ಮಂಗಳೂರು(ಆ.01): ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ನಾಲ್ಕು ಸಜೀವ ಮದ್ದುಗುಂಡುಗಳನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ದಳ (ಸಿಐಎಸ್‌ಎಫ್‌) ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಮಂಗಳವಾರ ದುಬೈಗೆ ಅಕ್ರಮ ಸಾಗಾಟದ 4.10 ಲಕ್ಷ ರು. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾದ ಬೆನ್ನಲ್ಲೇ ಈ ಘಟನೆ ನಡೆದಿದೆ.

ಸಂಜೀವ ಶೆಟ್ಟಿಎಂಬವರು ಮುಂಬೈಗೆ ಪ್ರಯಾಣಿಸಲು ಇಂಡಿಗೋ ವಿಮಾನದಲ್ಲಿ ಟಿಕೇಟ್‌ ಕಾಯ್ದಿರಿಸಿದ್ದರು. ಅದಕ್ಕಾಗಿ ವಿಮಾನ ನಿಲ್ದಾಣಕ್ಕೆ ಬಂದು ಲಗೇಜ್‌ ಚೆಕಿಂಗ್‌ ಮಾಡುತ್ತಿದ್ದಾಗ ಸಿಐಎಸ್‌ಎಫ್‌ನ ಎಎಸ್‌ಐ ಸೋನಮ್‌ ಗುಪ್ತಾ ಅವರು ಗುಂಡು ಪತ್ತೆ ಮಾಡಿದ್ದರು. ಸಂಜೀವ ಶೆಟ್ಟಿಅವರ ಬ್ಯಾಗ್‌ನಲ್ಲಿ ಪಾಯಿಂಟ್‌ 32 ಎಂಎಂನ 4 ಮದ್ದು ಗುಂಡುಗಳು ಪತ್ತೆಯಾಗಿವೆ.

ಬೆಂಗಳೂರು : ವಿದೇಶಕ್ಕೆ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದವ ಬಂಧನ

ಸಂಜೀವ ಶೆಟ್ಟಿಹಾಗೂ ಮದ್ದುಗುಂಡುಗಳನ್ನು ಸಿಐಎಸ್‌ಎಫ್‌ ಅಧಿಕಾರಿಗಳು ಬಜ್ಪೆ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ದಾರೆ. ಠಾಣೆಯಲ್ಲಿ ಪರಿಶೀಲನೆ ನಡೆಸಿದಾಗ ಮದ್ದುಗುಂಡುಗಳು ಪರವಾನಗಿ ಹೊಂದಿದ್ದು, ಅದನ್ನು ತರಲು ಮರೆತು ಬಂದಿದ್ದರು. ಈ ಬಗ್ಗೆ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ