ಬಾಗಲಕೋಟೆ: ವೈದ್ಯರು ಮೃತಪಟ್ಟಿತೆಂದ ಮಗು ಮಾರ್ಗ ಮಧ್ಯೆ ಉಸಿರಾಡಿತು..!
ಅನಾರೋಗ್ಯಕ್ಕೆ ತುತ್ತಾಗಿದ್ದ ಮಗು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದೆ ಎಂದ ವೈದ್ಯರು. ನೋವಿನಲ್ಲೇ ಮಗುವಿನ ಜತೆ ವಾಪಸ್ ಊರಿಗೆ ಹೊರಟ ಪೋಷಕರು. ಮಾರ್ಗ ಮಧ್ಯೆ ಒಂದೆರಡು ಬಾರಿ ಕೆಮ್ಮಿ ಮತ್ತೆ ಸಹಜ ಉಸಿರಾಟ ಆರಂಭಿಸಿದ ಮಗು. ಇಂಥದ್ದೊಂದು ಅಚ್ಚರಿಯ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ನಡೆದಿದೆ.
ಇಳಕಲ್ಲ(ಮೇ.25): ಅನಾರೋಗ್ಯಕ್ಕೆ ತುತ್ತಾಗಿದ್ದ ಮಗು ಚಿಕಿತ್ಸೆಗೆ ಸ್ಪಂದಿಸದೆ ಅಸುನೀಗಿದೆ ಎಂದ ವೈದ್ಯರು. ನೋವಿನಲ್ಲೇ ಮಗುವಿನ ಜತೆ ವಾಪಸ್ ಊರಿಗೆ ಹೊರಟ ಪೋಷಕರು. ಮಾರ್ಗ ಮಧ್ಯೆ ಒಂದೆರಡು ಬಾರಿ ಕೆಮ್ಮಿ ಮತ್ತೆ ಸಹಜ ಉಸಿರಾಟ ಆರಂಭಿಸಿದ ಮಗು. ಇಂಥದ್ದೊಂದು ಅಚ್ಚರಿಯ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್ಲ ಪಟ್ಟಣದಲ್ಲಿ ನಡೆದಿದೆ.
ನಗರದ ದ್ಯಾಮಣ್ಣ ಎಂಬುವರು ತಮ್ಮ ಒಂದು ವರ್ಷದ ಮಗುವನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಎಷ್ಟೇ ಚಿಕಿತ್ಸೆ ನೀಡಿದರೂ ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ಸಂಜೆ ಉಸಿರಾಟದ ಯಾವುದೇ ಲಕ್ಷಣ ಕಾಣದ ಹಿನ್ನೆಲೆಯಲ್ಲಿ ಮಗುವಿನ ಪ್ರಾಣ ಹೋಗಿದೆ. ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದ್ದರು.
ಊರಲ್ಲಿ ಗೌರವ ಸಿಗಲಿ ಅಂತಾ ಐಬಿ ಆಫೀಸರ್ ವೇಷ ತೊಟ್ಟು ಪೊಲೀಸರ ಅತಿಥಿಯಾದ ಆಸಾಮಿ
ಅಂತ್ಯ ಸಂಸ್ಕಾರ ನೆರವೇರಿಸಲು ವಾಹನದಲ್ಲಿ ಮಗುವಿನ ಜತೆಗೆ ಇಳಕಲ್ಲಿಗೆ ಬರುತ್ತಿದ್ದಾಗ ಮಾರ್ಗಮಧ್ಯೆ ಅಚ್ಚರಿ ಎಂಬಂತೆ ಮಗು ಕೆಮ್ಮಿದೆ. ನಂತರ ಮತ್ತೆ ಉಸಿರಾಟ ಆರಂಭಿಸಿದೆ.