ಚಿರಂಜೀವಿಯ ಪುತ್ರಿ ಇತ್ತೀಚೆಗಷ್ಟೇ ಭಾರೀ ನಿರೀಕ್ಷೆ ಇಟ್ಟುಕೊಂಡು ಪ್ರೊಡಕ್ಷನ್‌ಗೆ ಇಳಿದಿದ್ದರು. ಆದರೆ ಮೊದಲು ಕೈಗೆತ್ತಿದ ಪ್ರಾಜೆಕ್ಟ್ ಮೊಟಕಾಗಿರುವುದು ದುರಾದೃಷ್ಟ. ಗೋಲ್ಡ್ ಬಾಕ್ಸ್ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ ಅಡಿಯಲ್ಲಿಚಿರಂಜೀವಿ ಪುತ್ರಿ ಸುಶ್ಮಿತಾ ವೆಬ್ ಸಿರೀಸ್‌ ಒಂದನ್ನು ಆರಂಭಿಸಿದ್ದರು.

ಓಯ್ ಖ್ಯಾತಿಯ ಆನಂದ್ ರಂಗ ನಟಿಸಿದ ಸಿರೀಸ್‌ನಲ್ಲಿ , ಪ್ರಕಾಶ್‌ ರಾಜ್ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಆದರೆ ಆರಂಭಿಸಿದ ಕೆಲವೇ ದಿನದಲ್ಲಿ ವೆಬ್‌ ಸಿರೀಸ್ ಶೂಟಿಂಗ್ ಸ್ಥಗಿತವಾಗಿದೆ. ಅಂದಹಾಗೆ ಇದಕ್ಕೆ ಕಾರಣ ಬೇರೇನೂ ಅಲ್ಲ, ಕೊರೋನಾ ವೈರಸ್.

ಸುನೀಲ್‌ ಶೆಟ್ಟಿ ವರ್ಕೌಟ್‌ ವಿಡಿಯೋ ವೈರಲ್‌; ಕಿಚ್ಚ ಸುದೀಪ್‌ ರಿಯಾಕ್ಷನ್‌ ಹೇಗಿತ್ತು ನೋಡಿ?

ಕೊರೋನಾ ವೈರಸ್ ಬಗ್ಗೆ ಸಾಕಷ್ಟು ಮುಂಜಾಗೃತೆ ತೆಗೆದುಕೊಂಡರೂ ತಂಡದ ಸದಸ್ಯರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ತಂಡದ ಎಲ್ಲರಿಗೂ ಕೊರೋನಾ ವೈರಸ್ ಟೆಸ್ಟ್ ಮಾಡಿಸಲಾಗಿದೆ ಎಂದು ಸುಶ್ಮಿತಾ ತಿಳಿಸಿದ್ದಾರೆ. ಎಲ್ಲರೂ ತಮ್ಮ ಕೊರೋನಾ ಟೆಸ್ಟ್ ರಿಪೋರ್ಟ್ ನಿರೀಕ್ಷಿಸುತ್ತಿದ್ದು, ಮನೆಯಲ್ಲಿಯೇ ಕ್ವಾರೆಂಟೈನ್ ಆಗಿದ್ದಾರೆ.

ಕೊರೋನಾ ವೈರಸ್‌ನಿಂದ ಮೊದಲನೇ ವೆಬ್ ಸಿರೀಸ್‌ಗೆ ಹೀಗೆ ತೊಡಕಾಗಿರುವುದರಿಂದ ಸುಶ್ಮಿತಾ ಅವರು ಸ್ವಲ್ಪ ಮಟ್ಟಿಗೆ ಬೇಸರಿಸಿಕೊಂಡಿದ್ದಾರೆ. ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗಿ ಬಹಳಷ್ಟು ಶೂಟಿಂಗ್ ಆರಂಭವಾಗಿ ಪುನಃ ಮೊಟಕಾಗಿದೆ.