ಹಿರಿಯೂರು ತಾಲೂಕಿನ ಡಿಆರ್‌ಎಫ್‌ಒ ಆಗಿದ್ದ ವೆಂಕಟೇಶ್ (40) ಚಿತ್ರದುರ್ಗದ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲವಾದ್ದರಿಂದ, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. 

ಚಿತ್ರದುರ್ಗ: ಹಿರಿಯೂರು ತಾಲೂಕಿನಲ್ಲಿ ಡಿಆರ್‌ಎಫ್‌ಒ ಆಗಿದ್ದ ವ್ಯಕ್ತಿಯೋರ್ವ ಕುಸಿದು ಬಿದ್ದು ಧಾರುಣ ಅಂತ್ಯ ಕಂಡಿದ್ದಾರೆ. ಆದರೆ ಸಾವಿಗೆ ಏನು ಕಾರಣ ಎನ್ನುವುದು ತಿಳಿಯದ ಕಾರಣ ಪ್ರಕರಣ ಬೇಧಿಸಲು ಖಾಕಿ ಪಡೆ ಸಜ್ಜಾಗಿದೆ. ಅಷ್ಟಕ್ಕೂ ಡಿಆರ್‌ಎಫ್‌ಒಗೆ ಆಗಿದ್ದೇನು? ಕುಸಿದು ಬಿದ್ದು ಸಾವನ್ನಪ್ಪಿದ್ದೇಕೆ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆ ಹಾಕಕುತ್ತಿದ್ದಾರೆ. ಈ ಕುರಿತು ಸಂಪೂರ್ಣ ವಿವರ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಯಾರು ಈ ಡಿಆರ್‌ಎಫ್‌ಒ?

ಮನುಷ್ಯನ ಜೀವನ ನೀರ ಮೇಲಿನ ಗುಳ್ಳೆಯಂತೆ ಎನ್ನುವುದು ಗಾದೆಯಾದರೂ ಮಾನವ ಬದುಕಿನಲ್ಲಿ ಸಹಜ ಅಳವಡಿಕೆಯಾಗಿದೆ. ಅದೇ ರೀತಿಯಾಗಿಯೆ ನಿಂತ, ನಿಂತಲ್ಲೇ ಒರ್ವ ವ್ಯಕ್ತಿ ಸಾವನಪ್ಪಿದ ಘಟನೆ ಚಿತ್ರದುರ್ಗದಲ್ಲಿ ಜೋಗಿ ಮಟ್ಟಿಯಲ್ಲಿ ಇರುವ ತಮ್ಮ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಪೊಲೀಸ ಮೂಲಗಳಿಂದ ತಿಳಿದು ಬಂದಿದೆ. ಹಿರಿಯೂರಲ್ಲಿ ಡಿಆರ್‌ಎಫ್‌ಒ ಆಗಿದ್ದ ವೆಂಕಟೇಶ್(40) ಮೃತ ವ್ಯಕ್ತಿ. 

ಪ್ರಕರಣ ದಾಖಲಾಗಿದ್ದೆಲ್ಲಿ?

ಕುಸಿದು ಬಿದ್ದ ವೆಂಕಟೇಶ್ ಸಾವನ್ನು ಸಹಜವಾಗಿ ಸಾವನ್ನಪ್ಪಿದ್ದ ವೆಂಕಟೇಶ ಅವರ ಪ್ರಕರಣ ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಬಳಿ ದಿಡೀರ್ ಕುಸಿದು ಬಿದ್ದು ದುರ್ಮರಣ ಹೊಂದಿದ್ದ ವೆಂಕಟೇಶ್ ಪ್ರಕರಣದ ಕುರಿತು ಪೊಲೀಸರು ತನಿಖೆಗೆ ಮುಂದಾಗಿದ್ದಾರೆ ಎನ್ನುವುದು ಖಾಕಿ ಮೂಲಗಳಿಂದ ತಿಳಿದು ಬಂದಿದೆ.

ದಿಗ್ಭ್ರಮೆಗೆ ಒಳಗಾದ ಸಿಬ್ಬಂದಿ!‌

ಉಪ ವಲಯ ಅರಣ್ಯಾಧಿಕಾರಿಯೊಬ್ಬರು ದಿಢೀರನೆ ಕುಸಿದು ಬಿದ್ದು ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನಲ್ಲಿ ನಡೆದಿದೆ. ಅಧಿಕಾರಿಯ ಹಠಾತ್ ನಿಧನವು ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ತೀವ್ರ ದಿಗ್ಭ್ರಮೆ ಮತ್ತು ಆಘಾತ ಮೂಡಿಸಿದೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್‌ ಮೂಲ ಹಾಗೂ ಪೋಸ್ಟ್‌ ಮಾಟಂ ನಿಂದ ಬರುವ ರಿಪೋರ್ಟ್ ಮೇಲೆ ಎಲ್ಲರ ಕಣ್ಣು ನೆಟ್ಟಿವೆ.

ಕುಟುಂಬದಲ್ಲಿ ಮನೆ ಮಾಡಿದ ಸ್ಮಶಾನ ಮೌನ!

ಇಂದು ಇದ್ದ ವ್ಯಕ್ತಿ ನಾಳೆ ಇಲ್ಲ ಎಂದರೆ, ತಂದೆ-ತಾಯಿಯರಿಗೆ ಮಗ ಬೇಕಾದರೆ, ಇಂದು ಪುಟ್ಟ ಮಕ್ಕಳಿಗೆ ಇಲ್ಲಿ ತಂದೆಯ ಅನಿವಾರ್ಯತೆ ಇದೆ. ಆದ್ದರಿಂದ ಅವರ ಹಠಾತ್‌ ನಿಧನ ಇಡೀ ಕುಟುಂಬವನ್ನೇ ಶೋಕ ಸಾಗರದಲ್ಲಿ ಮುಳುಗಿಸಿದೆ. ಮೌನವಾದ ಮನೆಯಲ್ಲಿ ಇಂದು ಕಣ್ಣೀರಿನ ಹೊಳೆ ಹರಿಯುತ್ತಿದೆ. ಇತ್ತ ಅರಣ್ಯ ಸಿಬ್ಬಂದಿಗಳಿಗೂ ಈ ಶಾಕ್‌ ನಿದ್ದೆಗೆಡಿಸಿದೆ. ಆದ್ದರಿಂದ ಪೊಲೀಸ್‌ ಹಾಗೂ ವೈದ್ಯಕೀಯ ಮೂಲಗಳು ಅವರ ಸಾವಿನ ಕುರಿತು ಏನು ಹೇಳುತ್ತವೆ ಎನ್ನುವುದನ್ನು ಕಾದು ನೋಡಬೇಕಿದೆ.