ಚಿತ್ರದುರ್ಗ (ಸೆ.10) :  ಆರೋಗ್ಯ ಸಚಿವ‌ರ ತವರು ಜಿಲ್ಲೆಯಲ್ಲಿಯೇ ಅಂಬ್ಯುಲೆನ್ಸ್ ಗಾಗಿ ರೋಗಿಗಳು ಪರದಾಡುತ್ತಿದ್ದಾರೆ. 

ಚಿತ್ರದುರ್ಗದ ಸರ್ಕಾರಿ ಜಿಲ್ಲಾಸ್ಪತ್ರೆ ಯಲ್ಲಿ ಕೇವಲ ಎರಡು ಅಂಬ್ಯುಲೆನ್ಸ್ ಗಳಿದ್ದು, ಇದರಿಂದ ಇಲ್ಲಿನ ಜನರು  ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. 

ಇನ್ನು 17 ಆ್ಯಂಬುಲೆನ್ಸ್ ಗಳು  ರಿಪೇರಿಗೆ ಎಂದು ಮೂಲೇ ಸೇರಿ ತುಕ್ಕು ಹಿಡಿಯುತ್ತಿವೆ. ಹೀಗೆ ಮೂಲೆಯಲ್ಲಿ ನಿಲ್ಲಿಸಿರುವ ಹಾಳಾದ ಆ್ಯಂಬುಲೆನ್ಸ್ ಗಳು ಮದ್ಯ ವ್ಯಸನಿಗಳ ಅಕ್ರಮ ಚಟುವಟಿಕೆ ಕೇಂದ್ರವಾಗುತ್ತಿವೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇನ್ನೊಂದು ಕಡೆ ಗಂಭೀರ ಆರೋಪ ಒಂದು ಕೇಳಿ ಬರುತ್ತಿದ್ದು, ಆ್ಯಂಬ್ಯುಲೆನ್ಸ್ ಮಾಲಿಕರು  ಹಾಗೂ ಆರೋಗ್ಯಾಧಿಕಾರಿಗಳು ಶಾಮೀಲಾಗಿದ್ದಾರೆ ಎನ್ನಲಾಗುತ್ತಿದೆ.  ಆರೋಗ್ಯ ಸಚಿವರ ತವರಿನಲ್ಲಿಯೇ ಈ ರೀತಿ ಸಮಸ್ಯೆಯಾಗುತ್ತಿದ್ದು, ಬಡ ರೋಗಿಗಳು ಪರದಾಡುವಂತಾಗಿದೆ. 

ಕೇವಲ ಎರಡು ಆ್ಯಂಬುಲೆನ್ಸ್ ಗಳಿರುವ ಕಾರಣದಿಂದ  ಇಲ್ಲಿನ ಜನರು ಆತಂಕದಲ್ಲಿಯೇ ದಿನ ಕಳೆಯುತ್ತಿದ್ದಾರೆ.