Asianet Suvarna News Asianet Suvarna News

Chikkaballapura; ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕದ ವೈದ್ಯರು, ಬಾಣಂತಿ ಸಾವು!

ಹೆರಿಗೆಗೆ ಬಂದಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದರಿಂದ ಬಾಣಂತಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.  

Chikkaballpura  Woman dies after delivery family alleged medical negligence gow
Author
First Published Oct 13, 2022, 7:28 PM IST

ವರದಿ: ರವಿಕುಮಾರ್ ವಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಬಳ್ಳಾಪುರ (ಅ.13): ಹೆರಿಗೆಗೆ ಬಂದಿದ್ದ ಮಹಿಳೆಗೆ ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕದೆ ವೈದ್ಯರು ನಿರ್ಲಕ್ಷ್ಯ ಮಾಡಿದ್ದರಿಂದ ಬಾಣಂತಿ ಸಾವನ್ನಪ್ಪಿರುವ ಘಟನೆ ಚಿಂತಾಮಣಿ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.  ನೇತ್ರಾವತಿ ಎಂಬ ಬಾಣಂತಿ ಮೃತಪಟ್ಟಿದ್ದು ವೈದ್ಯರ ವಿರುದ್ಧ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಂತಾಮಣಿ ತಾಲ್ಲೂಕು ನೀಲ ಪಲ್ಲಿ ಗ್ರಾಮದ ಗೋಪಾಲ ಗೌಡ ರವರ ಪತ್ನಿ ನೇತ್ರಾವತಿ ಕಳೆದ ತಿಂಗಳು 9 ರಂದು ಚಿಂತಾಮಣಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆಂದು ಬಂದಿದ್ದರು. ಈ ವೇಳೆ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದಾಳೆ ಈ ವೇಳೆ  ವೈದ್ಯರಾದ ಜಯಂತಿ ರವರು ನೇತ್ರಾವತಿ ಅವರಿಗೆ ಶಸ್ತ್ರಚಿಕಿತ್ಸೆ ಮಾಡಿ ಹೆರಿಗೆ  ಮಾಡಿದ್ದಾರೆ. ಆದರೆ ಈ ವೇಳೆ ಹೊಲಿಗೆ ಹಾಕದೆ ನಿರ್ಲಕ್ಷ್ಯ ತೋರಿದ್ದಾರೆ. ಇದರಿಂದಾಗಿ ನೇತ್ರಾವತಿಗೆ ಜಾಂಡೀಸ್ ಕಾಯಿಲೆ ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ಬಂದಂಥಾ ನೇತ್ರಾವತಿಗೆ ಯಾವುದೇ ರೀತಿಯಾದಂತಹ ಸೂಕ್ತ ಚಿಕಿತ್ಸೆ ನೀಡದೆ ಅಲ್ಲಿನ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆಂಬ ಆರೋಪ ಕುಟುಂಬಸ್ಥರು ಮಾಡಿದ್ದಾರೆ. ಬಳಿಕ ಆಗಮಿಸಿದ ವೈದ್ಯೆ  ಜಯಂತಿ ರವರು ಕೂಡಲೇ ನೇತ್ರಾವತಿ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿಗೆ ಕರೆದುಕೊಂಡು ಹೋಗಿ ಅಂತ ಸಲಹೆ ನೀಡಿದ್ದಾರೆ. 

ಆದರೆ ಆಸ್ಪತ್ರೆಗೆ ಅಲೆದಾಡಿ ಅಲೆದಾಡಿ ಯಾವುದೇ ಪ್ರಯೋಜನವಾಗದೆ ನೇತ್ರಾವತಿ ಸಾವನ್ನಪ್ಪಿದ್ದಾರೆ. ವೈದ್ಯರ ನಿರ್ಲಕ್ಷ್ಯ ಖಂಡಿಸಿ ನೇತ್ರಾವತಿ ಸಂಬಂಧಿಕರು ಆಸ್ಪತ್ರೆ ಎದುರು ಪ್ರತಿಭಟನೆಯನ್ನು ನಡೆಸಿದರು ಕೂಡಲೇ ಜಯಂತಿ ಅವರನ್ನು ಅಮಾನತು ಮಾಡಬೇಕೆಂದು ಆಗ್ರಹ ವ್ಯಕ್ತಪಡಿಸಿದರು. ಜಯಂತಿ ರವರನ್ನಿರ್ಲಕ್ಷ್ಯ ಸಾಬೀತಾದ ಹಿನ್ನೆಲೆ ಆಕೆಯನ್ನ ರಾತ್ರೋರಾತ್ರಿ ವರ್ಗಾವಣೆ ಮಾಡಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಕಾರವಾರ: ವೈದ್ಯರ ನಿರ್ಲಕ್ಷ್ಯಕ್ಕೆ ಬಾಣಂತಿ ಸಾವು, ಕುಟುಂಬಸ್ಥರಿಂದ ಪ್ರತಿಭಟನೆ

 ಶಸ್ತ್ರಚಿಕಿತ್ಸೆ ವೇಳೆ ಹೊಲಿಗೆ ಹಾಕದ ಕಾರಣ ನೇತ್ರಾವತಿ ಸಾವು: ಅಕ್ಟೋಬರ್ 9ರಂದು ನೇತ್ರಾವತಿ ಚಿಂತಾಮಣಿ ನಗರದ ತಾಯಿ ಮಕ್ಕಳ ಆಸ್ಪತ್ರೆಗೆ ಶಸ್ತ್ರ ಚಿಕಿತ್ಸೆಗೆಂದು ದಾಖಲಾಗಿದ್ದರು. ಈ ವೇಳೆ ನೇತ್ರಾವತಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಿ ದಂತ ವೈದ್ಯರಾದ ಜಯಂತಿ ರವರು ಶಸ್ತ್ರಚಿಕಿತ್ಸೆ ಬಳಿಕ ಹೊಲಿಗೆ ಹಾಕದೆ ನಿರ್ಲಕ್ಷ್ಯ ಮಾಡಿ ಆಕೆಯನ್ನು ಹಾಗೇ ಮನೆಗೆ ಕಳುಹಿಸಲಾಗಿತ್ತು. ಇದರಿಂದಾಗಿ ನೇತ್ರಾವತಿಯ ದೇಹದಲ್ಲಿ ಗಾಳಿ ಸೇರಿ ಉಸಿರಾಟಕ್ಕೆ ತೊಂದರೆಯಾಗಿ ಸಾವನ್ನಪ್ಪಿರುವುದಾಗಿ ತಜ್ಞ ವೈದ್ಯರು ಹೇಳಿದ್ದಾರೆ. ಇದರಿಂದಾಗಿ ಆಕ್ರೋಶಗೊಂಡ  ಕುಟುಂಬಸ್ಥರು ಆಸ್ಪತ್ರೆ ಸಿಬ್ಬಂದಿ ಹಾಗೂ  ಜಯಂತಿ ರವರ ನಿರ್ಲಕ್ಷ್ಯವನ್ನು ಖಂಡಿಸಿ ಆಸ್ಪತ್ರೆ ಎದುರು ಶವವನ್ನಿಟ್ಟು ಪ್ರತಿಭಟನೆ ನಡೆಸಿದರು. 

ತುಮಕೂರು: ವೈದ್ಯರ ನಿರ್ಲಕ್ಷ್ಯ ಆರೋಪ ಬಾಣಂತಿ ಸಾವು, ಪೋಷಕರ ಪ್ರತಿಭಟನೆ

ರಾತ್ರೋರಾತ್ರಿ ಡಾ. ಜಯಂತಿ ಜಯಂತಿ ವರ್ಗಾವಣೆ: ಚಿಂತಾಮಣಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಶಸ್ತ್ರಚಿಕಿತ್ಸಕಿ ಯಾಗಿದ್ದಂತಹ ವೈದ್ಯೆ ಜಯಂತಿ ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಆಗ್ರಹಿಸಿ ಮೃತ ನೇತ್ರಾವತಿ ಕುಟುಂಬಸ್ಥರು ಚಿಂತಾಮಣಿ ಸರ್ಕಾರಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದರು. ಶಸ್ತ್ರಚಿಕಿತ್ಸೆ ವೇಳೆ ಹೊಲಿಗೆ ಹಾಕದ ಕಾರಣ ನೇತ್ರಾವತಿ ಸಾವನ್ನಪ್ಪಿದ್ದಾರೆ ಎಂಬ ಕುಟುಂಬಸ್ಥರ ಆರೋಪದ ಬಗ್ಗೆ ತನಿಖೆ ನಡೆಸಿ ದಂತ ಆರೋಗ್ಯ ಇಲಾಖೆ ಅಧಿಕಾರಿಗಳು ಮೇಲ್ನೋಟಕ್ಕೆ ಜಯಂತಿ ರವರ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ತಿಳಿಯುತ್ತಿದ್ದಂತೆ ಜಯಂತಿ ರವರನ್ನ ರಾತ್ರೋರಾತ್ರಿ ಚಿಂತಾಮಣಿಯ ಆಸ್ಪತ್ರೆಯಿಂದ ಬೆಂಗಳೂರಿಗೆ ವರ್ಗಾವಣೆ ಮಾಡಿ ಆದೇಶಿಸಿದ್ದಾರೆ.

Follow Us:
Download App:
  • android
  • ios