ಅಕ್ರಮ ನಿವೇಶನ ಖಾತೆ ಮಾಡಿಕೊಂಡ ನಗರಸಭೆ ಅಧಿಕಾರಿಗಳ ಅಮಾನತು

ಚಿಕ್ಕಮಗಳೂರು ನಗರಸಭೆಯಲ್ಲಿ ನಿವೇಶನಗಳನ್ನು ಅಕ್ರಮ ಖಾತೆ ಮಾಡಿಕೊಟ್ಟ ಇಬ್ಬರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಕೆ.ಎನ್. ರಮೇಶ್‌ ಅವರು ಅಮಾನತು ಮಾಡಿದ್ದಾರೆ.

Chikkamagalur Municipality officials suspended for illegal plot accounts sat

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಜೂ.07): ಚಿಕ್ಕಮಗಳೂರು ನಗರದ ನಗಸಭೆಯ ಅಧಿಕಾರಿಗಳು ಅಕ್ರಮವಾಗಿ ಸರ್ಕಾರಿ ನಿವೇಶನಗಳನ್ನು ತಮ್ಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ದಿಢೀರನೇ ಭೆಟಿ ಮಾಡಿ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿ ಕೆ.ಎನ್. ರಮೇಶ್‌ ಅವರು ಇಬ್ಬರು ಅಧಿಕಾರಿಗಳನ್ನು ಸ್ಥಳದಲ್ಲಿಯೇ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಉಳಿದಂತೆ ಈ ಅಕ್ರಮ ಖಾತೆ ಪಗ್ರಕರಣದಲ್ಲಿ ಭಾಗಿಯಾದ ಇತರೆ ಐವರು ಸಿಬ್ಬಂದಿಗೆ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನು ನೀಡಿದ್ದಾರೆ.

ರಾಜ್ಯದಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ ಹಾಗೂ ಮಹಾನಗರ ಪಾಲಿಕೆಗಳಲ್ಲಿ ಅಧಿಕಾರಿಗಳು ಭಾರಿ ಪ್ರಮಾಣದ ಭ್ರಷ್ಟಾಚಾರ ಮಾಡುತ್ತಾರೆ ಎನ್ನುವುದು ಜಗಜ್ಜಾಹೀರಾದ ವಿಚಾರವಾಗಿದೆ. ಸಾಮಾನ್ಯ ವ್ಯಕ್ತಿಯಾಗಿ ಯಾವುದಾದರೂ ಕೆಲಸಕ್ಕೆ ಹೋದಾಗ ಅಧಿಕಾರಿಗಳಿಗೆ ಹಣ ಕೊಡದಿದ್ದರೆ ನಿಮ್ಮ ಕೆಲಸ ಆಗುವುದೇ ಇಲ್ಲ. ಇನ್ನು ಚಿಕ್ಕಮ ಗಳೂರಿನಲ್ಲಿಯೂ ಕೂಡ ಇಂತಹದ್ದೇ ಘಟನೆ ನಡೆದಿದೆ. ಇನ್ನು ನಗರಸಭೆಯ ನಿವೇಶನವನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿದ್ದ ಅಧಿಕಾರಿಗಳು ಮಾನತುಗೊಂಡು ಮನೆ ಸೇರಿಕೊಂಡಿದ್ದಾರೆ. 

ಗೃಹಜ್ಯೋತಿ ಯೋಜನೆ ಎಲ್ಲ ಪ್ರಶ್ನೆಗಳಿಗೂ ಇಲ್ಲಿವೆ ಉತ್ತರ: ಹೊರ ರಾಜ್ಯದವರಿಗೂ ಸಿಗುತ್ತೆ ಫ್ರೀ ವಿದ್ಯುತ್

ಇಬ್ಬರು ಎಸ್‌ಡಿಎ ಅಧಿಕಾರಿಗಳ ಅಮಾನತು:  ಚಿಕ್ಕಮಗಳೂರು ನಗರಸಭೆ ಒಂದಲ್ಲಾ ಒಂದು ಕಾರಣಕ್ಕಾಗಿ ಆಗಾಗ ಚರ್ಚೆಗೆ ಬರುತ್ತಲೇ ಇರುತ್ತದೆ. ಇದೀಗ ಅಕ್ರಮ ಖಾತೆಯ ಬಗ್ಗೆ ಜಿಲಾಧಿಕಾರಿ ಕೆ.ಎನ್. ರಮೇಶ್ ದಿಢೀರ್ ಭೇಟಿ ನೀಡಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಸಾರ್ವಜನಿಕರಿಂದ ಅಕ್ರಮ ಖಾತೆಗಳ ಬಗ್ಗೆ ದೂರು ಬಂದ  ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ದಿಢೀರ್  ಭೇಟಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆಯಲ್ಲಿ ಅಕ್ರಮ ಖಾತೆ ಪತ್ತೆಯಾಗಿದ್ದು ಇಬ್ಬರ ಅಧಿಕಾರಿಗಳು ಅಮಾನತ್ತು ಮಾಡಿ ಆದೇಶ ಮಾಡಿದ್ದಾರೆ. ನಗರಸಭೆಯ ದ್ವಿತೀಯ ದರ್ಜೆ ಸಹಾಯಕರಾದ ಮಹಾದೇವ್ ಹಾಗೂ ಆಶಾ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಇದೇ ಪ್ರಕರಣದಲ್ಲಿ ಇತರೆ ಐವರು ಸಿಬ್ಬಂದಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇನ್ನುಳಿದ ಐವರ ವಿರುದ್ಧ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ : ಚಿಕ್ಕಮಗಳೂರು ನಗರದ ಸುತ್ತಮುತ್ತಲಿನ ಕೆಲವು ಗ್ರಾಮ ಪಂಚಾಯ್ತಿಗಳಲ್ಲಿ ಖಾತೆಯಾಗಿರುವ ನಿವೇಶನಗಳು ನಗರಸಭೆಗೆ ಹಸ್ತಾಂತರ ಆಗಿವೆ. ಆ ಸಂದರ್ಭದಲ್ಲಿ ಇಂದಾವರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಉಪ್ಪಳ್ಳಿ ಗ್ರಾಮದ ಕೆಲವು ನಿವೇಶನಗಳು ಸಹ ಹಸ್ತಾಂತರ ಆಗಿವೆ ಎಂದರು. ಆದರೆ, ಈ ಪ್ರಕ್ರಿಯೆ ಮುಗಿದ ನಂತರದಲ್ಲಿ ಇಂದಾವರ ಗ್ರಾಮ ಪಂಚಾಯ್ತಿಯ ನಿವೇಶನದ ವಹಿಯಲ್ಲಿ 51 ಖಾತೆಗಳನ್ನು ಅಕ್ರಮವಾಗಿ ಸೇರಿಸಿದ್ದಾರೆ. ನಂತರ ಅವುಗಳನ್ನು ನಗರಸಭೆಯಲ್ಲಿ ಖಾತೆ ಮಾಡಿಸಲಾಗಿದೆ.

ಐದು ವರ್ಷದಲ್ಲಿ ದುಪ್ಪಟ್ಟಾದ ಕಾಡಾನೆಗಳ ಸಂತತಿ: ಮಾನವರ ಮೇಲಿನ ದಾಳಿಯೂ ಹೆಚ್ಚಳ

ಕೆಲವು ವರ್ಷಗಳಿಂದ ವ್ಯಕ್ತಿಗಳಿಂದ ವ್ಯಕ್ತಿಗಳಿಗೆ ಖಾತೆಗಳು ಬದಲಾವಣೆಯೂ ಕೂಡ ಆಗಿದೆ. ಈ ಸಂಬಂಧ ಬಂದಿದ್ದ ದೂರಿನ ಬಗ್ಗೆ ವರದಿ ನೀಡುವಂತೆ ಕೋರಿ ನಗರಸಭೆಯ ಪೌರಾಯುಕ್ತರಿಗೆ ಪತ್ರ ಬರೆಯಲಾಗಿತ್ತು. ಅವರ ವರದಿಯ ಆಧಾರದ ಮೇಲೆ ಅಕ್ರಮವಾಗಿ ಖಾತೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಅಮಾನತುಗೊಳಿಸಲಾಗಿದೆ. ಇನ್ನುಳಿದ ಐವರ ವಿರುದ್ಧ ಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಕೆ ಎನ್ ರಮೇಶ್ ಹೇಳಿದರು.

Latest Videos
Follow Us:
Download App:
  • android
  • ios