* ರಾಜ್ಯಾದಂತ ನೈಟ್ ಕರ್ಫ್ಯೂ ಜಾರಿ* ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಅವಧಿಯಲ್ಲೂ ಸಹ ಬದಲಾವಣೆ * ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಮಾಧ್ಯಮ ಪ್ರಕಟಣೆ 

ಕಲಬುರಗಿ, (ಆ.06): ಕೊರೋನಾ ನಿಯಂತ್ರಣಕ್ಕಾಗಿ ಗಡಿ ಜಿಲ್ಲೆಗಳಲ್ಲಿ ಇಂದಿನಿಂದಲೇ (ಆ.06) ವೀಕೆಂಡ್ ಕರ್ಫ್ಯೂ ಜಾರಿಗೊಳಿಸಲಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಲ್ಲದೇ ಕರ್ನಾಟಕ ರಾಜ್ಯಾದಂತ ನೈಟ್ ಕರ್ಫ್ಯೂ ಪ್ರತಿದಿನ ರಾತ್ರಿ 10ರ ಬದಲಿಗೆ 9ರಿಂದ ಬೆಳಗ್ಗೆ 5ರ ವರೆಗೆ ಜಾರಿ ಇರಲಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಅವಧಿಯಲ್ಲೂ ಸಹ ಬದಲಾವಣೆ ಮಾಡಲಾಗಿದೆ.

 ರಾತ್ರಿ 9ರಿಂದ ಮುಂಜಾನೆ 5ರವರೆಗೆ ನೈಟ್ ಕರ್ಫ್ಯೂ ಹಿನ್ನೆಲೆಯಲ್ಲಿ, ಮೆಟ್ರೋ ಕೊನೆಯ ರೈಲು ರಾತ್ರಿ 9 ಗಂಟೆ ಬದಲಾಗಿ 8 ಗಂಟೆಗೆ ಸಂಚರಿಸಲಿದೆ.

ರಾಜ್ಯದಲ್ಲಿ ನೈಟ್, ವೀಕೆಂಡ್‌ ಕರ್ಫ್ಯೂ ಜಾರಿ: ಇಲ್ಲಿದೆ ಹೊಸ ಮಾರ್ಗಸೂಚಿ

ಮೆಟ್ರೋ ಕೊನೆಯ ರೈಲು ರಾತ್ರಿ 8 ಗಂಟೆಗೆ ಹೊರಡಲಿದೆ. ಆ ಬಳಿಕ, ಮೆಟ್ರೋ ರೈಲು ಸೇವೆ ಇರುವುದಿಲ್ಲ. ಈ ಬದಲಾವಣೆ ನಾಳೆಯಿಂದ (ಆ.06) ಆಗಸ್ಟ್ 16ರವರೆಗೆ ಜಾರಿಯಲ್ಲಿರುತ್ತದೆ. 

ಈ ಬಗ್ಗೆ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕೊವಿಡ್ 19 ಹರಡುವುದನ್ನು ತಡೆಯಲು ನಿಯಂತ್ರಣ ಕ್ರಮಗಳ ಆದೇಶದಂತೆ ಆಗಸ್ಟ್ 7 ರಿಂದ ಆಗಸ್ಟ್ 16ರ ವರೆಗೆ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ವಿಧಿಸಲಾಗಿದೆ. ಆ ಕಾರಣದಿಂದ ಕೊನೆಯ ಮೆಟ್ರೋ ರೈಲು ಸೇವೆಯೂ ಟರ್ಮಿನಲ್ ನಿಲ್ದಾಣಗಳಿಂದ ರಾತ್ರಿ 9 ಗಂಟೆಯ ಬದಲು ರಾತ್ರಿ 8 ಗಂಟೆಗೆ ಹೊರಡುತ್ತದೆ. ಈ ಬದಲಾವಣೆಯನ್ನು ಆಗಸ್ಟ್ 7 ರಿಂದ ಜಾರಿಗೊಳಿಸಲಾಗಿದೆ ಎಂದು ತಿಳಿಸಿದೆ.