Asianet Suvarna News Asianet Suvarna News

ಊರಲ್ಲಿ ಗೌರವ ಸಿಗಲಿ ಅಂತಾ ಐಬಿ ಆಫೀಸರ್ ವೇಷ ತೊಟ್ಟು ಪೊಲೀಸರ ಅತಿಥಿಯಾದ ಆಸಾಮಿ

ಊರಲ್ಲಿ ಗೌರವ ಸಿಗಲಿ ಎಂದು ಇಂಟಲಿಜೆನ್ಸ್ ಬ್ಯೂರೊ ಆಫೀಸರ್ ವೇಷ ತೊಟ್ಟು ಪೋಸು ಕೊಡುತ್ತಿದ್ದ  ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಯುವಕನನ್ನ ಬನಹಟ್ಟಿ ಪೊಲೀಸರು ಬಂಧಿಸಿದ್ದಾರೆ 

A youth name of sangamesh lakkappagol disguised as an IB officer was arrested at bagalkote rav
Author
First Published May 24, 2024, 1:02 PM IST

ಬಾಗಲಕೋಟೆ (ಮೇ.24): ರಾಜ್ಯದಲ್ಲಿ ನಕಲಿ ಆಫೀಸರ್‌ಗಳ ಹಾವಳಿ ಹೆಚ್ಚಾಗಿದೆ. ಪೊಲೀಸ್ ಆಫೀಸರಗಳ ವೇಷ ಧರಿಸಿ ಸಾರ್ವಜನಿಕರನ್ನ, ವ್ಯಾಪಾರಿಗಳನ್ನ ಬೆದರಿಸಿ ಹಣ ಸುಲಿಯುವತ್ತಿರುವ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿವೆ. ನಿನ್ನೆಯಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರೆಂದು ಹೇಳಿಕೊಂಡು ವಾಹನ ಸವಾರರನ್ನ ಬೆದರಿಸಿ ಹಣ ವಸೂಲಿ ಮಾಡುವಾಗ ಸಿಕ್ಕಿಬಿದ್ದ ಘಟನೆ ನಡೆದಿದೆ. ಇದೀಗ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಯುವಕ ಒಂದು ಹೆಜ್ಜೆ ಮುಂದೆ ಹೋಗಿ ಐಬಿ ಅಧಿಕಾರಿಯ ವೇಷ ಧರಿಸಿಕೊಂಡು ಓಡಾಡುತ್ತಿರುವ ಪ್ರಕರಣ ಬಯಲಿಗೆ ಬಂದಿದೆ.

ಹೌದು, ಸಂಗಮೇಶ್ ಲಕ್ಕಪ್ಪಗೋಳ(19), ಹಿಪ್ಪರಗಿ ಗ್ರಾಮದವನಾದ ಆಸಾಮಿ ತಾನೊಬ್ಬ ಇಂಟಲಿಜೆನ್ಸಿ ಬ್ಯೂರೊ ಆಫೀಸರ್ ಎಂದು ಹೇಳಿಕೊಂಡು ಓಡಾಡುತ್ತಿದ್ದನೆ. ಐಬಿ ಆಫೀಸರ್‌ಗಳಂತೆಯೇ ವೇಷ ಧರಿಸಿ ಪೋಸು ಕೊಡುತ್ತಿದ್ದ ಯುವಕ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗ್ಳೂರಲ್ಲಿ ಟ್ರಾಫಿಕ್‌ ದಂಡ ವಸೂಲಿ ಮಾಡುತ್ತಿದ್ದ ನಕಲಿ ಪೊಲೀಸ್‌..!

ಇಂಟಲಿಜೆನ್ಸ್ ಬ್ಯೂರೋದ ನಕಲಿ ಐಡಿ ಕಾರ್ಡ್, ಕ್ಯಾಪ್ ಹೊಂದಿದ್ದ ಆರೋಪಿ. ಬೈಕ್‌ ಮೇಲೂ ಐಬಿ ಲೋಗೊ ಹಾಕಿಕೊಂಡು ಓಡಾಡುತ್ತಿದ್ದ ಭೂಪ. ಜೊತೆಗೆ ಟಾಯ್‌ ಗನ್, ವಾಕಿಟಾಕಿ ಕೂಡ ಪೋಸ್ ಕೊಟ್ಟಿದ್ದ ಆರೋಪಿ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಬನಹಟ್ಟಿ ಠಾಣೆಯ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ.

ಊರಲ್ಲಿ ಗೌರವ ಸಿಗಲಿ ಅಂತಾ ನಕಲಿ ಅಧಿಕಾರಿ ವೇಷ ಹಾಕಿದ್ದನಂತೆ ಆಸಾಮಿ. ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿರುವ ಆರೋಪಿ. ಆದರೆ ಯುವನಕನೊಂದಿಗೆ ಇನ್ನೂ ಎಂಟು ಜನ ಯುವಕರಿದ್ದಾರೆಂಬ ಮಾಹಿತಿ ಹಿನ್ನೆಲೆ ಐಬಿ ಅಧಿಕಾರಿಗಳ ಹೆಸರಲ್ಲಿ ಖತರ್ನಾಕ್ ಗ್ಯಾಂಗ್ ಯಾರಿಗಾದರೂ ವಂಚಿಸಿರಬಹುದೇ? ಎಲ್ಲ ಆಯಾಮಗಳಲ್ಲಿ ತನಿಖೆಗೆ ಮುಂದಾಗಿರುವ ಪೊಲೀಸರು.

Latest Videos
Follow Us:
Download App:
  • android
  • ios