಠಾಣೆಗೆ ದೂರು..!
ಗುರುವಾರ ರಾತ್ರಿ ರಾಯಚೂರಿನಿಂದ ಮತಯಂತ್ರಗಳನ್ನು ತೆಗೆದುಕೊಂಡು ಬಂದು ಪಟ್ಟಣದ ದೇವನಾಂಪ್ರಿಯ ಕಾಲೇಜ(Devanamapriya collage)ನಲ್ಲಿನ ಸ್ಟ್ರಾಂಗ್ ರೂಮ್(Strong room)ನಲ್ಲಿ ಇಳಿಸಿದ ನಂತರ ಶುಕ್ರವಾರ ಬೆಳಗ್ಗೆ ಮತ್ತೊಬ್ಬ ಸಿಬ್ಬಂದಿ ಜೊತೆ ಸ್ನಾನಕ್ಕೆಂದು ಕಾಲುವೆಗೆ ತೆರಳಿದ್ದಾನೆ. ಈ ವೇಳೆ ಕಾಲು ಜಾರಿ ಬಿದ್ದು ನೀರಿಗೆ ಕೊಚ್ಚಿ ಹೋಗಿದ್ದಾನೆ. ಜೊತೆಯಲ್ಲಿದ್ದ ಮತ್ತೊಬ್ಬ ಕಾರ್ಮಿಕ ಹರಿದು ಹೋಗುತ್ತಿದ್ದ ಪೌರ ಕಾರ್ಮಿಕನ ರಕ್ಷಣೆ ಮಾಡಲು ಯತ್ನಿಸಿದರು ಪ್ರಯೋಜನವಾಗಿಲ್ಲ.
ಸುದ್ದಿ ತಿಳಿಯುತ್ತಲೇ ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಲಿಂಗಸುಗೂರು ಹಾಗೂ ಸಿಂಧನೂರಿನಿಂದ ಆಗ್ನಿ ಶಾಮಕ ತಂಡಗಳು ಹಾಗೂ ಪೌರ ಕಾರ್ಮಿಕರು ಕಾಲುವೆಯಲ್ಲಿ ನಾಪತ್ತೆಯಾದ ಜಂಬಯ್ಯ ಅವರ ಶೋಧ ಕಾರ್ಯ ನಡಿಸಿದ್ದಾರೆ.
ಸೊಳ್ಳೆ ಕಾಯಿಲ್ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಒಂದೇ ಕುಟುಂಬದ 6 ಮಂದಿ ಸಾವು