New Year And Drugs: ಮುಂಬೈಗೆ ಬಸ್‌ನಲ್ಲಿ 1.5 ಕೋಟಿ ಡ್ರಗ್ಸ್‌ ಸಾಗಣೆ: ಆಫ್ರಿಕನ್‌ ಪ್ರಜೆ ಬಂಧನ

*   ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್‌ ಸಾಗಾಟಕ್ಕೆ ಯತ್ನ
*   ದಕ್ಷಿಣ ಆಫ್ರಿಕಾ ಪ್ರಜೆ ಬೆಂಜಮಿನ್‌ ಸಂಡೆ ಅಲಿಯಾಸ್‌ ಆಂಟೋನಿ ಬಂಧಿತ ಆರೋಪಿ
*   ನ್ಯೂ ಇಯರ್‌ ಪಾರ್ಟಿಗೆ ಡ್ರಗ್ಸ್‌ ಪೂರೈಕೆ ಸಜ್ಜಾಗಿದ್ದ ಇಬ್ಬರ ಸೆರೆ

African Citizen Arrested For Drugs Case in Bengaluru grg

ಬೆಂಗಳೂರು(ಡಿ.25): ಹೊಸ ವರ್ಷಾಚರಣೆ(New Year) ಹಿನ್ನೆಲೆಯಲ್ಲಿ ನಗರದಿಂದ ಬಸ್ಸಿನಲ್ಲಿ ಮುಂಬೈಗೆ(Mumbai) 1.5 ಕೋಟಿ ಮೌಲ್ಯದ ಡ್ರಗ್ಸ್‌(Drugs) ಪೂರೈಸುತ್ತಿದ್ದ ವಿದೇಶಿ ಪ್ರಜೆಯೊಬ್ಬನನ್ನು ರಾಷ್ಟ್ರೀಯ ಮಾದಕ ವಸ್ತು ನಿಗ್ರಹ ದಳ (NCB)ದ ಬೆಂಗಳೂರು ವಲಯ ಅಧಿಕಾರಿಗಳು ಬಂಧಿಸಿದ್ದಾರೆ. ದಕ್ಷಿಣ ಆಫ್ರಿಕಾ(South Africa) ಪ್ರಜೆ ಬೆಂಜಮಿನ್‌ ಸಂಡೆ ಅಲಿಯಾಸ್‌ ಆಂಟೋನಿ ಬಂಧಿತನಾಗಿದ್ದು(Arrest), ಆರೋಪಿಯಿಂದ ಒಂದೂವರೆ ಕೋಟಿ ಮೌಲ್ಯದ 968 ಗ್ರಾಂ ಆಂಫೆತ್‌ಮೈನ್‌ ಹಾಗೂ 2.9 ಕೆ.ಜಿ. ಎಫೆಡ್ರಿನ್‌ ಜಪ್ತಿ ಮಾಡಲಾಗಿದೆ. ನಗರದಿಂದ ಬಸ್‌ನಲ್ಲಿ ಗುರುವಾರ ರಾತ್ರಿ ಮಾದಕ ವಸ್ತು ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಪಡೆದು ಎಸ್‌ಸಿಬಿ ದಾಳಿ ನಡೆಸಿದೆ.

ಉದ್ಯಮ ವೀಸಾದಡಿ(Business Visa) ಭಾರತಕ್ಕೆ(India) ಬಂದಿದ್ದ ಆರೋಪಿ, ಬಳಿಕ ತಮಿಳುನಾಡಿನ(Tamil Nadu) ಚೆನ್ನೈ(Chennai) ಮೂಲದ ಯುವತಿಯನ್ನು ಪ್ರೀತಿ ವಿವಾಹವಾಗಿದ್ದ. ನಂತರ ಹಣದಾಸೆಗೆ ಮಾದಕ ವಸ್ತು ದಂಧೆಯಲ್ಲಿ ತೊಡಗಿದ್ದ ಆತ, ಚೆನ್ನೈ, ಬೆಂಗಳೂರು(Bengaluru) ಹಾಗೂ ಮುಂಬೈ ಸೇರಿದಂತೆ ದೇಶದ ವಿವಿಧೆಡೆ ಮಾದಕ ವಸ್ತು ತಯಾರಿಕೆ ಮತ್ತು ಮಾರಾಟದಲ್ಲಿ ಸಕ್ರಿಯವಾಗಿದ್ದ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಚೆನ್ನೈ ಹಾಗೂ ಆಸ್ಟ್ರೇಲಿಯಾ(Australia) ಪ್ರಕರಣ ದಾಖಲಾಗಿವೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಬೆಂಗ್ಳೂರಲ್ಲಿ ಡ್ರಗ್ಸ್ ಹಾವಳಿ,  ಕೋಟಿ ಮೊತ್ತದ ಆಶಿಸ್ ಆಯಿಲ್ ವಶ!

ಬಾಕ್ಸ್‌ಗಳಲ್ಲಿ ಸಾಗಾಣಿಕೆ:

ಮುಂಬೈನಲ್ಲಿ ನಡೆಯುವ ಹೊಸ ವರ್ಷಾಚರಣೆ ಪಾರ್ಟಿಗಳಿಗೆ ಡ್ರಗ್ಸ್‌ ಪೂರೈಸಲು ಅಂಥೋನಿ ಸಿದ್ಧತೆ ನಡೆಸಿರುವ ಬಗ್ಗೆ ಮಾಹಿತಿ ಸಿಕ್ಕಿತು. ಅಂತೆಯೇ ಗುರುವಾರ ರಾತ್ರಿ ಬಸ್‌ನಲ್ಲಿ ತೆರಳುವಾಗ ಮಾರ್ಗ ಮಧ್ಯೆ ಆತನನ್ನು ವಶಕ್ಕೆ ಪಡೆಯಲಾಯಿತು. ಬಳಿಕ ಆತನ ಬಳಿಯಿದ್ದ 3 ಬಾಕ್ಸ್‌ಗಳನ್ನು ಪರಿಶೀಲಿಸಿದಾಗ ಅದರಲ್ಲಿ ಡ್ರಗ್ಸ್‌ ಇರುವುದು ಪತ್ತೆಯಾಗಿತ್ತು. ಒಂದು ಮರದ ಬಾಕ್ಸ್‌ನಲ್ಲಿ 1665 ಗ್ರಾಂ ಆಂಫೆತ್‌ಮೈನ್‌ ಹಾಗೂ ಎರಡು ಮೆಟಲ್‌ ಬಾಕ್ಸ್‌ಗಳಲ್ಲಿದ್ದ 2.811 ಕೆ.ಜಿ ಎಫೆಡ್ರಿನ್‌ ಜಪ್ತಿ ಮಾಡಲಾಗಿದೆ ಎಂದು ಎನ್‌ಸಿಬಿ ವಲಯ ನಿರ್ದೇಶಕ ಅಮಿತ್‌ ತಿಳಿಸಿದ್ದಾರೆ.

ನ್ಯೂ ಇಯರ್‌ ಪಾರ್ಟಿಗೆ ಡ್ರಗ್ಸ್‌ ಪೂರೈಕೆ ಸಜ್ಜಾಗಿದ್ದ ಇಬ್ಬರ ಸೆರೆ

ಬೆಂಗಳೂರು:  ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾದಕ ವಸ್ತು ದಂಧೆ ವಿರುದ್ಧ ಪೊಲೀಸರ(Police) ಕಾರ್ಯಾಚರಣೆ ಮತ್ತಷ್ಟು ಬಿರುಸುಗೊಂಡಿದ್ದು, ಮತ್ತೆ 6 ಕೋಟಿ ಮೌಲ್ಯದ ಡ್ರಗ್ಸ್‌ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಗುಜರಾತ್‌ನಲ್ಲಿ ಪಾಕ್‌ ಮೀನುಗಾರಿಕಾ ಬೋಟ್‌ ವಶಕ್ಕೆ... 400 ಕೋಟಿ ಮೌಲ್ಯದ ಡ್ರಗ್ಸ್‌ ಜಪ್ತಿ

ಆಂಧ್ರಪ್ರದೇಶದಿಂದ(Andhra Pradesh) ನಗರಕ್ಕೆ .6 ಕೋಟಿ ಮೌಲ್ಯದ ಡ್ರಗ್ಸ್‌ ತಂದು ಮಾರಾಟಕ್ಕೆ ಯತ್ನಿಸಿದ್ದಾಗ ಆಂಧ್ರಪ್ರದೇಶ ಮೂಲದ ಇಬ್ಬರು ಪೆಡ್ಲರ್‌ಗಳು ಮೈಕೋಲೇಔಟ್‌ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ವಿಶಾಖಪಟ್ಟಣದ ಉಲ್ಲಂಗಿ ಪ್ರಕಾಶ್‌ ರಾವ್‌ ಹಾಗೂ ಧಾಮ್‌ರಾಜ್‌ ಬಂಧಿತರಾಗಿದ್ದು, ಆರೋಪಿಗಳಿಂದ 5 ಲೀಟರ್‌ ಹ್ಯಾಶಿಶ್‌ ಆಯಿಲ್‌ ಜಪ್ತಿ ಮಾಡಲಾಗಿದೆ. ಬಿಟಿಎಂ ಲೇಔಟ್‌ನ ಎಸ್‌ಎಲ್‌ಎನ್‌ ಲೇಕ್‌ ವ್ಯೂ ಅಪಾರ್ಟ್‌ಮೆಂಟ್‌ ಬಳಿ ಗ್ರಾಹಕರಿಗೆ ಡ್ರಗ್ಸ್‌ ಪೂರೈಸುವ ವೇಳೆ ಈ ಇಬ್ಬರು ಪೆಡ್ಲರ್‌ಗಳ ಬಂಧನವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಹಲವು ವರ್ಷಗಳಿಂದ ಡ್ರಗ್ಸ್‌ ದಂಧೆಯಲ್ಲಿ ಈ ಇಬ್ಬರು ತೊಡಗಿದ್ದು, ಒಡಿಶಾ ಹಾಗೂ ಆಂಧ್ರಪ್ರದೇಶದಿಂದ ಕಡಿಮೆ ಬೆಲೆಗೆ ಡ್ರಗ್ಸ್‌ ಖರೀದಿಸಿ ಬಳಿಕ ಬೆಂಗಳೂರಿನಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ನಗರಕ್ಕೆ ಆಗಾಗ್ಗೆ ಡ್ರಗ್ಸ್‌ ತಂದು ಮಾರಾಟ ಮಾಡಿ ಮರಳುತ್ತಿದ್ದರು. ಹೊಸ ವರ್ಷಾಚರಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನಡೆಯುವ ಪಾರ್ಟಿಗಳಿಗೆ ಹ್ಯಾಶಿಶ್‌ ಆಯಿಲ್‌ ಸರಬರಾಜು ಮಾಡಲು ಸಿದ್ಧತೆ ನಡೆಸಿದ್ದಾಗ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಮೂವರು ಪೆಡ್ಲರ್‌ಗಳ ಸೆರೆ

ಎಚ್‌ಎಎಲ್‌ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ಮೂವರು ಗಾಂಜಾ ಪೆಡ್ಲರ್‌ಗಳು ಗಾಳಕ್ಕೆ ಬಿದ್ದಿದ್ದಾರೆ. ಇಮ್ರಾನ್‌ ಅಲಿಯಾಸ್‌ ಕುಳ್ಳ, ಮುಬಾರಕ್‌ ಪಾಷ ಹಾಗೂ ಅಫೆರೕಜ್‌ ಅಲಿಯಾಸ್‌ ಅಪ್ಪು ಬಂಧಿತರಾಗಿದ್ದು, ಆರೋಪಿಗಳಿಂದ 9 ಕೆ.ಜಿ. ಗಾಂಜಾ ಹಾಗೂ ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ವಿಭೂತಿಪುರ ಕೆರೆ ಸಮೀಪ ಗಾಂಜಾ ಮಾರಾಟಕ್ಕೆ ಸೋಮವಾರ ಆರೋಪಿ ಯತ್ನಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ಸಬ್‌ಇನ್ಸ್‌ಪೆಕ್ಟರ್‌ ಎಚ್‌. ರಂಗನಾಥ್‌ ತಂಡ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
 

Latest Videos
Follow Us:
Download App:
  • android
  • ios