Chikkamagaluru: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾಗಿ ಹೆಚ್.ಎಂ.ಸುಧಾಕರ್ ಆಯ್ಕೆ
ಸಂಘ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳು ಇಂದು ಪ್ರತಿಷ್ಠೆಯಾಗಿ ಪರಿಣಾಮಿಸಿದೆ. ಚಿಕ್ಕಮಗಳೂರು ಜಿಲ್ಲೆಯ ವಕೀಲರ ಸಂಘಕ್ಕೆ ನಡೆದ ಚುನಾವಣೆಯೂ ಸಾಕಷ್ಟು ಪ್ರತಿಷ್ಠೆಯ ಕಣವಾಗಿತ್ತು. ಇಂದು ಚಿಕ್ಕಮಗಳೂರು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಹೆಚ್.ಎಂ.ಸುಧಾಕರ್ ಆಯ್ಕೆ ಆಗಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಏ.21): ಸಂಘ ಸಂಸ್ಥೆಗಳಿಗೆ ನಡೆಯುವ ಚುನಾವಣೆಗಳು ಇಂದು ಪ್ರತಿಷ್ಠೆಯಾಗಿ ಪರಿಣಾಮಿಸಿದೆ. ಚಿಕ್ಕಮಗಳೂರು ಜಿಲ್ಲೆಯ ವಕೀಲರ ಸಂಘಕ್ಕೆ ನಡೆದ ಚುನಾವಣೆಯೂ ಸಾಕಷ್ಟು ಪ್ರತಿಷ್ಠೆಯ ಕಣವಾಗಿತ್ತು. ಇಂದು ಚಿಕ್ಕಮಗಳೂರು ವಕೀಲರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರಾಗಿ ಹೆಚ್.ಎಂ.ಸುಧಾಕರ್ ಆಯ್ಕೆ ಆಗಿದ್ದಾರೆ.
ಅಧ್ಯಕ್ಷರಾಗಿ ಹೆಚ್ ಎಂ ಸುಧಾಕರ್ ಆಯ್ಕೆ: ಚಿಕ್ಕಮಗಳೂರು ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಇಂದು ನ್ಯಾಯಾಲಯದ ಆವರಣದಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಹೆಚ್.ಎಂ.ಸುಧಾಕರ್ ಜಯಶೀಲರಾಗಿದ್ದಾರೆ. ಉಪಾಧ್ಯಕ್ಷರಾಗಿ ಕೆ.ಬಿ ನಂದೀಶ್, ಕಾರ್ಯದರ್ಶಿಯಾಗಿ ಸಿ.ಬಿ ರುದ್ರೇಶ್, ಸಹ ಕಾರ್ಯದರ್ಶಿಯಾಗಿ ಕೆ.ಆರ್.ಪ್ರದೀಪ್, ಖಜಾಂಚಿಯಾಗಿ ಹೆಚ್.ಟಿ ಸುನೀಲ್‌ರವರು ಜಯಶೀಲರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು381 ಸದಸ್ಯರನ್ನು ಹೊಂದಿರುವ ವಕೀಲರ ಸಂಘದಲ್ಲಿ ಇಂದು ನಡೆದ ಚುನಾವಣೆಯಲ್ಲಿ 355 ಮಂದಿ ಸದಸ್ಯರು ಮತ ಚಲಾಯಿಸಿದ್ದಾರೆ.
Chikkamagaluru Naxalism ಮಲೆನಾಡಿನಲ್ಲಿ ನಕ್ಸಲ್ ಯುಗಾಂತ್ಯವಾಯ್ತಾ?
ಅಧ್ಯಕ್ಷ ಹುದ್ದೆಗೆ ವಕೀಲರುಗಳಾದ ಡಿ.ಬಿ ಸುಜೇಂದ್ರ, ಅಬ್ದುಲ್ ಮಜೀದ್, ಹೆಚ್.ಎಂ. ಸುಧಾಕರ್ ಕಣದಲ್ಲಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿ.ಆರ್ ಜಗದೀಶ್, ಕೆ.ಬಿ ನಂದೀಶ್, ಕಾರ್ಯದರ್ಶಿ ಸ್ಥಾನಕ್ಕೆ ಸಿ.ಬಿ ರುದ್ರೇಶ್, ಆರ್. ಅನೀಲ್ಕುಮಾರ್, ಸಹ ಕಾರ್ಯದರ್ಶಿ ಸ್ಥಾನಕ್ಕೆ ಪ್ರದೀಪ್, ರಾಘು, ಮಂಜುಳ ಕಾರ್ಲೇಕರ್, ಬಿ.ಕುಮಾರ್, ಹರೀಶ್, ಖಜಾಂಚಿ ಹುದ್ದೆಗೆ ಸುನೀಲ್ಕುಮಾರ್, ದೀಪಕ್, ರಜತ್ ಕಣದಲ್ಲಿದ್ದರು.
ಮೊದಲ ಬಾರಿಗೆ ನಡೆದ ಚುನಾವಣೆ: ಸುಮಾರು 50-60 ವರ್ಷಗಳ ಇತಿಹಾಸವಿರುವ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಈವರೆಗೂ ಚುನಾವಣೆ ನಡೆದಿರಲಿಲ್ಲ. ಸೇವಾಹಿರಿತನದ ಆಧಾರದಲ್ಲಿ ಹಿರಿಯ ವಕೀಲರನ್ನು ಅಧ್ಯಕ್ಷ, ಉಪಾಧ್ಯಕ್ಷರನ್ನಾಗಿ ಆವಿರೋಧವಾಗಿ ಆಯ್ಕೆಗೊಳಿಸಿ ಉಳಿದ ಪದಾಧಿಕಾರಿಗಳ ಆಯ್ಕೆಯ ಜವಾಬ್ದಾರಿಯನ್ನು ಅಧ್ಯಕ್ಷರ ವಿವೇಚನೆಗೆ ಬಿಡಲಾಗುತ್ತಿತ್ತು. ಸಹ ಕಾರ್ಯದರ್ಶಿ ಸ್ಥಾನಕ್ಕೆ ಸೇವಾಹಿರಿತನವಿರುವ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ವಕೀಲರ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೇವಾಹಿರಿತನದ ಆಧಾರದಲ್ಲಿ ನಡೆಯುವ ಆಯ್ಕೆಪ್ರಕ್ರಿಯೆಯಿಂದ ಹಲವು ಯುವ ವಕೀಲರು ವಂಚಿತರಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ವಕೀಲರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಚುನಾವಣೆ ನಡೆಸಲು ನಿರ್ಣಯಿಸಲಾಗಿತ್ತು.ಅದರಂತೆ ಹಿರಿಯ ವಕೀಲರುಗಳ ಮಾರ್ಗದರ್ಶನದಲ್ಲಿ ರಚಿಸಿದ್ದ ಚುನಾವಣಾ ಸಮಿತಿಯ ನೇತೃತ್ವವನ್ನು ಟಿ.ಸಿ ಶಿವಶಂಕರ್, ಹೇಮಾಂತಕುಮಾರ್, ಹೆಚ್.ಎಂ. ರಘುನಾಥ್, ಡಿ.ಸಿ ಚರಣ್, ಮಲ್ಲಿಕಾರ್ಜುನ್, ಹೆಚ್.ಸಿ ಕೃಷ್ಣ, ಸಿ.ಎಂ. ರಾಜೇಶ್, ಸಿ.ಬಿ ಸತೀಶ್, ಬಿ.ಟಿ ದುಶ್ಯಂತ್ ಸೇರಿದಂತೆ ಹಲವರು ಚುನಾವಣಾ ಕಾರ್ಯವನ್ನು ನಿರ್ವಹಿಸಿದ್ದರು.
Garbage collection fee Hike ಚಿಕ್ಕಮಗಳೂರು ನಗರಸಭೆ ಕಸ ಸಂಗ್ರಹ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ನೂತನ ಅಧ್ಯಕ್ಷರಿಗೆ ಅಭಿನಂದನೆಗಳ ಮಹಾಪೂರ: ಇಂದು ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಹೆಚ್.ಎಂ.ಸುಧಾಕರ್ ,ಉಪಾಧ್ಯಕ್ಷರಾಗಿ ಕೆ.ಬಿ ನಂದೀಶ್, ಕಾರ್ಯದರ್ಶಿಯಾಗಿ ಸಿ.ಬಿ ರುದ್ರೇಶ್, ಸಹ ಕಾರ್ಯದರ್ಶಿಯಾಗಿ ಕೆ.ಆರ್.ಪ್ರದೀಪ್, ಖಜಾಂಚಿಯಾಗಿ ಹೆಚ್.ಟಿ ಸುನೀಲ್ ರವಿಗೆ ವಕೀಲರು ಅಭಿನಂದನೆಗಳನ್ನು ಸಲ್ಲಿಸಿದರು. ಅಲ್ಲದೆ ವಿವಿಧ ಸಂಘಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷದ ಮುಖಂಡರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.