ಮಂಗಳೂರು(ಜ.18): ಕನ​ಕ​ಪುರ ಚಲೋ ಹೆಸ​ರಿನಲ್ಲಿ ಕಲ್ಲಡ್ಕ ಪ್ರಭಾ​ಕರ್‌ ಭಟ್‌ ಕೋಮು ಸೌಹಾ​ರ್ದ​ತೆಗೆ ಬೆಂಕಿ ಹಚ್ಚುವ ಕೆಲಸ ಮಾಡಿ​ದ್ದಾರೆ. ವಯ​ಸ್ಸಾದ ಮೇಲೆ ಅರಳೋ ಮರಳೋ ಎನ್ನುವ ಗಾದೆ​ಯಂತೆ ಅವರು ವರ್ತಿಸುತ್ತಿದ್ದಾರೆ ಎಂದು ಸಂಸದ ಡಿ.ಕೆ.​ಸು​ರೇಶ್‌ ಕಿಡಿ​ಕಾ​ರಿ​ದ್ದಾರೆ.

ಕಾರ್ಯಾಧ್ಯಕ್ಷ ಕಗ್ಗಂಟು : ಕೆಪಿಸಿಸಿ ಅಧ್ಯಕ್ಷತೆ ವಿಳಂಬ

ತಾಲೂ​ಕಿನ ತುಂಗಣಿ ಗ್ರಾಮದಲ್ಲಿ 75 ಲಕ್ಷ ರುಪಾಯಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ಪಂಚಾಯಿತಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಇತಿಹಾಸದಲ್ಲಿ ಎಂದೂ ಧಾರ್ಮಿಕ ಸಂಘರ್ಷ ನಡೆದಿಲ್ಲ. ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿಯಲ್ಲೇ ಬದುಕುತ್ತಿದ್ದೇವೆ. ಕ್ರೈಸ್ತರು, ಮುಸ್ಲಿಮರು, ಹಿಂದುಗಳು ಎಂದು ಭೇದಭಾವ ಮಾಡಿಲ್ಲ. ಇಂಥ ನಮ್ಮ ತಾಲೂಕಿನಲ್ಲಿ ವಯಸ್ಸಾಗಿರುವ ಕಲ್ಲಡ್ಕ ಪ್ರಭಾಕರ್‌ ಭಟ್‌ ಸೌಹಾ​ರ್ದತೆ ಕದ​ಡುವ ಪ್ರಯತ್ನ ಮಾಡಿ​ದ್ದಾರೆ ಎಂದು ಟೀಕಿ​ಸಿ​ದದ್ದಾರೆ.

ರಾಜಕೀಯ ನಿವೃತ್ತಿ:

ನಮ್ಮ ದೇಶದಲ್ಲಿನ ಕ್ರೈಸ್ತ ಮಿಷನರಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು. ಶಿಕ್ಷಣ ಬೇಕು. ಅವ​ರು ಅವರ ಧರ್ಮವನ್ನು ಆಚರಣೆ ಮಾಡುವುದು ಬೇಡವೆ? ನಾವೆಲ್ಲ ರಾಷ್ಟ್ರೀಯತೆಯನ್ನು ಭಾರತೀಯರು ಎಂದು ಬರೆಯುತ್ತೇವೆ. ಹಿಂದು ಎಂದು ಬರೆಯುವುದಿಲ್ಲ. ನಮ್ಮ ತಾಲೂಕಿನಲ್ಲಿ ಕ್ರೈಸ್ತರು ಏಸು ಪ್ರತಿಮೆ ನಿರ್ಮಾಣ ಮಾಡುತ್ತಿದ್ದಾರೆ. ನಾವು ಸಹಕಾರ ನೀಡಿದ್ದೇವೆ ಅಷ್ಟೇ. ಶಿವಕುಮಾರ್‌ ಅವರ 30 ವರ್ಷದ ರಾಜಕೀಯ ಜೀವನದಲ್ಲಿ ಒಬ್ಬರನ್ನು ಮತಾಂತರ ಮಾಡಿಸಿರುವು​ದನ್ನು ಸಾಬೀತು ಪಡಿ​ಸಿ​ದರೆ ನಾನು ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಸವಾಲು ಹಾಕಿದ್ದಾರೆ.