ಡಿವೈಡರ್ ಗೆ ಕಾರು ಡಿಕ್ಕಿ : ಆರ್ ಟಿ ಓ ಇನ್ಸ್ ಪೆಕ್ಟರ್ ಸ್ಥಳದಲ್ಲೇ ಸಾವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Jul 2018, 5:47 PM IST
Chitradurga Traffic CPI Killed in car accident at Shira
Highlights

  • ಚಿತ್ರದುರ್ಗದ ಆರ್ ಟಿ ಓ ಇನ್ಸ್ ಪೇಕ್ಟರ್ ದೇವರಾಜು [50] ಮೃತರು
  • ಶಿರಾಗೆ ಆಗಮಿಸಿ ವಾಪಸ್ ತೆರಳುವಾಗ ಅಪಘಾತ

ಚಿತ್ರದುರ್ಗ[ಜು.20]: ಡಿವೈಡರ್ ಗೆ ಕಾರು ಡಿಕ್ಕಿಯಾಗಿ ಆರ್ ಟಿ ಓ ಇನ್ಸ್ ಪೆಕ್ಟರ್ ಒಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾವರೆಕೆರೆ ಬಳಿ ನಡೆದಿದೆ.

ಚಿತ್ರದುರ್ಗದ ಆರ್ ಟಿ ಓ ಇನ್ಸ್ ಪೆಕ್ಟರ್ ದೇವರಾಜು [50] ಮೃತರು. ಮುಂಜಾನೆ ಶಿರಾಗೆ ಆಗಮಿಸಿ ವಾಪಸ್ ತೆರಳುವಾಗ ಅಪಘಾತ ಸಂಭವಿಸಿದೆ. ಕಾರು ಚಾಲಕ ಅಶೋಕ ಎಂಬುವವರು ಕೂಡ ಗಂಭೀರವಾಗಿ ಗಾಯಗೊಂಡಿದ್ದು ಶಿರಾ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

loader