Chikkaballapura Nandi Hill: ಪ್ರವಾಸಿಗರಿಗೆ ವಿಕೇಂಡ್‌ನಲ್ಲಿ ನಂದಿಬೆಟ್ಟಕ್ಕೆ ಪ್ರವೇಶ ಮುಕ್ತ!
ವಾರಾಂತ್ಯದ ದಿನಗಳಲ್ಲಿ ಸಾರ್ವಜನಿಕರು ಪ್ರವಾಸಿಗರಿಗೆ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಇನ್ನು ಮುಂದೆ ಮುಕ್ತಗೊಳಿಸಲಾಗಿದ್ದು, ಆನ್‌ಲೈನ್/ಆಫ್‌ಲೈನ್ ಮೂಲಕ ಎಂಟ್ರಿ ಟಿಕೆಟ್ ಪಡೆದವರಿಗೆ ಮಾತ್ರ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ರವಿಕುಮಾರ್ ವಿ, ಏಷ್ಯಾನೆಟ್ ಸುವರ್ಣನ್ಯೂಸ್, ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ (ಮಾ.24): ವಾರಾಂತ್ಯದ ದಿನಗಳಲ್ಲಿ ಸಾರ್ವಜನಿಕರು ಪ್ರವಾಸಿಗರಿಗೆ ನಂದಿ ಬೆಟ್ಟಕ್ಕೆ ಪ್ರವೇಶಕ್ಕೆ ಇನ್ನು ಮುಂದೆ ಮುಕ್ತಗೊಳಿಸಲಾಗಿದ್ದು, ಆನ್‌ಲೈನ್/ಆಫ್‌ಲೈನ್ ಮೂಲಕ ಎಂಟ್ರಿ ಟಿಕೆಟ್ ಪಡೆದವರಿಗೆ ಮಾತ್ರ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ. ನಂದಿ ಗಿರಿಧಾಮದ ಅಭಿವೃದ್ಧಿ ಕುರಿತು ನಡೆದ ಸಭೆಯಲ್ಲಿ ವಿಶ್ವವಿಖ್ಯಾತ ಪ್ರವಾಸಿತಾಣ ನಂದಿಬೆಟ್ಟಕ್ಕೆ ಇದೇ 26 ರಿಂದ ನಂದಿಬೆಟ್ಟಕ್ಕೆ ಪ್ರವೇಶಕ್ಕೆ ಒಪ್ಪಿಗೆ ನೀಡಲಾಗಿದೆ.
ಕೋವಿಡ್‌ನಿಂದ ನಂದಿಬೆಟ್ಟಕ್ಕೆ ವಿಕೇಂಡ್ ಕರ್ಫ್ಯೂ ವಿಧಿಸಲಾಗಿತ್ತು: ಕೋವಿಡ್‌ನಿಂದಾಗಿ ವಿಕೇಂಡ್ ದಿನಗಳಲ್ಲಿ ಕೊಠಡಿ ಕಾಯ್ದಿರಿಸಿದ ಪ್ರವಾಸಿಗರನ್ನು ಹೊರತುಪಡಿಸಿ ಉಳಿದ ಪ್ರವಾಸಿಗರಿಗೆ ನಂದಿ ಬೆಟ್ಟ ಪ್ರವೇಶಕ್ಕೆ ನಿರ್ಬಂಧಿಸಲಾಗಿತ್ತು. ಈ ನಿರ್ಬಂಧವನ್ನು ಬರುವ ವಾರಾಂತ್ಯದ ದಿನಗಳಿಗೆ ಸಡಿಲಿಕೆ ಮಾಡಿ ಇದೇ ಮಾರ್ಚ್ 26 ರ ವಾರಾಂತ್ಯದ ದಿನದಿಂದಲೇ ಟಿಕೆಟ್ ಪಡೆದ ಪ್ರವಾಸಿಗರಿಗೆ ನಂದಿ ಗಿರಿಧಾಮ ಪ್ರವಾಸಕ್ಕೆ ಅನುಮತಿ ನೀಡಲಾಗಿದೆ. ನಂದಿಬೆಟ್ಟಕ್ಕೆ ಹೆಚ್ಚಿನ ಜನರು ಬರ್ತಾರೆ ಎಂದು ಈ ಹಿಂದೆ ವಿಕೇಂಡ್ ಕರ್ಫ್ಯೂ ವಿಧಿಸಲಾಗಿತ್ತು..
Puneeth Rajkumar: ಸೆಲೆಬ್ರಿಟಿಗಳ ಪ್ರತಿಮೆ ಗುಚ್ಛ ಸೇರಿದ ಪವರ್ ಸ್ಟಾರ್ ಡಾ.ಅಪ್ಪು
ಟಿಕೆಟ್ ಬುಕ್ಕಿಂಗ್ ಹೇಗೆ?: ವಿಕೇಂಡ್ ದಿನಗಳಾದ ಶನಿವಾರ ಪ್ರವಾಸ ಮಾಡಲಿಚ್ಚಿಸುವ ಪ್ರವಾಸಿಗರು ಹಿಂದಿನ ದಿನವಾದ ಶುಕ್ರವಾರ ಸಂಜೆ 6:00 ಗಂಟೆಯೊಳಗೆ ಆನ್ ಲೈನ್ ನಲ್ಲಿ ಟಿಕೆಟ್ ಗಳನ್ನು ಪಡೆಯತಕ್ಕದ್ದು, ಭಾನುವಾರ ಪ್ರವಾಸ ಮಾಡಲಿಚ್ಚಿಸುವ ಪ್ರವಾಸಿಗರು ಹಿಂದಿನ ದಿನವಾದ ಶನಿವಾರ ಸಂಜೆ 6:00 ಗಂಟೆಯೊಳಗೆ ಆನ್ ಲೈನ್ ನಲ್ಲಿ ಟಿಕೆಟ್ ಗಳನ್ನು ಪಡೆಯತಕ್ಕದ್ದು, ಆನ್ ಲೈನ್ ನಲ್ಲಿ ಪ್ರವೇಶ ಪತ್ರ ದೊರಕದವರು ನಂದಿಬೆಟ್ಟದ ಕೆಳಗಿನ ಪ್ರವೇಶ ದ್ವಾರದ ಬಳಿ ಸಕ್ಷಮ ಪ್ರಾಧಿಕಾರ ತೆರದಿರುವ ಜಿಲ್ಲಾಡಳಿತದ ಕೌಂಟರ್ ನಲ್ಲಿ ಆಫ್ ಲೈನ್ ಟಿಕೆಟ್ ಪಡೆದು ಪ್ರವಾಸ ಕೈಗೊಳ್ಳಬಹುದು.
ಶೇ.50% ಆನ್ ಲೈನ್ ಮತ್ತು ಶೇ.50% ಆಫ್‌ಲೈನ್ ಟಿಕೆಟ್‌ಗಾಗಿ ನಿಗದಿಗೊಳಿಸಲಾಗಿದ್ದು, ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಮಾಡುವವರು. ವೆಬ್‌ಸೈಟ್ https://booking.kstdc.co/cre/index.phpid_category=114&controller=category& ವಿಳಾಸವನ್ನು ಸಂಪರ್ಕಿಸಬಹುದು ಆನ್ ಲೈನ್/ಆಫ್ ಲೈನ್ ಟಿಕೆಟ್ ಸಿಗದವರಿಗೆ ನಂದಿಬೆಟ್ಟ ಪ್ರವೇಶಕ್ಕೆ ಅವಕಾಶವಿರುವುದಿಲ್ಲ ಆದ್ದರಿಂದ ಪ್ರವಾಸಿಗರು ಆನ್ ಲೈನ್ ಟಿಕೆಟ್ ಖಾತರಿಪಡಿಸಿಕೊಂಡು ಪ್ರವಾಸ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್ ಲತಾ ಮನವಿ ಮಾಡಿದ್ದಾರೆ.
ಬಸ್ ಸಿಗದೆ ಲಗೇಜ್ ಆಟೋದಲ್ಲಿ ಕುರಿಗಳ ರೀತಿ ಪಾವಗಡ ಜನರ ಪ್ರಯಾಣ!
ನಿಲುಗಡೆಯನುಸಾರ ವಾಹನಗಳ ಪ್ರವೇಶಕ್ಕೆ ಅವಕಾಶ: ನಂದಿ ಗಿರಿಧಾಮದ ಮೇಲ್ಭಾಗದಲ್ಲಿ 1000 ದ್ವಿಚಕ್ರ ವಾಹನಗಳು ಹಾಗೂ ಕಾರು, ಮಿನಿ ಬಸ್ಸು ಸೇರಿದಂತೆ 300 ಲಘು (ಪೋರ್ ವೀಲರ್) ವಾಹನಗಳಿಗೆ ವಾಹನ ನಿಲುಗಡೆ ಮಾಡಲು ಸ್ಥಳಾವಕಾಶವಿದ್ದು, ಅಷ್ಟು ವಾಹನಗಳಿಗೆ ಮಾತ್ರ ಗಿರಿಧಾಮದ ಮೇಲ್ಭಾಗಕ್ಕೆ ಅನುಮತಿ ನೀಡಲಾಗುವುದು. ಮೇಲ್ಭಾಗಕ್ಕೆ ಚಲಿಸಿದ ವಾಹನಗಳು ನಿರ್ಗಮಿಸಿದಂತೆ ಇತರ ಪ್ರವಾಸಿಗರ ವಾಹನಗಳಿಗೆ ಟಿಕೆಟ್ ಗಳನ್ನು ವಿತರಿಸಿ, ನಂದಿಗಿರಿಧಾಮ ಪ್ರವಾಸಕ್ಕೆ ಅವಕಾಶ ಮಾಡಿಕೊಡಲಾಗಿರುತ್ತದೆ. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ದ್ವಿಚಕ್ರ ವಾಹನದಲ್ಲಿ ಬರುವ ಒಬ್ಬ ಸವಾರನಿಗೆ 50 ರೂ. ಇಬ್ಬರು ಸವಾರರ ವಾಹನಕ್ಕೆ 70 ರೂ, ನಾಲ್ಕು ಚಕ್ರದ ಎಲ್.ಎಂ.ವಿ ಲಘು ವಾಹನಗಳಿಗೆ 125 ರೂ.ಗಳು, ನಾಲ್ಕು ಚಕ್ರದ ಎಚ್.ಜಿ.ವಿ ವಾಹನಗಳಿಗೆ 150 ರೂ.ಗಳ ಶುಲ್ಕವನ್ನು ನಿಗದಿಪಡಿಸಲಾಗಿದೆ.