ಒಡಿಶಾ ರೈಲು ಅಪಘಾತದಲ್ಲಿ ಜೀವ ಉಳಿದರೂ, ವಾಪಸ್‌ ಮನೆಗೆ ಬರುವ ಮೊದಲೇ ಪ್ರಾಣ ಹೋಯ್ತು

ಒಡಿಶಾ ರೈಲು ದುರಂತದ ಪ್ರಾಣಾಪಾಯದಿಂದ ಪಾರಾಗಿದ್ದ ಚಿಕ್ಕಮಗಳೂರಿನ ವ್ಯಕ್ತಿ, ಒಡಿಶಾ ಪ್ರವಾಸ ಮುಗಿಸಿ ವಾಪಸ್‌ ಬರುವಾಗ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. 

Chikmagalur pilgrim survived Odisha train accident after died of a heart attack sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.10): ದೇಶದ ಭೀಕರ ರೈಲು ದುರಂತದಲ್ಲಿ ಒಂದಾಗಿರುವ ಒಡಿಶಾ ರೈಲು ದುರಂತದ ಪ್ರಾಣಾಪಾಯದಿಂದ ಪಾರಾಗಿದ್ದ ಚಿಕ್ಕಮಗಳೂರಿನ ವ್ಯಕ್ತಿ, ಒಡಿಶಾ ಪ್ರವಾಸ ಮುಗಿಸಿ ವಾಪಸ್‌ ಬರುವಾಗ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. 

ಒಡಿಶಾ ರೈಲು ಅಪಘಾತದಲ್ಲಿ ಅದೃಷ್ಟವಶಾತ್‌ ಚಿಕ್ಕಮಗಳೂರಿನಿಂದ ಪ್ರವಾಸಕ್ಕೆ ಹೋಗಿದ್ದ 110 ಜನರು ಪ್ರಾಣಾಪಾಯದಿಂದ ಪಾರಾಗಿದ್ದರು. ಇಡೀ ದೇಶವೇ ರೈಲಿನಲ್ಲಿದ್ದ ಪ್ರಯಾಣಿಕರು ಬದುಕಿದ್ದಾರೆಯೋ ಇಲ್ಲವೋ ಎಂದು ಆತಂಕದಲ್ಲಿದ್ದಾಗ ಕರ್ನಾಟಕದಿಂದ ತೆರಳಿದ್ದ 110 ಜನರ ತಂಡವು ಅಲ್ಲಿ ಫೋಟೋ ತೆಗೆಸಿಕೊಂಡು ನಾವೆಲ್ಲರೂ ಬದುಕಿದ್ದೇವೆ ಯಾವುದೇ ಅಪಾಯವಾಗಿಲ್ಲ ಎಂದು ಫೋಟೋವೊಂದನ್ನು ಕರ್ನಾಟಕದ ತಮ್ಮ ಸಂಬಂಧಿಕರಿಗೆ ಕಳುಹಿಸಿದ್ದರು. ಇದರಿಂದ ಇಡೀ ರಾಜ್ಯದ ಜನರೇ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಇದೇ ಪ್ರವಾಸದ ಗುಂಪಿನಲ್ಲಿದ್ದ ವ್ಯಕ್ತಿ ಒಡಿಶಾ ಬಳಿಯ ಸುಮೇದ್‌ ಶಿಖರ್ಜಿ ಜೈನ ಯಾತ್ರೆಯನ್ನು ಮುಗಿಸಿಕೊಂಡು ಹಿಂದಿರುಗುವಾಗ ಧರ್ಮಪಾಲಯ್ಯ (72) ಹೃದಯಾದಿಂದ ಸಾವನ್ನಪ್ಪಿದ್ದಾರೆ. 

ಗೃಹಜ್ಯೋತಿ ಜಾರಿಗೂ ಮುನ್ನ ವಿದ್ಯುತ್‌ ಬೆಲೆ ಏರಿಕೆ ಶಾಕ್! ಬಿಲ್‌ ದುಪ್ಪಟ್ಟು ಬರಲು ಇಲ್ಲಿದೆ ಕಾರಣ

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಿಂದ ಸುಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ ನೂರಹತ್ತು ಜನ ಒಡಿಶಾದ ಬಬಲೇಶ್ವರದಲ್ಲಿ ನಡೆದ ರೈಲು ಅಪಘಾತದಲ್ಲಿ ಅಪಾಯದಿಂದ ಪಾರಾಗಿದ್ದರು. ಅಪಘಾತದಲ್ಲಿ 110 ಜನರಿಗೂ ಯಾವುದೇ ಅಪಾಯ ಸಂಭವಿಸಿರಲಿಲ್ಲ. ಅಪಘಾತದ ಬಳಿಕ ಯಾತ್ರೆಗೆ ತೆರಳಿದ್ದರು.  ಕಳಸದಿಂದ ತೆರಳಿದ್ದ ಎಲ್ಲರೂ ಅದೇ ರೈಲಿನಲ್ಲಿ ಇದ್ದರು. ಅಪಘಾತಕ್ಕೂ 2 ಗಂಟೆ ಮುನ್ನ ರೈಲಿನ ಬೋಗಿ ಬದಲಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಸುಮೇದ್ ಶಿಖರ್ಜಿ ಯಾತ್ರೆಗೆ ಹೋಗಿ ಹಿಂದಿರುಗುವಾಗ ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೆ ನಿಲ್ದಾಣದಲ್ಲಿ ಕಳಸ ತಾಲೂಕಿನ ಕಳಕೋಡು ನಿವಾಸಿ ಧರ್ಮಪಾಲಯ್ಯ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

ಜೈನ ಯಾತ್ರಿಕರು ಮೃತ ದೇಹದ ಮರಣೋತ್ತರ ಪರೀಕ್ಷೆಗಾಗಿ ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಮುಂಭಾಗ ಕಾಯುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಸ್ವಗ್ರಾಮ ಕಳಕೋಡು ತಲುಪಲು ಎರಡು ದಿನ ಬೇಕಾಗುತ್ತದೆ. ಒಡಿಶಾ ರೈಲು ಅಪಘಾತದಲ್ಲಿ 270ಕ್ಕೂ ಅಧಿಕ ಜನ ಸಾವನ್ನಪ್ಪಿದ್ದು, 1000ಕ್ಕೂ ಮಂದಿ ಗಾಯಗೊಂಡಿದ್ದರು. ಆದರೆ, ಚಿಕ್ಕಮಗಳೂರು ಜಿಲ್ಲೆಯಿಂದ ತೆರಳಿದ್ದ 110 ಜನರಿಗೂ ಯಾವುದೇ ತೊಂದರೆ ಆಗಿರಲಿಲ್ಲ. ಈಗ ಯಾತ್ರೆಯಿಂದ ವಾಪಸ್‌ ಬರುತ್ತಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ವೀಲಿಂಗ್‌ ಮಾಡ್ತಿದ್ದ 15 ಬೈಕ್‌ಗಳ ವಶ: ಚಿಕ್ಕಮಗಳೂರು (ಜೂ.10): ನಿಯಮ ಉಲ್ಲಂಘಿಸಿ ದ್ವಿಚಕ್ರ ವಾಹನಗಳನ್ನು ಮನಸ್ಸೋ ಇಚ್ಛೆ ಚಲಾಯಿಸುವ ಅಪ್ರಾಪ್ತ ಬಾಲಕರ ದುವರ್ತನೆಗೆ ಕಡಿವಾಣ ಹಾಕಲು ಚಿಕ್ಕಮಗಳೂರು ಜಿಲ್ಲಾ ಪೋಲೀಸ್ ಇಲಾಖೆ ಮುಂದಾಗಿದೆ. ವಿದ್ಯಾರ್ಥಿನಿಯರನ್ನು ಗುರಿಯನ್ನಾಗಿಸಿಕೊಂಡು ಕೆಲ ಅಪ್ರಾಪ್ತ ಬಾಲಕರು ದ್ವಿಚಕ್ರ ವಾಹನಗಳಲ್ಲಿ ವಿಲಿಂಗ್ ಮಾಡುವುದು, ಕರ್ಕಶವಾಗಿ ಶಬ್ಧ ಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಬಗ್ಗೆ ಸಾರ್ವಜನಿಕರು ದೂರಿದ್ದರು.

ಮಫ್ತಿ ಪೋಲೀಸರ ತಂಡದಿಂದ  ಕಾರ್ಯಚಾರಣೆ :
ಇತ್ತೀಚಿನ ದಿನಗಳಲ್ಲಿ ನಗರದ ಬೇಲೂರು ರಸ್ತೆಯ ಜೂನಿಯರ್ ಕಾಲೇಜ್, ಎಸ್.ಟಿ.ಜೆ ಮಹಿಳಾ ಕಾಲೇಜ್, ಬಸವನಹಳ್ಳಿ ಬಾಲಕಿಯರ ಕಾಲೇಜ್, ಎನ್.ಎಂ.ಸಿ ಸರ್ಕಲ್ನ ಸ್ವಾತಂತ್ರ್ಯ ಪದವಿ ಪೂರ್ವ ಕಾಲೇಜ್ ವ್ಯಾಪ್ತಿಯಲ್ಲಿ ತಮ್ಮ ಕುಚೇಷ್ಟೆ ಮಾಡುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ನಗರಠಾಣೆ ಹಾಗೂ ಸಂಚಾರಿ ಪೋಲೀಸರು ಕಾರ್ಯಾಚರಣೆಗಿಳಿದಿದ್ದಾರೆ.ಕಳೆದ 2 ದಿನಗಳಿಂದ ನಗರದ ವಿವಿಧೆಡೆ ಕಾರ್ಯಾಚರಣೆಗಿಳಿದಿರುವ ಮಫ್ತಿ ಪೋಲೀಸರ ತಂಡ ಸುಮಾರು 15ಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದು ಅವರ ಮೇಲೆ ಚಾಲನಾ ಪರವಾನಗಿ ಇಲ್ಲದಿರುವುದು, ಹೆಲ್ಮೆಟ್ ಧರಿಸದಿರುವುದು, ದಾಖಲಾತಿಗಳನ್ನು ತೋರಿಸದಿರುವುದು ಸೇರಿದಂತೆ ಹಲವು ಉಲ್ಲಂಘನೆಗಳ ಆಧಾರದಲ್ಲಿ ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ.

ಬಿಪೋರ್‌ಜಾಯ್ ಸೈಕ್ಲೋನ್‌ ಎಫೆಕ್ಟ್ ಉಡುಪಿಯಲ್ಲಿ ಉತ್ತಮ ಮಳೆ

ಅಪ್ರಾಪ್ತ ಬಾಲಕರಿಂದ ವ್ಹೀಲಿಂಗ್: ಅಪ್ರಾಪ್ತ ಬಾಲಕರಿಗೆ ವಾಹನಗಳನ್ನು ನೀಡದಂತೆ ಪೋಷಕರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಪೋಲೀಸ್ ಇಲಾಖೆ ನಿರಂತರವಾಗಿ ಮಾಡುತ್ತಿದ್ದರೂ ಕೆಲ ಪೋಷಕರು ಮಕ್ಕಳ ಕೈಯಲ್ಲಿ ದ್ವಿಚಕ್ರ ವಾಹನಗಳನ್ನು ನೀಡುತ್ತಿರುವುದರ ಬಗ್ಗೆ ನ್ಯಾಯಾಲಯವು ಸಹ ಗಂಭೀರವಾಗಿ ಪರಿಗಣಿಸಿದೆ. ಈ ಕುರಿತಂತೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿ ಅಪ್ರಾಪ್ತ ಬಾಲಕರು ದ್ವಿಚಕ್ರವಾಹನಗಳನ್ನು ಚಲಾಯಿಸಿ ದುವರ್ತನೆ ತೋರುತ್ತಿರುವ ಬಗ್ಗೆ ಪೋಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು ಇವರ ದುವರ್ತನೆಗೆ ಕಡಿವಾಣ ಹಾಕಲು ಕಠಿಣಕ್ರಮ ಕೈಗೊಳ್ಳುವ ಕಾರ್ಯವನ್ನು ಮುಂದುವರೆಸಲಿದೆ ಎಂದು ಹೇಳಿದರು.

Latest Videos
Follow Us:
Download App:
  • android
  • ios