3 ವರ್ಷ ಕಳೆದ್ರೂ ಸಂತ್ರಸ್ತರಿಗೆ ಸಿಗದ ಪರಿಹಾರ, 5 ಕುಟುಂಬಗಳಿಂದ ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ

* ಮೂರು ವರ್ಷ ಕಳೆದ್ರೂ ಸಂತ್ರಸ್ತರಿಗೆ ಸಿಗದ ಪರಿಹಾರ
* ಮಲೆಮನೆ ಗ್ರಾಮದ 5 ಕುಟುಂಬಗಳಿಂದ ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ
* ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಸಂತ್ರಸ್ತರಿಂದ ಮನವಿ

Chikkamagaluru 5 Family writes to President Kovind for euthanasia rbj

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು

ಚಿಕ್ಕಮಗಳೂರು, (ಏ.26):
2019ರ ಮಹಾಮಳೆಗೆ ಕಾಫಿನಾಡಲ್ಲಿ ಆಗಿರೋ ಅನಾಹುತ ಅಂತಿಂಥದಲ್ಲ. ಇಡೀ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದ್ದು ಚಿಕ್ಕಮಗಳೂರು ಜಿಲ್ಲೆಯಲ್ಲಿ. ಊರಿಗೆ ಊರೇ ಸಂಪೂರ್ಣ ಕೊಚ್ಚಿಕೊಂಡು ಹೋಯ್ತು,ಜನರ ಜೀವವೊಂದು ಉಳೀತು ಬಿಟ್ರೆ ಮನೆಗಳು ಎಲ್ಲಿದ್ದು ಅನ್ನೋ ಗುರುತು ಸಿಗಲಿಲ್ಲ. ಹೀಗೆ ಎದ್ನೋ ಬಿದ್ನೋ ಅಂತಾ ಓಡಿಬಂದು ಜೀವ ಉಳಿಸಿಕೊಂಡಿದ್ದ ಜನರಿಗೆ ನಿಮ್ಮ ಭವಿಷ್ಯ ಕಟ್ಟುವ ಹೊಣೆ ನಮ್ಮದು ಅಂತಾ ಸರ್ಕಾರ 4ನೇ ಮಳೆಗಾಲ ಬಂದ್ರೂ ಅದೇ ರಾಗ ಅದೇ ಹಾಡು ,ಇದರಿಂದ ಬೇಸತ್ತು 5 ಕುಟುಂಬಗಳು ಸಾಮೂಹಿಕ ಆತ್ಮಹತ್ಯೆಯ ನಿರ್ಧಾರ ಮಾಡುವೆ.

ಜೀವ ಉಳಿದೇ ಹೆಚ್ಚು 
2019ರಲ್ಲಿ ಮಲೆನಾಡಿನಲ್ಲಿ ಸುರಿದ ಮಹಾ ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮಲೆಮನೆ 5 ಮನೆ, ದೇವಸ್ಥಾನ ಕೊಚ್ಚಿ ಹೋಗಿತ್ತು. ಜೊತೆಗೆ ಕಾಫಿತೋಟಗಳು ಕೊಚ್ಚಿ ಹೋಗಿತ್ತು. ಕೊಚ್ಚಿ ಹೋಗಿರೋ ಜಾಗದಲ್ಲಿ ಮನೆಗಳಿದ್ವು ಅಂತಾ ಹೇಳಿದ್ರೂ ನಂಬಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಭೂ ಸ್ಫೋಟ ಸಂಭವಿಸಿ ಗುಡ್ಡಗಳೇ ಕರಗಿ ಛಿದ್ರವಾದ ಪರಿಣಾಮ ಊರಿಗೆ ಊರೇ ಸರ್ವನಾಶವಾಗಿತ್ತು. ಜನರು ಈ ವೇಳೆ ಜೀವ ಉಳಿದ್ರೆ ಅದೇ ದೊಡ್ಡದು ಅಂತಾ ಓಡಿ ಬಂದು ಜೀವ ಉಳಿಸಿಕೊಂಡಿದ್ರು.  

ಮಲೆನಾಡು ಭಾಗದಲ್ಲಿ ಮುಂದುವರಿದ ಕಾಡಾನೆ ಹಾವಳಿ,ಲಕ್ಷಾಂತರ ಮೌಲ್ಯದ ಬೆಳೆ ನಾಶ

2019ರಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮಲೆಮನೆ, ಅಲೇಖಾನ್ ಹೊರಟ್ಟಿ, ಮಧುಗುಂಡಿ ಸೇರಿದಂತೆ ಕೆಲ ಗ್ರಾಮಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ಜನರ ಬದುಕು ಬೀದಿಗೆ ಬಂತು. ಅದ್ರಲ್ಲೂ ಮಲೆಮನೆ ಗ್ರಾಮದ 5 ಮನೆಗಳಂತೂ ಕಂಪ್ಲೀಟ್ ಕೊಚ್ಚಿ ಹೋಗಿದ್ವು, ಮನೆಯಲ್ಲಿದ್ದ ಬೆಲೆಬಾಳುವ ವಸ್ತುಗಳು ಸೇರಿದಂತೆ ಅಪಾರ ಪ್ರಮಾಣದ ಚಿನ್ನಾಭರಣ, ಕಾಫಿ, ಮೆಣಸಿನ ಮೂಟೆಗಳು ಕೂಡ ಕೊಚ್ಚಿ ಹೋಗಿದ್ವು. ಶತಮಾನದ ಭೀಕರ ಪ್ರಳಯವನ್ನ ಕಂಡ ಜನರು, ಬದುಕ್ಕಿದ್ದೇ ಪವಾಡ ಅಂತಾ ನಿಟ್ಟುಸಿರು ಬಿಟ್ಟಿದ್ರು. 

ಆದ್ರೂ ಭವಿಷ್ಯದ ಬಗ್ಗೆ ಚಿಂತಿಸಿ ಕಣ್ಣೀರಿಡುತ್ತಿದ್ದಾಗ ಜನಪ್ರತಿನಿಧಿಗಳು, ಸರ್ಕಾರ ನಿಮ್ಮ ಭವಿಷ್ಯವನ್ನು ಕಟ್ಟಿಕೊಡುವುದು ನಮ್ಮ ಜವಾಬ್ದಾರಿ ಅನ್ನೋ ಭರವಸೆ ನೀಡಿ ಸಂತ್ರಸ್ಥರಿಗೆ ಅಭಯ ನೀಡಿತ್ತು. ಸದ್ಯಕ್ಕೆ ಬಾಡಿಗೆ ಮನೆಯಲ್ಲಿ ಇರುವಂತೆ ಸೂಚಿಸಿದ ಸರ್ಕಾರ, ಒಂದು ವರ್ಷದೊಳಗೆ ಮನೆ ಕಟ್ಟಿಕೊಡುವುದರ ಜೊತೆಗೆ ಜಮೀನು ಕಳೆದುಕೊಂಡ ಸಂತ್ರಸ್ಥರಿಗೆ ಜಮೀನು ನೀಡುವ ಅಶ್ವಾಸನೆ ಕೂಡ ನೀಡಿತ್ತು. ಖದ್ದು ಅಂದಿನ ಸಿಎಂ ಯಡಿಯೂರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಭರವಸೆಯನ್ನು ನೀಡಿದರು. ಸರ್ಕಾರದ ಭರವಸೆ ಮಾತುಗಳನ್ನು ಕೇಳಿದ ಮನೆ ಮಾಲೀಕರಿಗೆ ಸಿಕ್ಕಿದು ಬರೀ ಅಶ್ವಾಸನೆ…

ಮೂರು ವರ್ಷ ಹೋರಾಟ ಮಾಡಿದ್ರೂ ಸಿಗದ ಪರಿಹಾರ
ಮನೆಕಳೆದುಕೊಂಡವರಿಗೆ ಕೇವಲ 5 ತಿಂಗಳ ಬಾಡಿಗೆ ಹಾಕಿ ಜಿಲ್ಲಾಡಳಿತ  ಸೈಲೆಂಟಾಯಿತು. ಸಂತ್ರಸ್ಥರಿಗೆ ಮನೆ, ಜಮೀನು ನೀಡೋದ್ರ ಜೊತೆಗೆ ಸಂತ್ರಸ್ಥರಿಗೆ ಮನೆ ನಿರ್ಮಾಣವಾಗೋವರೆಗೂ ಬಾಡಿಗೆ ಹಣ ನೀಡುತ್ತೇವೆ ಅಂದಿದ್ದ ಸರ್ಕಾರ ಕೈತೊಳದುಕೊಳ್ಳುತು. ಬಾಡಿಗೆ ಹಣ ಬೇಡ ನಮಗೆ ಜಾಗ ನೀಡಿ ಅಂದ್ರೂ ಜಾಗ ನೀಡುತ್ತಿಲ್ಲ,ಸಂತ್ರಸ್ಥರನ್ನ ನಡು ಬೀದಿಯಲ್ಲಿ ಬಿಟ್ಟಿರುವುದು ನಿಜಕ್ಕೂ ಸರ್ಕಾರದ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.ಕಳೆದ ಮೂರು ವರ್ಷಗಳಿಂದ ಸರ್ಕಾರಕ್ಕೆ ಸಚಿವರಿಗೆ ಮನವಿ ಸಲ್ಲಿಸದ್ರೂ ಯಾವುದೆ ಪ್ರಯೋಜನವಾಗುತ್ತಿಲ್ಲ, ಬದಲಿ ಜಾಗವನ್ನು ನೀಡುತ್ತಿಲ್ಲ ಇದರ ಪರಿಣಾಮ ಬಾಡಿಗೆ ಮನೆಯಲ್ಲಿ ವಾಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಚಿಕ್ಕಮಗಳೂರು ಜಿಲ್ಲೆಗೆ ಭೇಟಿ ನೀಡಿದ ಕಂದಾಯ ಸಚಿವ ಆರ್ ಅಶೋಕ್ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಮಾತುಗಳನ್ನು ಹೇಳಿದ್ರೂ ಯಾವುದೋ ಕಾರ್ಯಗತಕ್ಕೆ ಬಂದಿಲ್ಲ. 

ದಯಾ ಮರಣಕ್ಕೆ ರಾಷ್ಟ್ರಪತಿಗೆ ಪತ್ರ ಬರೆದ 5 ಕುಟುಂಬ
ಮಲೆಮನೆಯಲ್ಲಿ 2019ರಲ್ಲಿ ಉಂಟಾದ ಪ್ರವಾಹದಿಂದ ಸಂಪೂರ್ಣ ಕೊಚ್ಚಿ ಹೋಗಿದ್ದ 5 ಮನೆಗಳಿಗೆ ಇದುವರೆಗೆ ಪರಿಹಾರ ದೊರಕದಿರುವ ಹಿನ್ನೆಲೆಯಲ್ಲಿ ಈ 5 ಕುಟುಂಬಗಳು ಸಾಮೂಹಿಕ ಆತ್ಮಹತ್ಯೆಗೆ ನಿರ್ಧರಿಸುವೆ. ಮನೆ ಸಂಪೂರ್ಣ ಕೊಚ್ಚಿ ಹೋಗಿದ್ದಲ್ಲದೆ,ಬದುಕಿಗೆ ಆಧಾರವಾಗಿದ್ದ ತೋಟ-ಗದ್ದೆಗಳು ನಾಶವಾಗಿದ್ದವು. ಅಂದಿನ ಮುಖ್ಯಮಂತ್ರಿಯಡಿಯೂರಪ್ಪ ಅವರು ಗ್ರಾಮಕ್ಕೆ ಆಗಮಿಸಿ ಪರಿಹಾರದ ಭರವಸೆ ನೀಡಿದ್ದರು.ಖುದ್ದು ಮಲೆಮನೆ ಗ್ರಾಮಕ್ಕೆ ಆಗಮಿಸಿ ಪರ್ಯಾಯ ಬದುಕು ಕಟ್ಟಿಕೊಡುವ ಮಾತು ಕೊಟ್ಟಿದ್ದರು. ಆ ಬಳಿಕ ಸಂಬಂಧಪಟ್ಟ ಜನಪ್ರತಿನಿಧಿಗಳು-ಅಧಿಕಾರಿಗಳ ಕಚೇರಿಗಳಿಗೆ ಅಲೆದು ಅಲೆದು ಸಂತ್ರಸ್ತರು ಸುಸ್ತಾಗಿದ್ದಾರೆ. ಸತತ ಮೂರು ವರ್ಷ ಹೋರಾಟ ಮಾಡಿದ್ರೂ ಪರಿಹಾರ ಸಿಗಲಿಲ್ಲ. ಇದೀಗ ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಸಂತ್ರಸ್ತರು ಮನವಿ ಮಾಡಿದ್ದಾರೆ

ಮಲೆಮನೆ ಜನರ ಸಂಕಷ್ಟಕ್ಕೆ ಸ್ಪಂದಿಸಿದ ಏಷ್ಯಾನೆಟ್ ಸುವರ್ಣ ನ್ಯೂಸ್
ಮಲೆಮನೆ ಸೇರಿದಂತೆ ಮಲೆನಾಡಿನಲ್ಲಿ 2019ರಲ್ಲಿ ಉಂಟಾದ ಅನಾಹುತದ ವರದಿ ಜೊತೆಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜನರ ಸಂಕಷ್ಟಕ್ಕೆ ಸ್ಪಂದನೆ ನೀಡಿತ್ತು,, ಜನರಿಗೆ ಬೇಕಾದ ಅಗತ್ಯವಸ್ತುಗಳು ಸೇರಿದಂತೆ ಆಹಾರ ಸಾಮಾಗ್ರಿಗಳನ್ನು ನೀಡಿತ್ತು. ಒಟ್ಟಾರೆ 2019 ಮಹಾಮಳೆ ಮಲೆನಾಡಿಗರದ ಬದುಕನ್ನೂ ಅಕ್ಷರಶಃ ಮೂರ ಬಟ್ಟೆ ಮಾಡಿದೆ. ಅದರಲ್ಲೂ ಜಿಲ್ಲೆಯಲ್ಲಿ 5 ಮನೆಗಳು, ಸುಮಾರು 40 ಎಕರೆ ಪ್ರದೇಶ ಸಂಪೂರ್ಣ ಕೊಚ್ಚಿಹೋಗಿದ್ದು ಇದೇ ಮಲೆಮನೆ ಗ್ರಾಮದಲ್ಲಿ. ಎಲ್ಲವನ್ನೂ ಕಳೆದುಕೊಂಡವರಿಗೆ  ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದ್ದ, ಜನಪ್ರತಿನಿಧಿಗಳು, ಸಂತ್ರಸ್ಥರಿಗೆ ಬರಿ ಭರವಸೆ ನೀಡ್ತಾನೆ ಇದ್ದಾರೆ. ಸರ್ಕಾರದ- ಜನಪ್ರತಿನಿಧಿಗಳ ಧೋರಣೆಯಿಂದ ಆಕ್ರೋಶಗೊಂಡಿರುವ ಸಂತ್ರಸ್ಥರು, ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕೆ ಸಂತ್ರಸ್ತರಿಂದ ಮನವಿ ಸಲ್ಲಿಸಿದ್ದಾರೆ ಇನ್ನಾದ್ರೂ ಎಚ್ಚೇತುಗೊಂಡು ಸರ್ಕಾರ, ಅಧಿಕಾರಿಗಳು ಇವರ ನೋವಿಗೆ ಸ್ಪಂದನೆ ನೀಡಬೇಕಾಗಿದೆ. 

Latest Videos
Follow Us:
Download App:
  • android
  • ios