Asianet Suvarna News Asianet Suvarna News

ತಾಪಂ ಅಧ್ಯಕ್ಷ, ಪಿಡಿಒಗೆ ಅಶುದ್ಧ ನೀರು ಕುಡಿಸಿದ ಮಕ್ಕಳು!

ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುತ್ತಿರುವ ನೀರು ಶುದ್ಧವಾಗಿಲ್ಲ ಎಂದು ತಾಪಂ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಅಶುದ್ಧ ನೀರನ್ನು ತಂದು ಕುಡಿಸುವ ಮೂಲಕ ಮಕ್ಕಳು ಇನ್ನು ಮುಂದೆ ಶುದ್ಧ ನೀರು ನಮಗೆ ಬೇಕೆ ಬೇಕೆ ಎಂದು ಅಧಿಕಾರಿಗಳ ಮುಂದೆ ಗಲಾಟೆ ಮಾಡಿದ ಘಟನೆ ತಾಲೂಕಿನ ಮತ್ತಿಹಳ್ಳಿಯಲ್ಲಿ ನಡೆಯಿತು.

children makes taluk panchayath president pdo drink Unclean water
Author
Bangalore, First Published Dec 3, 2019, 12:38 PM IST

ತುಮಕೂರು(ಡಿ.03): ನಮಗೆ ಶುದ್ಧ ಕುಡಿಯುವು ನೀರಿನ ವ್ಯವಸ್ಥೆ ಕಲ್ಪಿಸಿಕೊಡಿ, ನಮ್ಮ ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕದಿಂದ ಬರುತ್ತಿರುವ ನೀರು ಶುದ್ಧವಾಗಿಲ್ಲ ಎಂದು ತಾಪಂ ಅಧ್ಯಕ್ಷರಿಗೆ ಹಾಗೂ ಪಿಡಿಒಗೆ ಅಶುದ್ಧ ನೀರನ್ನು ತಂದು ಕುಡಿಸುವ ಮೂಲಕ ಮಕ್ಕಳು ಇನ್ನು ಮುಂದೆ ಶುದ್ಧ ನೀರು ನಮಗೆ ಬೇಕೆ ಬೇಕೆ ಎಂದು ಅಧಿಕಾರಿಗಳ ಮುಂದೆ ಗಲಾಟೆ ಮಾಡಿದ ಘಟನೆ ತಾಲೂಕಿನ ಮತ್ತಿಹಳ್ಳಿಯಲ್ಲಿ ನಡೆಯಿತು.

ತಾಲೂಕಿನ ಮತ್ತಿಹಳ್ಳಿ ಗ್ರಾಪಂನಿಂದ ಕೊನೇಹಳ್ಳಿಯ ಶ್ರೀ ರಂಗನಾಥ ಪ್ರೌಢ ಶಾಲಾವರಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮಸಭೆಯಲ್ಲಿ ಮಕ್ಕಳು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ.

ಮೈಸೂರು ವಿಮಾನ ನಿಲ್ದಾಣಕ್ಕೆ ವೋಲ್ವೋ ಬಸ್‌ ಸೇವೆ

ಕೋನೆಹಳ್ಳಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಿದ್ದು, ಅದು ನಾಮಕಾವಸ್ಥೆಗೆ ಮಾತ್ರ ಇದೆ. ಪ್ರತಿನಿತ್ಯ ರಿಪೇರಿಗೆ ಒಳಗಾಗುತ್ತಿದ್ದು, ಅದರಲ್ಲಿ ಬರುತ್ತಿರುವ ನೀರು ಶುದ್ಧವಾಗಿಲ್ಲ. ಆದ್ದರಿಂದ ನೀವುಗಳು ಅದರ ನೀರನ್ನೇ ಕುಡಿದು ಪರೀಕ್ಷಿಸಿ ನಮಗೆ ಶಾಶ್ವತವಾಗಿ ಶುದ್ಧ ಕುಡಿಯುವ ನೀರು ದೊರೆಯುವಂತೆ ವ್ಯವಸ್ಥೆ ಸರಿಪಡಿಸಿ ಎಂದು ಮಕ್ಕಳು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಯಿಸಿದ ತಾಪಂ ಅಧ್ಯಕ್ಷರು ಶೀಘ್ರ ನೀರಿನ ಘಟಕವನ್ನು ದುರಸ್ತಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕಾಂಪೌಂಡ್‌ ಹಾಕಿಸಿ ಕೊಡಿ:

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಶಾಲೆಗಳ ಮಕ್ಕಳು ನಮ್ಮ ಶಾಲೆಗಳಿಗೆ ಕಾಂಪೌಂಡ್‌ ವ್ಯವಸ್ಥೆಯನ್ನು ಮಾಡಿಕೊಡಿ. ನಮ್ಮ ಶಾಲಾವರಣದಲ್ಲಿ ಗಿಡಗಳನ್ನು ಹಾಕಿದ್ದು, ಅವುಗಳ ಸುರಕ್ಷತೆ ಹಾಗೂ ಕೊನೇಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾವರಣದಲ್ಲಿ ಅನಪೇಕ್ಷೀತ ಗಿಡಗಳು ಬೆಳದಿದ್ದು, ಅಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಅತಿ ಶೀಘ್ರದಲ್ಲಿ ಕಾಂಪೌಂಡ್‌ ವ್ಯವಸ್ಥೆ ಮಾಡಿ ಕೊಡಿ ಎಂದು ಆಗ್ರಹಿಸಿದರು.

ಸಂತೆ ಸ್ಥಳಾಂತರ ಮಾಡಿ:

ರಂಗನಾಥ ಪ್ರೌಢಶಾಲೆ ಮುಂಭಾಗದಲ್ಲಿ ಪ್ರತಿ ಬುಧವಾರದಂದು ಸಂತೆ ನಡೆಯುತ್ತಿದ್ದು, ಇಲ್ಲಿ ಉಳಿದ ತರಕಾರಿ ತ್ಯಾಜ್ಯ, ಪ್ಲಾಸ್ಟಿಕ್‌ ವಸ್ತುಗಳನ್ನು ಬಿಸಾಡಿ ಹೋಗುತ್ತಾರೆ. ಇದರಿಂದ ನಮ್ಮ ಶಾಲೆಗೆ ಗಬ್ಬುವಾಸನೆ ಬೀರುತ್ತಿದ್ದು, ಸಂತೆಯ ಆವರಣದಲ್ಲಿ ಕಸದ ತೊಟ್ಟಿಗಳನ್ನು ಇಡುವ ವ್ಯವಸ್ಥೆ ಮಾಡಿ. ಸಂತೆ ನಡೆಯುವ ಸ್ಥಳವು ರಾಷ್ಟ್ರೀಯ ಹೆದ್ದಾರಿಗೆ 2-3 ಮೀ. ಅಂತರದಲ್ಲಿದ್ದು, ಅಪಘಾತಗಳು ಸಂಭವಿಸುತ್ತಿದ್ದು ಸಂತೆಯನ್ನು ಸ್ಥಳಾಂತರ ಮಾಡಿಕೊಡಿ ಎಂದು ಮಕ್ಕಳು ಒತ್ತಾಯಿಸಿದರು.

ಶಿಕ್ಷಕರ ನೇಮಕ ಮಾಡಿ

ಅಂಚೆಕೊಪ್ಪಲಿನ ಶಾಲೆಯು ಪುನಾರಂಭಗೊಂಡಿದ್ದು, ಶಾಲಾ ಕೊಠಡಿಗಳು ತುಂಬಾ ಶಿಥಿಲಗೊಂಡಿದ್ದು, ಕೊಠಡಿಯ ವ್ಯವಸ್ಥೆ ಬೇಕಾಗಿದೆ. ಕೊನೇಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ದೈಹಿಕ ಶಿಕ್ಷಕರ ಅವಶ್ಯಕತೆ ತುಂಬಾ ಇದ್ದು, ಶಿಕ್ಷಕರನ್ನು ನೇಮಕ ಮಾಡಿ ಎಂದು ಮನವಿ ಮಾಡಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಮಕ್ಕಳು ಮಾತನಾಡಿ ನಮ್ಮ ಶಾಲೆಗೆ ಒಳಚರಂಡಿಯ ವ್ಯವಸ್ಥೆ, ಶುದ್ದ ಕುಡಿಯುವ ನೀರು, ಸೋಲಾರ್‌ ವ್ಯವಸ್ಥೆ, ಕಾಂಪೌಂಡ್‌ ವ್ಯವಸ್ಥೆ ಬೇಕೆಂದು ತಮ್ಮ ಸಮಸ್ಯೆಗಳ ಸರಮಾಲೆಯನ್ನೆ ಬಿಚ್ಚಿಟ್ಟರು.

ಅವ್ಯವಸ್ಥೆಯ ಆಗರ ಮಕ್ಕಳ ಗ್ರಾಮಸಭೆ:

ಮಕ್ಕಳ ರಕ್ಷಣೆಗೆ, ಮಕ್ಕಳ ಶೈಕ್ಷಣಿಕತೆ, ಮಕ್ಕಳ ಸುರಕ್ಷತೆಯ ಬಗ್ಗೆ ಗ್ರಾಮ ಪಂಚಾಯಿತಿಗಳು ನವಂಬರ್‌ ತಿಂಗಳಲ್ಲಿ ಮಕ್ಕಳ ಸಭೆ ನಡೆಸಬೇಕೆಂದು ಆದೇಶ ನೀಡಿದೆ. ಆದರಿ ಈ ಗ್ರಾಮಸಭೆಯಲ್ಲಿ ಸರಿಯಾದ ಆಸನ ವ್ಯವಸ್ಥೆಯಾಗಲಿ, ಧ್ವನಿವರ್ಧಕದ ವ್ಯವಸ್ಥೆಯಾಗಲಿ ಮಾಡಿರಲಿಲ್ಲ. ಇದನ್ನು ಗಮನಿಸಿದ ತಾಪಂ ಅಧ್ಯಕ್ಷ ಶಿವಸ್ವಾಮಿ ಗ್ರಾಪಂ ಅಧಿಕಾರಿಗಳ ವಿರುದ್ಧ ಕೆಂಡಾಮಂಡಲವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ಆರ್ಯವೇದ ಆಸ್ವತ್ರೆಯ ವೈದ್ಯಾಧಿಕಾರಿ ಡಾ. ಸುಮನಾ, ಗ್ರಾ.ಪಂ ಅಧ್ಯಕ್ಷೆ ಪಾರ್ವತಮ್ಮ, ಉಪಾಧ್ಯಕ್ಷ ಲಿಂಗರಾಜು. ಸದಸ್ಯ ಅಶೋಕ್‌ ಮಾದಿಹಳ್ಳಿ, ಅರುಣ್‌, ಮಕ್ಕಳ ಕಾರ್ಯಕರ್ತ ಪ್ರಶಾಂತ್‌ಕರೀಕೆರೆ, ಜ್ಞಾನ ಆರ್ಥಿಕ ಸಾಕ್ಷರತಾ ಸಮಾಲೋಚಕ ರೇಖಾ, ರಂಗನಾಥ ಪ್ರೌಢಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯ ವಿಶ್ವನಾಥ್‌, ಮೊರಾರ್ಜಿ ಶಾಲೆಯ ಸುಮಲತಾ, ಬದುಕು ಸಂಸ್ಥೆ ನಂದಕುಮಾರ್‌ ಸೇರಿದಂತೆ ವಿವಿಧ ಶಾಲೆಗಳ ಶಿಕ್ಷಕರು, ಮಕ್ಕಳು ಹಾಜರಿದ್ದರು.

160 ಗ್ರಾಂ ತೂಕದ ಮೊಟ್ಟೆಇಟ್ಟಿರುವ ಗಿರಿರಾಜ ಕೋಳಿ!

ಮಕ್ಕಳು ಪ್ರಶ್ನೆ ಮಾಡುವ ಮನೋಬಲ ಬೆಳೆಸಿಕೊಳ್ಳಬೇಕು. ಅದಕ್ಕೆ ಬೇಕಾಗುವ ಪೂರಕ ವಾತಾವರಣವನ್ನು ಶಿಕ್ಷಕರು ಕಲ್ಪಿಸಬೇಕು. ನೀವು ಹೇಳಿರುವ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟಅಧಿಕಾರಿಗಳೊಂದಿಗೆ ಮಾತನಾಡಿ ಆದಷ್ಟುಬೇಗ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಾಪಂ ಅಧ್ಯಕ್ಷ ಶಿವಸ್ವಾಮಿ ಹೇಳಿದ್ದಾರೆ.

ಶಾಲಾ ಕಾಂಪೌಂಡ್‌ಗಳನ್ನು ನರೇಗಾ ಯೋಜನೆಯಲ್ಲಿ ಸಿದ್ದಪಡಿಸಲಾಗುವುದು. ಶಾಲಾ ಒತ್ತುವರಿಗಳು ಹಾಗೂ ದುರಸ್ತಿಗಳು ಇದ್ದಲ್ಲಿ ನೇರವಾಗಿ ನಮಗೆ ಅರ್ಜಿಯನ್ನು ಸಲ್ಲಿಸಿ ಎಂದು ತಾಪಂ ಇಒ ಸುದರ್ಶನ್‌ ಹೇಳಿದ್ದಾರೆ.

Follow Us:
Download App:
  • android
  • ios