ಶೀಘ್ರ ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸೇವೆ : ಮಾಸಾಂತ್ಯಕ್ಕೆ ಟೆಂಡರ್

  • ಬೆಂಗಳೂರು ಉಪನಗರ  ರೈಲು ಯೋಜನೆ ಅನುಷ್ಠಾನಕ್ಕೆ ಸಿದ್ಧತೆ
  • ಪ್ರಥಮ ಹಂತದಲ್ಲಿ ಬೈಯಪ್ಪನಳ್ಳಿ-ಚಿಕ್ಕಬಾಣಾವರ ಕಾರಿಡಾರ್‌ ನಿರ್ಮಾಣ
  • ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಶೀಘ್ರ ಟೆಂಡರ್
Civil work tender for  suburban rail corridor likely by August end snr

 ಬೆಂಗಳೂರು (ಆ.10): ಬೆಂಗಳೂರು ಉಪನಗರ  ರೈಲು ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ನಡೆಸಿರುವ ಕರ್ನಾಟಕ ರೈಲು ಮೂಲಸೌಕರ್ಯ ಅಭಿವೃದ್ಧಿ ನಿಗಮ ಪ್ರಥಮ ಹಂತದಲ್ಲಿ ಬೈಯಪ್ಪನಳ್ಳಿ-ಚಿಕ್ಕಬಾಣಾವರ ಕಾರಿಡಾರ್‌ ನಿರ್ಮಾಣ ಸಂಬಂಧ ಈ ಮಾಸಾಂತ್ಯದ ವೇಳೆಗೆ ಸಿವಿಲ್ ಕಾಮಗಾರಿಗೆ ಟೆಂಡರ್‌ ಆಹ್ವಾನಿಸುವ ಸಾಧ್ಯತೆ ಇದೆ. 

148.17 ಕಿ.ಮೀ ಉದ್ದದ 15,767 ಕೋಟಿ ರು. ಅಂದಾಜು ವೆಚ್ಚದ ಉಪ ನಗರ ರೈಲು ಯೊಜನೆಯಲ್ಲಿ ಪ್ರಮುಖವಾಗಿ ನಾಲ್ಕು ಕಾರಿಡಾರ್‌ಗಳು ಬರಲಿವೆ. ಈ ಪೈಕಿ ಕೆ ರೈಡ್ ಮೊದಲ ಹಂತದಲ್ಲಿ ಬೈಯಪ್ಪನಹಳ್ಳಿ ಚಿಕ್ಕಬಾಣಾವರ ಹಾಗೂ ಹೀಲಳಿಗೆ ರಾಜಾನುಕುಂಟೆ ಕಾರಿಡಾರ್ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.  

ಆ. 12ರಿಂದ ಅರಸೀಕೆರೆ- ಹುಬ್ಬಳ್ಳಿ ರೈಲು ಸಂಚಾರ

ಬೈಯಪ್ಪನಹಳ್ಳಿ-ಚಿಕ್ಕಬಾಣಾವರ ಕಾರಿಡಾರ್ ನಿರ್ಮಾಣ ಸಂಬಂಧ ಸಿವಿಲ್ ಕಾಮಗಾರಿಗೆ ಈ ಮಾಸಾಂತ್ಯದ ವೇಳೆಗೆ ಟೆಂಡರ್‌ ಅಹ್ವಾನಿಸಲು ಸಿದ್ದತೆ ನಡೆಸಲಾಗಿದೆ. ಮುಂದಿನ ಅಕ್ಟೋಬರ್‌ ನವೆಂಬರ್‌ ವೇಳೆಗೆ ಈ ಟೆಂಡರ್‌  ಪ್ರಕ್ರಿಯೆ ಮುಗಿಸಿ ಬಳಿಕ ಹೀಲಳಿಗೆ ರಾಜಾನುಕುಂಟೆ ಕಾರಿಡಾರ್ ಸಿವಿಲ್ ಕಾಮಗಾರಿಗೆ ಟೆಂಡರ್ ಕರೆಯಲು ಸಿದ್ದತೆ ನಡೆಸಲಾಗುತ್ತದೆ ಎಂದ ಕೆರೈಡ್ ಮೂಲಗಳು ತಿಳಿಸಿವೆ. 

ನೈಟ್ ಕರ್ಫ್ಯೂ: ಬೆಂಗಳೂರು ನಮ್ಮ ಮೆಟ್ರೋ ರೈಲು ಸಂಚಾರ ಸಮಯ ಬದಲಾವಣೆ

ಒಟ್ಟು 14 ನಿಲ್ದಾಣಗಳು ಈ ಮಾರ್ಗದಲ್ಲಿ ಇರಲಿವೆ. 

ಕೇಂದ್ರ ಸಚಿವ ಸಂಪುಟ ಅರ್ಥಿಕ ವ್ಯವಹಾರಗಳ ಸಮಿತಿ ಸದರಿ ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡುವಾಗ ನಾಲ್ಕು ಕಾರಿಡಾರ್‌ ಪೈಕಿ ಆದ್ಯತೆ  ಮೇರೆಗೆ ಪೂರ್ಣಗೊಳಿಸಲು ನಿರ್ದೇಶನ ನೀಡಿದೆ. 

Latest Videos
Follow Us:
Download App:
  • android
  • ios