ಚಿತ್ರದುರ್ಗದ ವಿದ್ಯಾರ್ಥಿಗಳು ಮಧ್ಯಪ್ರದೇಶದಲ್ಲಿ ಲಾಕ್..!
ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನದ ಒಂದು ವರ್ಷದ ವಿನಿಮಯ ಕೋರ್ಸ್‌ನಡಿ ಅಧ್ಯಯನಕ್ಕೆ ಮಧ್ಯಪ್ರದೇಶದ ದೇವಾಸ್ ನವೋದಯ ಶಾಲೆಗೆ ಹೋಗಿದ್ದ ತಾಲೂಕಿನ ಉಡುವಳ್ಳಿ ನವೋದಯ ಶಾಲೆಯ 9ನೇ ತರಗತಿಯ 23 ವಿದ್ಯಾರ್ಥಿಗಳು ಲಾಕ್‌ಡೌನ್ ನಿಮಿತ್ತ ವಾಪಸ್ ತಮ್ಮ ಊರುಗಳಿಗೆ ಬರಲಾಗದ ಕಾರಣಕ್ಕೆ ಪೋಷಕರು ಆತಂಕಕ್ಕೀಡಾಗಿದ್ದಾರೆ.
ಚಿತ್ರದುರ್ಗ(ಏ.15): ಭಾಷೆ ಮತ್ತು ಸಾಂಸ್ಕೃತಿಕ ಅಧ್ಯಯನದ ಒಂದು ವರ್ಷದ ವಿನಿಮಯ ಕೋರ್ಸ್‌ನಡಿ ಅಧ್ಯಯನಕ್ಕೆ ಮಧ್ಯಪ್ರದೇಶದ ದೇವಾಸ್ ನವೋದಯ ಶಾಲೆಗೆ ಹೋಗಿದ್ದ ತಾಲೂಕಿನ ಉಡುವಳ್ಳಿ ನವೋದಯ ಶಾಲೆಯ 9ನೇ ತರಗತಿಯ 23 ವಿದ್ಯಾರ್ಥಿಗಳು ಲಾಕ್‌ಡೌನ್ ನಿಮಿತ್ತ ವಾಪಸ್ ತಮ್ಮ ಊರುಗಳಿಗೆ ಬರಲಾಗದ ಕಾರಣಕ್ಕೆ ಪೋಷಕರು ಆತಂಕಕ್ಕೀಡಾಗಿದ್ದಾರೆ.
ಪ್ರತಿ ಶೈಕ್ಷಣಿಕ ವರ್ಷ 9ನೇ ತರಗತಿಯಲ್ಲಿನ ಆಯ್ದ ಶೇ 30 ರಷ್ಟುವಿದ್ಯಾರ್ಥಿಗಳನ್ನು ಒಂದು ವರ್ಷದ ಕೋರ್ಸ್‌ಗೆ ಆಯ್ಕೆ ಮಾಡಿ ಕಳುಹಿಸಿಕೊಡಲಾಗುತ್ತದೆ. ಹಾಗೆಯೇ ಉಡುವಳ್ಳಿಯ ನವೋದಯ ವಿದ್ಯಾಲಯದಕ್ಕೆ ಇದೇ ಕಾರ್ಯಕ್ರಮದಡಿಯಲ್ಲಿ ಇಲ್ಲಿನ ಭಾಷೆ, ಸಂಸ್ಕತಿ ಅಧ್ಯಯನಕ್ಕೆಂದು ಮಧ್ಯಪ್ರದೇಶದಿಂದ 21 ವಿದ್ಯಾರ್ಥಿಗಳು ಆಗಮಿಸಿದ್ದಾರೆ.
ನಿದ್ರೆ ಕಾಣದ ಕಣ್ಣು, ಚೈತನ್ಯ ಕಳೆದುಕೊಂಡ ದೇಹಗಳು: ಇದು ಪೊಲೀಸರ ಬವಣೆ..!
ಈ ಮಧ್ಯೆ ಅಕ್ಟೋಬರ್ ತಿಂಗಳಿನಲ್ಲಿ ಒಂದು ತಿಂಗಳು ರಜೆಯಿದ್ದ ಪ್ರಯುಕ್ತ ವಿದ್ಯಾರ್ಥಿಗಳು ತಂತಮ್ಮ ರಾಜ್ಯಗಳ ತಮ್ಮ ಊರುಗಳಿಗೆ ಮರಳಿ ಮತ್ತೆ ನವೆಂಬರ್‌ಗೆ ಈ ಕೋರ್ಸ್‌ನ ಎರಡನೇ ಅವಧಿಗೆ ವಾಪಸ್ಸಾಗಿದ್ದಾರೆ. ಒಂದು ವರ್ಷದ ಕೋರ್ಸ್ ಮುಗಿದಿರುವ ವಿದ್ಯಾರ್ಥಿಗಳು ತಮ್ಮ ರಾಜ್ಯಗಳಿಗೆ ಮರಳಲು ಸಿದ್ಧತೆ ಮಾಡಿಕೊಳ್ಳುತ್ತಿರುವಾಗಲೇ ಮಾಚ್‌ರ್ ಕೊನೆಯ ಹಂತದಲ್ಲಿ ದೇಶಾದ್ಯಂತ ಲಾಕ್‌ಡೌನ… ಘೋಷಣೆಯಾಗಿದೆ.
ಟೆಲಿಕಾನ್ಫರೆಸ್ಸ್:
ಈ ಸಂಬಂಧ ಫೆ. 13ರಂದು (ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ ರಾಜ್ಯಗಳನ್ನು ಒಳಗೊಂಡ ಹೈದರಾಬಾದ… ವಲಯ) ಹೈದರಾಬಾದ್
ಮತ್ತು ಭೂಪಾಲ್ ವಯಗಳ ನವೋದಯ ಶಾಲೆಗಳ ಉಸ್ತುವಾರಿ ನೋಡಿಕೊಳ್ಳುವ ಡಿಸಿಗಳು ಪರಸ್ಪರ ಟೆಲಿಕಾನ್ಫರೆಸ್ಸ್ ಮೂಲಕ ಮಾತನಾಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ಲಾಕ್‌ಡೌನ್ ತೆರವುಗೊಳ್ಳುವವರೆಗೂ ದೇಶಾದ್ಯಂತ ಈ ಕೋರ್ಸಗಾಗಿ ವಿವಿಧೆಡೆ ತೆರಳಿರುವ ಸಾವಿರಾರು ಮಕ್ಕಳನ್ನು ಸ್ವಂತ ಊರುಗಳಿಗೆ ಕಳುಹಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸ್ಮಾರ್ಟ ಫೋನ್ ಬಳಸಿ ಆಯಾ ಮಕ್ಕಳ ಪೋಷಕರಿಗೆ ವೀಡಿಯೋ ಕಾಲ…ಗಳ ಮೂಲಕ ಉಭಯ ಕುಶಲೋಪರಿ ಮಾತನಾಡಲು ಅವಕಾಶ ಮಾಡಿಕೊಡಲಾಗಿದೆ. ಮಕ್ಕಳು 6ನೇ ತರಗತಿಯಿಂದಲೂ ವಸತಿ ಶಾಲೆಯಲ್ಲಿ ಕಲಿಯುವ ಅಭ್ಯಾಸಕ್ಕೆ ಒಗ್ಗಿ ಹೋಗಿರುವುದರಿಂದ ಅವರು ಬಹುತೇಕ ಆರಾಮವಾಗಿದ್ದು , ಕೊರೋನಾ ಪಿಡುಗಿಗೆ ಹೆದರಿರುವ ಪೋಷಕರೇ ಅತಿ ಹೆಚ್ಚು ಆತಂಕಗೊಂಡಿರುವುದರಿಂದ ಅವರನ್ನು ಸಂತೈಸುವುದೇ ದೊಡ್ಡ ಸವಾಲಾಗಿದೆ.
ಚಿತ್ರದುರ್ಗ: ಕೆರೆ ಮೀನು ತಿನ್ನಲು ಮುಗಿಬಿದ್ದ ಮಂದಿ
ಲಾಕ್‌ಡೌನ್‌ನಿಂದಾಗಿ ನಮ್ಮ ಮಕ್ಕಳು ಅಲ್ಲಿ , ಅವರ ಮಕ್ಕಳು ಇಲ್ಲೇ ರಜೆಯ ದಿನಗಳನ್ನು ಕಳೆಯುವಂತಾಗಿದೆ. ಮಕ್ಕಳ ಊಟ, ವಸತಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದು ಪೋಷಕರು ಆತಂಕ ಪಡಬೇಕಾದ ಅಗತ್ಯವಿಲ್ಲ ಎಂದು ಉಡುವಳ್ಳಿ ನವೋದಯ ವಸತಿ ಶಾಲೆ ಪ್ರಾಂಶುಪಾಲ ಸ್ಫೀಫನ್ ಜಯರಾಜ ತಿಳಿಸಿದ್ದಾರೆ.