ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕಾಲರಾ ಭೀತಿ: ತಗಡೂರು ಗ್ರಾಮದಲ್ಲಿ ತಲ್ಲಣ
ಕಲುಷಿತ ನೀರು ಸೇವಿಸಿ ಕೆ.ಸಾಲುಂಡಿಯಲ್ಲಿ ಓರ್ವ ಯುವಕ ಮೃತಪಟ್ಟು, 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಪ್ರಕರಣ ಬೆನ್ನಲ್ಲೆ ಸಿಎಂ ಸ್ವಕ್ಷೇತ್ರದಲ್ಲಿ ಕಾಲರ ಕಾಡೋಕೆ ಶುರುವಾಗಿದೆ. ಕಲುಷಿತ ನೀರು ಸೇವಿಸಿದ ಪರಿಣಾಮ ಗ್ರಾಮದಲ್ಲಿ ಕಾಲರದ ಭೀತಿ ಎದುರಾಗಿದೆ.
ವರದಿ: ಮಧು.ಎಂ.ಚಿನಕುರಳಿ, ಮೈಸೂರು.
ಮೈಸೂರು (ಮೇ.22): ಕಲುಷಿತ ನೀರು ಸೇವಿಸಿ ಕೆ.ಸಾಲುಂಡಿಯಲ್ಲಿ ಓರ್ವ ಯುವಕ ಮೃತಪಟ್ಟು, 40 ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಪ್ರಕರಣ ಬೆನ್ನಲ್ಲೆ ಸಿಎಂ ಸ್ವಕ್ಷೇತ್ರದಲ್ಲಿ ಕಾಲರ ಕಾಡೋಕೆ ಶುರುವಾಗಿದೆ. ಕಲುಷಿತ ನೀರು ಸೇವಿಸಿದ ಪರಿಣಾಮ ಗ್ರಾಮದಲ್ಲಿ ಕಾಲರದ ಭೀತಿ ಎದುರಾಗಿದೆ. ಸಿಎಂ ಸಿದ್ದರಾಮಯ್ಯ ಕ್ಷೇತ್ರದಲ್ಲಿ ಕಾಲರ ಭೀತಿ ಉಂಟಾಗಿದೆ. ಕಲುಷಿತ ನೀರಿಗೆ ತಗಡೂರು ಗ್ರಾಮದಲ್ಲಿ ತಲ್ಲಣಗೊಂಡಿದೆ. ಚಾಮುಂಡೇಶ್ವರಿ ಕ್ಷೇತ್ರದ ಕೆ.ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಓರ್ವ ಬಾಲಕ ಸಾವನ್ನಪ್ಪಿ 50 ಮಂದಿ ಅಸ್ವಸ್ಥಗೊಂಡಿದ್ದರು. ಇದರ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ತಗಡೂರು ಗ್ರಾಮದಲ್ಲಿ ಕಾಲರ ಖಾಯಿಲೆ ಪತ್ತೆಯಾಗಿದೆ.
ತಗಡೂರು ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿದ ಪರಿಣಾಮ ಗ್ರಾಮದಲ್ಲಿ 3 ಮಂದಿಗೆ ಕಾಲರ ಕಾಣಿಸಿಕೊಂಡಿದೆ. ಗ್ರಾಮದ 25 ಪುಟ್ಟ ಮಕ್ಕಳು ಸೇರಿ 114 ಮಂದಿಗೆ ತಪಾಸಣೆ ಮಾಡಲಾಗಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರು ಕಲುಷಿತಗೊಂಡಿದ್ದು ಶುದ್ಧ ಕುಡಿಯುವ ನೀರಿನ ಪೂರೈಕೆ ಮಾಡುತ್ತಿಲ್ಲ ಅನ್ನೋ ಆರೋಪ ಕೇಳಿ ಬಂದಿದೆ. ಗ್ರಾಮದಲ್ಲಿ ಮೂರು ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆಯಂತೆ. ಬೋರ್ ವೆಲ್ ನೀರಿಗೆ ಕಲುಷಿತ ನೀರು ಸೇರಿದ ಪರಿಣಾಮ ತಗಡೂರು ಗ್ರಾಮದಲ್ಲಿ ಕುಡಿಯುವ ಕಲುಷಿತಗೊಂಡಿರೋ ಶಂಕೆ ವ್ಯಕ್ತವಾಗಿದೆ.
ಮಾನವ ಆನೆ ಸಂಘರ್ಷ: ಏಕಕಾಲದಲ್ಲಿ ನಾಳೆಯಿಂದ ಮೂರು ದಿನಗಳ ಕಾಲ ಆನೆ ಗಣತಿ!
ಹೀಗಾಗಿ ಗ್ರಾಮಸ್ಥರು ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಿ ಅನ್ನೋ ಒತ್ತಾಯ ಕೇಳಿ ಬಂದಿದೆ. ಕಾಲರ ಪತ್ತೆಯಾಗಿರೋ ಹಿನ್ನಲೆ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಅಲಾರ್ಟ್ ಆಗಿದೆ. ಇಡೀ ಗ್ರಾಮಸ್ಥರಿಗೆ ಪ್ರಾಥಮಿಕ ಚಿಕಿತ್ಸೆ ಕೊಡಲು ಮುಂದಾಗಿದ್ದು, ತೀವ್ರ ಅಸ್ವಸ್ಥರಾದವರನ್ನ ಆಸ್ಪತ್ರೆಗೆ ಶಿಫ್ಟ್ ಮಾಡಲಾಗುತ್ತಿದೆ. ಇನ್ನಾದ್ರೂ ಸಿಎಂ ತವರಿನಲ್ಲಿ ಶುದ್ಧ ಕುಡಿಯುವ ನೀರಿವ ವ್ಯವಸ್ಥೆ ಕಲ್ಪಿಸಬೇಕಿದೆ. ಜನರ ಆರೋಗ್ಯದ ಮೇಲೆ ಕಾಳಜಿ ವಹಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮುಂದಾಗಬೇಕಿದೆ.