Asianet Suvarna News Asianet Suvarna News

ಮಲೆನಾಡಿನಲ್ಲಿ ಐದು ಕಾಡಾನೆಗಳಿಂದ ಭೀತಿ, ಆನೆ ಹಾವಳಿಗೆ ಹೈರಾಣದ ಜನ!

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ ಇದೀಗ ಮತ್ತೆ ಕಾಡಾನೆ ದಾಳಿಯಿಂದ ದಿಕ್ಕೆಟ್ಟಂತಾಗಿದೆ. ಇಷ್ಟು ದಿನಗಳ ಕಾಡಂಚಿನ ಗ್ರಾಮಗಳು ಹಾಗೂ ಹೊಲ-ಗದ್ದೆ-ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು  ನಗರ ಪ್ರದೇಶ ಭೇಟಿ ನೀಡುತ್ತಿವೆ.

Chikkamagaluru people worried about wild elephants gow
Author
First Published Oct 8, 2022, 12:25 AM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿಕ್ಕಮಗಳೂರು (ಅ.8): ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಜನ ಇದೀಗ ಮತ್ತೆ ಕಾಡಾನೆ ದಾಳಿಯಿಂದ ದಿಕ್ಕೆಟ್ಟಂತಾಗಿದೆ. ಇಷ್ಟು ದಿನಗಳ ಕಾಡಂಚಿನ ಗ್ರಾಮಗಳು ಹಾಗೂ ಹೊಲ-ಗದ್ದೆ-ತೋಟಗಳಿಗೆ ಲಗ್ಗೆ ಇಟ್ಟು ಬೆಳೆ ನಾಶ ಮಾಡುತ್ತಿದ್ದ ಕಾಡಾನೆಗಳು  ನಗರ ಪ್ರದೇಶ ಭೇಟಿ ನೀಡುತ್ತಿವೆ. ನಗರ ಪ್ರದೇಶ ಮಾತ್ರವಲ್ಲದೇ ಹಳ್ಳಿಗಳ ಒಳಗೆ ಜನಸಾಮಾನ್ಯರಂತೆ ಓಡಾಡುತ್ತಿದ್ದು, ನಗರ ಪ್ರದೇಶದಲ್ಲೂ ರಾಜಾರೋಷವಾಗಿ ರೋಡ್ ಕ್ರಾಸ್ ಮಾಡುತ್ತಿದ್ದು ಮೂಡಿಗೆರೆ ತಾಲೂಕಿನ ಜನ ಹೈರಾಣಾಗಿದ್ದಾರೆ. ಸಕಲೇಶಪುರ ಕಾಡಿನಿಂದ ಬಂದಿರೋ ಐದು ಕಾಡಾನೆಗಳು ಮೂಡಿಗೆರೆ ತಾಲೂಕಿನ ಜನರ ನಿದ್ದೆಗೇಡಿಸಿದೆ. ಮೂಡಿಗೆರೆ ತಾಲೂಕಿನ ಬಿದರಹಳ್ಳಿ, ಬಂಕೇನಹಳ್ಳಿ, ಜೇನುಬೈಲು, ಲೋಕವಳ್ಳಿ ಗ್ರಾಮದಲ್ಲೇ ಕಾಡಾನೆಗಳು ಬೀಡುಬಿಟ್ಟಿದ್ದು ಹಳ್ಳಿಗರು ಆತಂಕದಿಂದ ಬದುಕುವಂತಾಗಿದೆ. ಹಳ್ಳಿ ಹಾಗೂ ಕಾಡಂಚಿನಲ್ಲಿ ಬೇಕಾಬಿಟ್ಟಿ ಓಡಾಡ್ತಿರೋ ಆನೆಗಳು ಬೆಳೆಗಳನ್ನೂ ಕೂಡ ತುಳಿದು ನಾಶ ಮಾಡುತ್ತಿವೆ. ಮೂಡಿಗೆರೆ ತಾಲೂಕಿನ ಗುತ್ತಿ ಹಾಗೂ ಕುಂದೂರು ಸುತ್ತಮುತ್ತ ಒಂಟಿ ಸಲಗ ಭೈರನ ಕಾಟವಿದ್ದರೆ, ಈ ಮಧ್ಯೆ ಸಖಲೇಶಪುರದ ಆನೆಗಳು ಜನರಿಗೆ ಭಯ ಹುಟ್ಟಿಸಿವೆ. ಜನಸಾಮಾನ್ಯರು ರಾತ್ರಿ ಹೊತ್ತು ನಿರಾಳವಾಗಿ ಓಡಾಡೋದಕ್ಕೂ ಹಿಂದೇಟು ಹಾಕುವಂತಾಗಿದೆ.

ಅರಣ್ಯ ಇಲಾಖೆ ಅಧಿಕಾರಿಗಳು ಹಗಲಿರುಳು ಕಾಡಾನೆಗಳ ಕಾರ್ಯಚರಣೆ ಇಳಿಯುವಂತಾಗಿದೆ. ಹಾಗಾಗಿ, ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿರೋ ಮೂಡಿಗೆರೆ ತಾಲೂಕಿನ ಜನ ಆನೆ ಹಾವಳಿಗೆ ಶಾಶ್ವತ ಬ್ರೇಕ್ ಹಾಕುವಂತೆ ಅರಣ್ಯ ಇಲಾಖೆಗೆ ಆಗ್ರಹಿಸಿದ್ದಾರೆ.

ಅರಣ್ಯ ಇಲಾಖೆಯ ವಿರುದ್ದ ಜನರ ಆಕ್ರೋಶ: ಮೂಡಿಗೆರೆ ತಾಲೂಕಿನಾದ್ಯಂತ ದಿನದಿಂದ ದಿನಕ್ಕೆ ಆನೆ ಹಾವಳಿ ಹೆಚ್ಚುತ್ತಿದ್ದು ಜನ ಆನೆ ಭಯದಲ್ಲೇ ಬದುಕುತ್ತಿದ್ದಾರೆ. ಹಾಗಾಗಿ, ಅರಣ್ಯ ಇಲಾಖೆ ಕೂಡ ದಸರಾ ಮುಗಿಯುವುದನ್ನೇ ಕಾಯುತ್ತಿದ್ದು ಈಗ ಒಂಟಿ ಸಲಗ ಭೈರನ ಸೆರೆ ಹಿಡಿಯಲು ದಸರಾ ಆನೆಗಳನ್ನ ಕರೆಸಿಕೊಳ್ಳೋಕೆ ಮುಂದಾಗಿದ್ದಾರೆ. 

ಸ್ಥಳಿಯರ ಸಹಕಾರದಲ್ಲಿ ಆನೆಗಳನ್ನ ಓಡಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿಗಳು ಹೊಲ-ಗದ್ದೆ-ತೋಟಗಳಲ್ಲಿ ಪಟಾಕಿ ಸಿಡಿಸದಂತೆ ಜನಸಾಮಾನ್ಯರಲ್ಲಿ ಮನವಿ ಮಾಡುತ್ತಿದ್ದಾರೆ. ಪಟಾಕಿ ಸಿಡಿಸಿದರೆ ಆನೆಗಳು ಗಾಬರಿಗೊಂಡು ಬೇಕಾಬಿಟ್ಟಿ ವರ್ತಿಸುತ್ತವೆ. ಇದರಿಂದ ಮತ್ತೊಂದು ಅನಾಹುತ ಸಂಭವಿಸಬಹುದು. ಹಾಗಾಗಿ, ಪಟಾಕಿ ಸಿಡಿಸದಂತೆ ಮನವಿ ಮಾಡುತ್ತಿದ್ದಾರೆ. 

Shivamogga: ವಿದ್ಯುತ್ ತಂತಿ ಕಟ್ಟಿದ ಪರಿಣಾಮ ಆಹಾರ ಅರಸಿ ಬಂದು ಬಲಿಯಾದ ಕಾಡಾನೆಗಳು

ಆನೆಗಳು ನಗರ ಪ್ರದೇಶದಲ್ಲೂ ಸಲೀಸಾಗಿ ಓಡಾಡುತ್ತಿರುವುದರಿಂದ ಅಧಿಕಾರಿಗಳು ಮೈಕ್ ಹಾಕಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಆನೆಗಳು ಬಂದ ದಾರಿಯಲ್ಲೇ ವಾಪಸ್ ಹೋಗುತ್ತವೆ. ಅವು ಮಾಡುವ ನಷ್ಟಕ್ಕೆ ಪರಿಹಾರ ಕೊಡುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಬೆಟ್ಟ-ಗುಡ್ಡದ ಪ್ರದೇಶದಲ್ಲಿ ಆನೆಗಳು ಬರದಂತೆ ಗುಂಡಿ ತೆಗೆಯುವುದು ಒಳ್ಳೆಯದ್ದಲ್ಲ. ಹಾಗಾಗಿ, ಆನೆಗಳು ಬರದಂತೆ ಕೆಂಟಕಲ್ ಮಾದರಿಯಲ್ಲಿ ಸೋಲರ್ ತಂತಿ ಅಳವಡಿಸಲು ಯೋಜನೆ ರೂಪಿಸಿದ್ದೇವೆ ಅಂತಾರೆ ಅಧಿಕಾರಿಗಳು.

 

ಚಿಕ್ಕಮಗಳೂರು: ತೋಟದಲ್ಲಿ ತೋಡಿದ್ದ ಹೊಂಡಕ್ಕೆ ಬಿದ್ದು ಕಾಡಾನೆ ಸಾವು

 ಒಟ್ಟಾರೆ ಕಳೆದ ಒಂದೂವರೆ ವರ್ಷದಿಂದ ಮೂಡಿಗೆರೆ ತಾಲೂಕಿನ ಜನ ಆನೆ ಹಾವಳಿಯಿಂದ ಕಂಗೆಟ್ಟಿದ್ದಾರೆ. ಒಂದು ಆನೆಯನ್ನ ಓಡಿಸಿದ ಕೂಡಲೇ ಅಥವ ಸೆರೆ ಹಿಡಿದ ತಕ್ಷಣ ಅಬ್ಬಾ ಅಂತ ನಿಟ್ಟುಸಿರು ಬಿಡುವಷ್ಟರಲ್ಲಿ ಮತ್ತೊಂದು ಆನೆ ದಾಂಗುಡಿ ಇಡುತ್ತಿರೋದು ಜನರ ನಿದ್ದೆಗೆಡಿಸಿದೆ. ಇಷ್ಟು ದಿನ ಹೊಲಗದ್ದೆ-ತೋಟಗಳಲ್ಲಿ ಇರುತ್ತಿದ್ದ ಆನೆಗಳು ಈಗೀಗ ನಗರ, ಹಳ್ಳಿ, ರಸ್ತೆಯಲ್ಲಿ ಓಡಾಡ್ತಿರೋದು ಜನರಿಗೆ ಮನೆಯಿಂದ ಆಚೆ ಹೋಗೋದು ಹೇಗಪ್ಪಾ ಎಂಬಂತಾಗಿದೆ.

Follow Us:
Download App:
  • android
  • ios