Asianet Suvarna News Asianet Suvarna News

ಕೊರೋನಾ 3ನೇ ಅಲೆ ಭೀತಿ: ಒದ್ದೆ ಬಟ್ಟೆಯಲ್ಲಿ ಮಕ್ಕಳಿಂದ ಗ್ರಾಮದೇವತೆ ಪೂಜೆ

* ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹಿರೇಜಂತಕಲ್‌ ಗ್ರಾಮದಲ್ಲಿ ನಡೆದ ಘಟನೆ
*  ಮಕ್ಕಳಿಂದ ಪೂಜೆ ಮಾಡಿಸಲು ಮುಂದಾದ ಪಾಲಕರು 
* ಮಕ್ಕಳಿಗೆ ತಣ್ಣೀರು ಸ್ನಾನ ಮಾಡಿಸಿ ಒದ್ದೆ ಬಟ್ಟೆಯಲ್ಲೇ ದ್ಯಾಮವ್ವ ದೇವಿಗೆ ಅಭಿಷೇಕ 
 

Children Did Pooja for Prevent Coronavirus at Gangavati in Koppal grg
Author
Bengaluru, First Published Jun 9, 2021, 7:46 AM IST

ಗಂಗಾವತಿ(ಜೂ.09): ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂಬ ತಜ್ಞರ ವರದಿಯ ಹಿನ್ನೆಲೆಯಲ್ಲಿ ತಾಲೂಕಿನ ಹಿರೇಜಂತಕಲ್‌ ಗ್ರಾಮದಲ್ಲಿ ಮಂಗಳವಾರ ಮಕ್ಕಳಿಗೆ ತಣ್ಣೀರು ಸ್ನಾನ ಮಾಡಿಸಿ, ಬಳಿಕ ಒದ್ದೆ ಬಟ್ಟೆಯಲ್ಲೇ ಅವರಿಂದ ಗ್ರಾಮದ ದ್ಯಾಮವ್ವ ದೇವಿಯ ಪಾದಗಟ್ಟೆಗೆ ಪೂಜೆ ಮಾಡಿಸಿದ ಘಟನೆ ನಡೆದಿದೆ.

ಮಕ್ಕಳಿಂದ ಈ ರೀತಿ ಪೂಜೆ ಮಾಡಿಸಿದರೆ ಅವರಿಗೆ ಕೊರೋನಾ ಬರುವುದಿಲ್ಲ ಎಂದು ಸ್ವಾಮೀಜಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದ್ದು, ಆ ಮಾತು ನಂಬಿ ದೇವಿಯ ವಾರವಾದ ಮಂಗಳವಾರ ತಮ್ಮ ಮಕ್ಕಳಿಂದ ಪೂಜೆ ಮಾಡಿಸಲು ಗ್ರಾಮದ ಹಲವಾರು ಪಾಲಕರು ಮುಂದಾದರು.

ವ್ಯಾಕ್ಸಿನ್‌ ಹಾಕಿಸಿಕೊಳ್ಳಲು ಮುಗಿಬಿದ್ದ ಜನ: ಸಾಮಾಜಿಕ ಅಂತರಕ್ಕೆ ಡೋಂಟ್‌ಕೇರ್‌..!

ಮಕ್ಕಳಿಗೆ ತಣ್ಣೀರು ಸ್ನಾನ ಮಾಡಿಸಿ ಒದ್ದೆ ಬಟ್ಟೆಯಲ್ಲೇ ದ್ಯಾಮವ್ವ ದೇವಿಗೆ ಅಭಿಷೇಕ ಮಾಡಿಸಿದ್ದಾರೆ. ಲಾಕ್‌ಡೌನ್‌ ಮಧ್ಯೆಯೂ ಸ್ವಾಮೀಜಿಯೊಬ್ಬರ ಮಾತು ನಂಬಿ ಇಂತಹ ಅಂಧಾಚರಣೆ ನಡೆಯುತ್ತಿರುವುದು ವ್ಯಾಪಕ ಟೀಕೆಗೆ ಕಾರಣವಾಗಿದೆ.

 

Follow Us:
Download App:
  • android
  • ios