Asianet Suvarna News Asianet Suvarna News

Chikkamagaluru: ದತ್ತಜಯಂತಿ ವೇಳೆ ಶಾಂತಿಸುವ್ಯವಸ್ಥೆಗಾಗಿ ಜಿಲ್ಲಾದ್ಯಂತ ಬಂದೋಬಸ್ತ್‌

ಚಿಕ್ಕಮಗಳೂರು ತಾಲ್ಲೂಕಿನ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಡಿ. 6 ರಿಂದ 8 ರವರೆಗೆ ನಡೆಯಲಿರುವ ದತ್ತಜಯಂತಿ ಸಂದರ್ಭದಲ್ಲಿ ಕಾನೂನು ಸುವ್ಯಸ್ಥೆ, ಕಾಪಾಡಿಕೊಂಡು ಶಾಂತಿಯುತ ಕಾರ್ಯಕ್ರಮ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ 3,500 ಮಂದಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

Chikkamagaluru district wide security for peaceful situation during Datta Jayanti
Author
First Published Dec 4, 2022, 6:29 PM IST

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಡಿ.4): ಚಿಕ್ಕಮಗಳೂರು ತಾಲ್ಲೂಕಿನ ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ಡಿ. 6 ರಿಂದ 8 ರವರೆಗೆ ನಡೆಯಲಿರುವ ದತ್ತಜಯಂತಿ ಸಂದರ್ಭದಲ್ಲಿ ಕಾನೂನು ಸುವ್ಯಸ್ಥೆ, ಕಾಪಾಡಿಕೊಂಡು ಶಾಂತಿಯುತ ಕಾರ್ಯಕ್ರಮ ನಡೆಸಲು ಜಿಲ್ಲಾ ಪೊಲೀಸ್ ಇಲಾಖೆ 3,500 ಮಂದಿ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿ ಅಗತ್ಯ ಮುಂಜ್ರಾಗತಾ ಕ್ರಮಗಳನ್ನು ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಕೆ.ಆರ್. ರಮೇಶ್ ತಿಳಿಸಿದರು.

ದತ್ತಜಯಂತಿ ಕಾರ್ಯಕ್ರಮಕ್ಕೆ ಶಾಂತಿ ಸುವ್ಯಸ್ಥ ಬಂದೋಬಸ್ತ್ ಮತ್ತು ಸಂಚಾರ ನಿಯಂತ್ರಣ ಕರ್ತವ್ಯಗಳಿಗಾಗಿ ಓರ್ವ ಎಸ್ ಪಿ, 4 ಹೆಚ್ಚುವರಿ ಪೋಲಿಸ್ ಅಧಿಕ್ಷಕರು 17 ಡಿ.ವೈ.ಎಸ್  39 ವೃತ್ತ ನಿರೀಕ್ಷಕರು 156 ಮಂದಿ ಪಿಎಸ್ಐಗಳು  181 ಹೆಡ್ ಕಾನ್ ಸ್ಟೇಬಲ್, 2050 ಕಾನ್ ಸ್ಟೇಬಲ್ ,100 ಮಹಿಳಾ ಮೋಲಿಸ್ ಕಾನ್ಸ್ಟೇಬಲ್, 500ಮಂದಿ ಗೃಹರಕ್ಷಕ ಸಿಬ್ಬಂದಿ, 15 ಕೆ.ಎಸ್.ಆರ್.ಪಿ ತುಕಡಿ, 25 ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಯ ಸಿಬ್ಬಂದಿಯೂ ಸೇರಿದಂತೆ 3500 ಮಂದಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ನಿಯೋಜಿಸಲಾದೆ. ಚೆಕ್ ಪೋಸ್ಟ್ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಗೆ ಸಂದರ್ಭಾನುಸಾರ ಆದೇಶ ನೀಡಿ ಸಾರ್ವಜನಿಕ ಶಾಂತಿ, ಕಾನೂನು ಸುವ್ಯವಸ್ಥೆ ಕಾಪಾಡಲು ಒಟ್ಟು 46 ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನು ನಿಯೋ ಜಿಸಲಾಗಿದೆ. ಜಿಲ್ಲೆಯಲ್ಲಿರುವ ಎಲ್ಲಾ ಉಪವಿಭಾಗ, ತಾಲ್ಲೂಕ್ ದಂಡಾಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಆದೇಶ ಮಾಡಲಾಗಿದೆ. 

Chikkamagaluru: ಕಾಫಿನಾಡು ವಿವಾದಿತ ದತ್ತಪೀಠಕ್ಕೆ ಹಿಂದೂ ಅರ್ಚಕರ ನೇಮಕ

ಹೊರ ಜಿಲ್ಲೆಯವರ ಮೇಲೆ ನಿಗಾ: ದತ್ತಜಯಂತಿ ವೇಳೆ ಸಾರ್ವಜನಿಕ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುವ ಸಾಧ್ಯತೆ ಇರುವ ವ್ಯಕ್ತಿಗಳನ್ನು ಗುರುತಿಸಿ ಅವರ ಚಲನವಲನಗಳ ಮೇಲೆ ನಿಗಾಂಡಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಭದ್ರತಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ, ಬೌಂಡ್ ಪಡೆಯಲಾಗುತ್ತಿದೆ. ಹೊರಗಿನ ಜಿಲ್ಲೆಗಳಿಂದ ಹೆಚ್ಚಿನ ಜನ ಬರುತ್ತಿದ್ದು, ಆಯಾ ಜಿಲ್ಲೆಗಳಲ್ಲಿಯೂ ಸಹ ಮುಂಜಾಗ್ರತ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿ, ನಿರ್ಗಮಿಸುವ ವಾಹನಗಳ (ದತ್ತಮಾಲಾಧಾರಿಗಳ ಹಾಗೂ ಇತರೆ ಸಾರ್ವಜನಿಕರ) ತಪಾಸಣೆಗಾಗಿ ಒಟ್ಟು 25 ಸ್ಥಳಗಳಲ್ಲಿ ಚೆಕ್ ಪೋಸ್ಟ್ ಗಳನ್ನು (ಜಿಲ್ಲಾಗಡಿ ಭಾಗ 14, ಜಿಲ್ಲೆಯ ಒಳಭಾಗ-14) ತೆರೆಯಲಾಗಿದೆ. ಎಲ್ಲಾ ಚೆಕ್ ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗಿರುತ್ತದೆ. ಶ್ರೀ ಗುರು ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ಸಂಸ್ಥೆ ಐ.ಡಿ.ಪೀಠದಲ್ಲಿ 50 ಸಿಸಿಟಿವಿ ಕ್ಯಾಮರಗಳನ್ನು ಹಾಗೂ ಚಿಕ್ಕಮಗಳೂರಿನ ನಗರದ ಸೂಕ್ಷ್ಮ ಸ್ಥಳಗಳಲ್ಲಿ ಒಟ್ಟು 51 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಇದಲ್ಲದೇ ಅವಶ್ಯಕ ಇರುವ ಕಡೆಗಳಲ್ಲಿ ಒಟ್ಟು 20 ವಿಡಿಯೋ ಕ್ಯಾಮರಾ ಹಾಗೂ 1 ಡ್ರೋನ್ ಬಳಸಿಕೊಳ್ಳಲಾಗುತ್ತಿದೆ ಎಂದು ಹೇಳಿದರು.

ವಾರದ ಸಂತೆ ನಿಷೇಧ : ಚಿಕ್ಕಮಗಳೂರು ನಗರದಲ್ಲಿ ಬುಧವಾರದಂದು ನಡೆಯಲಿರುವವಾರದ ಸಂತೆಯನ್ನು ದತ್ತ ಜಯಂತಿ ಅಂಗವಾಗಿ ಮುಂದೂಡಲಾಗಿದೆ. ದತ್ತ ಪೀಠದ ಒಳಭಾಗದಲ್ಲಿ ಕ್ಯಾಮರಾ, ವೀಡಿಯೋ ಕ್ಯಾಮರಾ, ಮೊಬೈಲ್ ಬಳಕೆಯನ್ನು ನಿಷೇಧಿಸಲಾಗಿರುತ್ತದೆ. ಸಂಬಂಧಪಟ್ಟ ಪೋಸ್ಟರ್‍‌ಗಳನ್ನು ಅಂಟಿಸಿ ಪ್ರಚಾರ ನೀಡುವಂತೆ ಸ್ಥಳೀಯ ಪೊಲೀಸ್ ಇಲಾಖೆಗಳಿಗೆ ಸೂಚಿಸಲಾಗಿದೆ. ಡಿಸೆಂಬರ್ 8ರಂದು ನಡೆಯುವ ದತ್ತಜಯಂತಿ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಚಿಕ್ಕಮಗಳೂರು ನಗರದ ರತ್ನಗಿರಿ (ಆರ್.ಜಿ.) ರಸ್ತೆ ಮತ್ತು ಇಂದಿರಾಗಾಂಧಿ (ಐ.ಜಿ.) ರಸ್ತೆಯಲ್ಲಿ ಬರುವ ಹೋಟೆಲ್‌ಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ರೀತಿಯ ಅಂಗಡಿ ಮುಂಗಟ್ಟುಗಳನ್ನು ತೆರೆಯದಂತೆ ಆದೇಶಿಸಲಾಗಿದೆ ಎಂದರು.

ದತ್ತಜಯಂತಿಗೆ ಜನರನ್ನು ಆಹ್ವಾನಿಸಲು ಸಂಘಪರಿವಾರದ ಕಾರ್ಯಕರ್ತರಿಂದ ಬೈಕ್ ರ್‍ಯಾಲಿ

ಮೂಲಸೌಕರ್ಯಗಳ ಅಭಿವೃದ್ಧಿ: ಚಿಕ್ಕಮಗಳೂರು ತಾಲ್ಲೂಕು ಐಡಿಪೀಠ ಗಾಮದ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ನಡೆಯಲಿರುವ ದತ್ತಜಯಂತಿ ಕಾರ್ಯಕ್ರಮದ ಅಂಗವಾಗಿ ಭಕ್ತಾಧಿಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲು ಜಿಲ್ಲಾಡಳಿತ ಅಗತ್ಯಕ್ರಮಕೈಗೊಂಡಿದೆ. ನಗರದಿಂದ ಪೀಠದವರೆಗೆ ಕೆಮ್ಮಣ್ಣುಗುಂಡಿ ಕ್ರಾಸ್, ಕವಿಕಲ್ ಗಂಡಿಯ ವ್ಯಾಪ್ತಿಯ ರಸ್ತೆಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಹೊನ್ನಮ್ಮನ ಹಳ್ಳದ ಹತ್ತಿರ ಭಕ್ತಾದಿಗಳ ಸ್ನಾನಕ್ಕೆ ಅನುಕೂಲವಾಗುವಂತೆ ಸ್ನಾನ ಘಟ್ಟಗಳನ್ನು ದುರಸ್ಥಿ ಕಾರ್ಯ ಹಾಗೂ ತಾತ್ಕಾಲಿಕ ಶೌಚಾಲಯಗಳನ್ನು ಅಳವಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಗಿರಿ ಪ್ರದೇಶಕ್ಕೆ ತೆರಳುವ ಪ್ರವಾಸಿಗರಿಗೆ ನಿರ್ಬಂಧ: ಡಿಸೆಂಬರ್ 6 ರಿಂದ ಡಿಸೆಂಬರ್ 9ರ  ಬೆಳಿಗ್ಗೆ 10 ಗಂಟೆಯವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿ,ಮತ್ತು ಐಡಿ ಪೀಠಕ್ಕೆ ಪ್ರವಾಸಿಗರು ಬರುವುದನ್ನು ನಿರ್ಬಂಧಿಸಲಾಗಿದೆ. ಹೋಂಸ್ಟೇಗಳಲ್ಲಿ ಕಾಯ್ದಿರಿಸಿದ್ದಲ್ಲಿ ಸೂಕ್ತ ರಶೀದಿ ತೋರಿಸಿದಲ್ಲಿ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.

Follow Us:
Download App:
  • android
  • ios