Asianet Suvarna News Asianet Suvarna News

Chikkamagaluru: ದೇವರಿಗೆ 2000 ಸಾವಿರ ರೂ. ಜೆರಾಕ್ಸ್ ನೋಟ್ ಹಾಕಿ ಹರಕೆ ತೀರಿಸಿದ ಭಕ್ತ!

ಭಕ್ತನೋರ್ವ ದೇವರಿಗೆ 2 ಸಾವಿರ ರೂಪಾಯಿ ನೋಟನ್ನ ಕಲರ್ ಜೆರಾಕ್ಸ್ ಮಾಡಿಸಿ ದೇವರ ಕಾಣಿಕೆ ಹುಂಡಿಯಲ್ಲಿ ಹಾಕಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ಸ್ವಾಮಿ ದೇಗುಲದಲ್ಲಿ ನಡೆದಿದೆ. 

chikkamagaluru devotee who offered 2000 thousand xerox notes to God gvd
Author
First Published Aug 4, 2023, 7:58 PM IST

ಚಿಕ್ಕಮಗಳೂರು (ಆ.04): ಭಕ್ತನೋರ್ವ ದೇವರಿಗೆ 2 ಸಾವಿರ ರೂಪಾಯಿ ನೋಟನ್ನ ಕಲರ್ ಜೆರಾಕ್ಸ್ ಮಾಡಿಸಿ ದೇವರ ಕಾಣಿಕೆ ಹುಂಡಿಯಲ್ಲಿ ಹಾಕಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ದಕ್ಷಿಣ ಕಾಶಿ ಎಂದೇ ಖ್ಯಾತಿಯಾಗಿರುವ ಕಳಸೇಶ್ವರ ಸ್ವಾಮಿ ದೇಗುಲದಲ್ಲಿ ನಡೆದಿದೆ. ಹರಕೆ ಕಟ್ಟಿಕೊಂಡಿದ್ದಾನೆಯೋ ಅಥವ ಕಟ್ಟಿದ ಹರಕೆ ತೀರಿಸಿದ್ದಾನೋ ಗೊತ್ತಿಲ್ಲ. ಆದ್ರೆ, ಹುಂಡಿ ಹಣ ಎಣಿಕೆ ಕಾರ್ಯದ ವೇಳೆ 2000 ಸಾವಿರ ಮುಖಬೆಲೆಯ ಜೆರಾಕ್ಸ್ ನೋಟು ಪತ್ತೆಯಾಗಿದೆ. ಆದರೆ, ಇದನ್ನ ಮಕ್ಕಳು ಆಟವಾಡಲು ಬಳಸು ನಕಲಿ ನೋಟುಗಳು. 

ಇದನ್ನ ದೊಡ್ಡವರೇ ಹಾಕಿದ್ದಾರೋ ಅಥವ ಮಕ್ಕಳು ಹಾಕಿದ್ದಾರೋ ಸ್ಪಷ್ಟವಾದ ಮಾಹಿತಿ ಇಲ್ಲ. ಆದರೆ, ಹುಂಡಿಯಲ್ಲಿ ಸಿಕ್ಕಿರುವ ಹಣವನ್ನ ನೋಡಿದ ಎಣಿಕಾ ಸಿಬ್ಬಂದಿಗಳು ಆ ನೋಟನ್ನ ಹರಿದು ಹಾಕಿದ್ದಾರೆ. ಈ ಹಿಂದೆ ಇದೇ ದೇವಾಲಯದಲ್ಲಿ ಹುಂಡಿ ಎಣಿಕ ಕಾರ್ಯದ ವೇಳೆ ಭಕ್ತನೋರ್ವ ಇಡೀ ವಂಶವೃಕ್ಷ ಬರೆದು ಎಲ್ಲರಿಗೂ ಒಳ್ಳೆಯದು ಮಾಡು, ಮದುವೆಗೆ ಹೆಣ್ಣು ಸಿಗುವಂತೆ ಮಾಡು. ಪಿಯುಸಿ ಪಾಸ್ ಮಾಡು. ಮಾವನಿಗೆ ಒಳ್ಳೆ ಬುದ್ಧಿ ಕೊಡು ಎಂದು ಬರೆದು ಹಾಕಿದ್ದನು. 2000 ರೂಪಾಯಿಯ ನಕಲಿ ನೋಟು ನೋಡಿದ ಹುಂಡಿ ಎಣಿಕಾ ಸಿಬ್ಬಂದಿಗಳು ನಸುನಕ್ಕು ಆ ನೋಟನ್ನ ಹರಿದು ಹಾಕಿದ್ದಾರೆ.

Shivamogga: ಮಕ್ಕಳಲ್ಲಿ ಕೌಶಲ್ಯಾಭಿವದ್ಧಿಗೆ ವಿಶೇಷ ಟೂಲ್ ರೆಡಿ ಮಾಡಿದ ಮಲೆನಾಡಿಗರು

ಸಿದ್ದು ಸಿಎಂ ಆಗಿದ್ದಕ್ಕೆ ಸೌದಿಯಿಂದ ಬಂದು ಹರಕೆ ತೀರಿಸಿದ ಅಭಿಮಾನಿ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಕ್ಕೆ ಅವರ ಅಭಿಮಾನಿಯೊಬ್ಬರು ಸೌದಿ ಅರೇಬಿಯಾದಿಂದ ಬಂದು ಇದೀಗ ತಮ್ಮ ಹರಕೆ ತೀರಿಸಿದ್ದಾರೆ.ಮೈಸೂರು ತಾಲೂಕು ಸಿದ್ಧರಾಮನಹುಂಡಿ ಗ್ರಾಮದ ಸಿದ್ದರಾಮೇಶ್ವರ ದೇವಾಲಯಕ್ಕೆ ಚಿನ್ನಲೇಪಿತ ಬೆಳ್ಳಿಯ ನಾಗಾಭರಣ ನೀಡಿ ಹರಕೆ ಸಲ್ಲಿಸಿದ್ದಾರೆ. ದೇವೇಗೌಡನಹುಂಡಿ ನಿವಾಸಿ ಮಹದೇವರ ಪುತ್ರ ಹಾಗೂ ಅನಿವಾಸಿ ಭಾರತೀಯ ರವಿ ಮಹದೇವ ಅವರು ಹರಕೆ ತೀರಿಸಿದ ಅಭಿಮಾನಿ. 

ಲೋಕಸಭಾ ಚುನಾವಣೆ ಹಿನ್ನೆಲೆ: ಮಾಗಡಿ ವಿಧಾ​ನ​ಸಭಾ ಕ್ಷೇತ್ರ​ದಲ್ಲಿ ಆಪ​ರೇ​ಷನ್‌ ಹಸ್ತ!

ರವಿ ಮಹದೇವ ಅವರು ಸದ್ಯ ಸೌದಿ ಅರೇಬಿಯಾದಲ್ಲಿ ನೆಲೆಸಿದ್ದು, ಸಾಗರೋತ್ತರ ಕನ್ನಡಿಗರು ಸಂಸ್ಥೆಯ ಸಂಸ್ಥಾಪಕ ಹಾಗೂ ಜಂಟಿ ಕಾರ್ಯದರ್ಶಿಯೂ ಆಗಿದ್ದಾರೆ. ಇವರು ಚುನಾವಣಾ ಪೂರ್ವದಲ್ಲಿ ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿ ಆಗಬೇಕು ಎಂದು ಹರಕೆಕಟ್ಟಿಕೊಂಡಿದ್ದು, ಅದರಂತೆ ಇದೀಗ ದೇವಸ್ಥಾನಕ್ಕೆ ಕುಟುಂಬ ಸಮೇತ ಭೇಟಿ ನೀಡಿ ತಮ್ಮ ಹರಕೆ ಸೇವೆ ಜೊತೆಗೆ ವಿಶೇಷ ಅಭಿಷೇಕ ನೆರವೇರಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡ ಹಾಗೂ ಗ್ರಾಮಸ್ಥರು ಇದ್ದರು.

Follow Us:
Download App:
  • android
  • ios