Asianet Suvarna News Asianet Suvarna News

ಚಿಕ್ಕಮಗಳೂರು : ಕಳಸ-ಹೊರನಾಡು ಬದಲಿ ರಸ್ತೆ ಬಳಕೆಗೆ ಸೂಚನೆ

  •  ಮೂಡಿಗೆರೆ ತಾಲೂಕಿನ ಗಂಗಮೂಲ ಕೊಟ್ಟಿಗೆಹಾರ ರಸ್ತೆಯಲ್ಲಿರುವ ಭದ್ರಾ ಸೇತುವೆ ಹಾಗು ಮೋರಿಯು ಶಿಥಿಲ
  • ಬದಲಿ ಮಾರ್ಗ ಬಳಕೆಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಯಿಂದ ಸೂಚನೆ
chikkamagaluru DC order to use separate root between kalasa horanadu snr
Author
Bengaluru, First Published Aug 18, 2021, 3:19 PM IST
  • Facebook
  • Twitter
  • Whatsapp

ಚಿಕ್ಕಮಗಳೂರು (ಆ.18): ಮೂಡಿಗೆರೆ ತಾಲೂಕಿನ ಗಂಗಮೂಲ ಕೊಟ್ಟಿಗೆಹಾರ ರಸ್ತೆಯಲ್ಲಿರುವ ಭದ್ರಾ ಸೇತುವೆ ಹಾಗು ಮೋರಿಯು ಶಿಥಿಲವಾಗಿದೆ. 

ಈ ರಸ್ತೆಯಲ್ಲಿ 10 ಮೆಟ್ರಿಕ್ ಟನ್ಗಿಂದ ಅಧಿಕ ಭಾರ ಹೊತ್ತು ಸಂಚರಿಸುವ ವಾಹನಗಳನ್ನು ಸಂಚರಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಮುಂದಿನ ಆದೇಶದವರೆಗೆ ನಿರ್ಬಂಧಿಸಿ ಕಳಸ ಮತ್ತು ಹೊರನಾಡು ಮಾರ್ಗಕ್ಕೆ ಬದಲಿ ಮಾರ್ಗವಾದ ಮಾಗುಂಡಿ ಬಾಳೂರು ಹ್ಯಾಂಡ್‌ ಪೋಸ್ಟ್ ಕಳಸ ಮೂಲಕ ವಾಹನ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

ಚಿಕ್ಕಮಗಳೂರು ಕಡೆ ಪ್ರವಾಸ ಹೊರಟಿದ್ದೀರಾ.? ಜಿಲ್ಲಾಡಳಿತದಿಂದ ಹೀಗಿದೆ ನಿರ್ಬಂಧ

ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ  ಭಾರೀ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಹಲವೆಡೆ ಪ್ರವಾಹ ಸದೃಶ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೇ ಇದರಿಂದ ಹಲವೆಡೆ ರಸ್ತೆಗಳು ಹಾಳಾಗಿದ್ದು, ಭೂ ಕುಸಿತವೂ ಉಂಟಾಗಿತ್ತು. ಈ ನಿಟ್ಟಿನಲ್ಲಿ ಜನರ ಹಿತದೃಷ್ಟಿಯ ಉದ್ದೇಶದಿಂದ ಬದಲಿ ಮಾರ್ಗ ಸೂಚಿಸಲಾಗಿದೆ. 

Follow Us:
Download App:
  • android
  • ios