ಜಿಲ್ಲೆಯಲ್ಲಿ ಗುಡಿಬಂಡೆ ಮತ್ತು ಚೇಳೂರು ಸೇರಿ ಮೂರು ತಾಲೂಕುಗಳನ್ನು ಒಳಗೊಂಡಿರುವ ವಿಭಿನ್ನ ಕ್ಷೇತ್ರವಾಗಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಹೇಳಿ ಕೇಳಿ ಹೋರಾಟಗಳ ತವರು, ಆಂಧ್ರದ ಗಡಿಯಲ್ಲಿರುವ ರಾಜ್ಯದಲ್ಲಿಯೆ ಎಡಪಕ್ಷಗಳ ದಟ್ಟಪ್ರಭಾವ ಇರುವ ಈ ಕ್ಷೇತ್ರದಲ್ಲಿ 2023ರ ಚುನಾವಣಾ ಕಾವು ರಂಗೇರುತ್ತಿದೆ.

 ಬಾಗೇಪಲ್ಲಿ (ಡಿ.09): ಜಿಲ್ಲೆಯಲ್ಲಿ ಗುಡಿಬಂಡೆ ಮತ್ತು ಚೇಳೂರು ಸೇರಿ ಮೂರು ತಾಲೂಕುಗಳನ್ನು ಒಳಗೊಂಡಿರುವ ವಿಭಿನ್ನ ಕ್ಷೇತ್ರವಾಗಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರ ಹೇಳಿ ಕೇಳಿ ಹೋರಾಟಗಳ ತವರು, ಆಂಧ್ರದ ಗಡಿಯಲ್ಲಿರುವ ರಾಜ್ಯದಲ್ಲಿಯೆ ಎಡಪಕ್ಷಗಳ ದಟ್ಟಪ್ರಭಾವ ಇರುವ ಈ ಕ್ಷೇತ್ರದಲ್ಲಿ 2023ರ ಚುನಾವಣಾ ಕಾವು ರಂಗೇರುತ್ತಿದೆ.

ಸ್ವಾತಂತ್ರ್ಯ ಬಂದ ನಂತರ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರ ಕಾಂಗ್ರೆಸ್‌ ಭದ್ರಕೋಟೆಯಾಗಿತ್ತು. ಆದರೆ ಸಿಪಿಎಂ ಇಲ್ಲಿ ತನ್ನ ಮೂವರು ಶಾಸಕರನ್ನು ಆರಿಸುವ ಮೂಲಕ ಕಾಂಗ್ರೆಸ್‌ ಭದ್ರಕೋಟೆಯನ್ನು ಭದ್ರಗೊಳಿಸುವಲ್ಲಿ ಯಶಸ್ವಯಾಗಿತ್ತು. ಸಿಪಿಎಂ 3 ಬಾರಿ, ಪಕ್ಷೇತರರು 2 ಬಾರಿ ಶಾಸಕರಾಗಿರುವುದು ಹೊರತುಪಡಿಸಿದರೆ ಉಳಿದ ಎಲ್ಲಾ ಅವಧಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳೇ ಇಲ್ಲಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್‌ ಭದ್ರಕೋಟೆ:

ಮುಂಬರುವ 2023ರಲ್ಲಿ ನಡೆಯಲಿರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗಿವೆ. ಬಾಗೇಪಲ್ಲಿ ಕ್ಷೇತ್ರದಲ್ಲಿ ಸತತವಾಗಿ ಶಾಸಕರಾಗಿ ಯಾರೂ ಆಯ್ಕೆಯಾಗಿರುವ ದಾಖಲೆ ಇಲ್ಲ. ಆದರೆ 2012 ಪಕ್ಷೇತರರಾಗಿ ಮತ್ತು 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಶಾಸಕರಾದ ಎಸ್‌.ಎನ್‌.ಸುಬ್ಬಾರೆಡ್ಡಿ ಸತತ ಎರಡು ಸಲ ಶಾಸಕರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲೂ ಅವರೇ ಅಖಾಡಕ್ಕೆ ಇಳಿಯಲಿದ್ದು ಪಕ್ಷದ ಅಧಿಕೃತ ಘೋಷಣೆ ಬಾಕಿದೆ. ಈ ನಡುವೆ ಮಾಜಿ ಶಾಸಕ ಎನ್‌.ಸಂಪಂಗಿ ಸಹ ಕಾಂಗ್ರೆಸ್‌ ಟಿಕೆಟ್‌ಗೆ ಪ್ರಯತ್ನ ಮುಂದುವರಿಸಿದ್ದಾರೆ.

ಸಿಪಿಎಂಗೆ ಅನಿಲ್‌, ಮಂಜುನಾಥರೆಡ್ಡಿ ಆಕಾಂಕ್ಷಿ

2023ರಲ್ಲಿ ನಡೆಯಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಬಾಗೇಪಲ್ಲಿ ವಿಧಾನ ಸಭಾ ಕ್ಷೇತ್ರದಲ್ಲಿ ಸಿಪಿಎಂ ಆಕಾಂಕ್ಷಿಗಳಾಗಿ ಡಾ.ಅನಿಲ್‌ ಕುಮಾರ್‌ ಮತ್ತು ಪಿ.ಮಂಜುನಾಥರೆಡ್ಡಿ ರವರ ನಡುವೆ ತ್ರೀವ ಪೈಪೋಟಿ ನಡೆಯುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ ಆದರೆ ಪಕ್ಷದ ಹೈಕಮಾಂಡ್‌ ಟಿಕೆಟ್‌ ಘೋಷಣೆ ಮಾಡುವುದಷ್ಟೇ ಬಾಕಿ.

ಖಾತೆ ತೆರೆಯಲು ಬಿಜೆಪಿ ಸಾಹಸ:

ಬಿಜೆಪಿಗೆ ಕ್ಷೇತ್ರದಲ್ಲಿ ಇನ್ನೂ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಟಿಕೇಟ್‌ಗಾಗಿ ಸಮಾಜ ಸೇವಕ ವಿ.ಮುನಿರಾಜು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಕೋನಪರೆಡ್ಡಿ, ಅರಿಕೆರೆ ಕೃಷ್ಣಾರೆಡ್ಡಿ ರವರ ನಡುವೆ ತೆರೆಮೆರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ. ಜೊತೆಗೆ ಸಚಿವ ಡಾ.ಸುಧಾಕರ್‌ ಕುಟುಂಬಸ್ಥರು ಇಲ್ಲಿ ಸ್ಪರ್ಧಿಸುತ್ತಾರೆಂಬ ಮಾತು ಕೇಳಿ ಬರುತ್ತಿದ್ದು ಯಾರಿಗೆ ಟಿಕೆಟ್‌ ಎಂಬುದು ನಿಗೂಢವಾಗಿದೆ. ಸಚಿವ ಸುಧಾಕರ್‌ ಹೇಳಿದವರಿಗೆ ಇಲ್ಲಿ ಟಿಕೆಟ್‌ ಅಂತಿಮವಾಗಲಿದೆ.

ದಳಕ್ಕೆ ರೆಡ್ಡಿ ಅಭ್ಯರ್ಥಿ:

ಜೆಡಿಎಸ್‌ ಪಕ್ಷದಿಂದ ಈಗಾಗಲೇ ಡಿ.ಜೆ.ನಾಗರಾಜರೆಡ್ಡಿಗೆ ಟಿಕೇಟ್‌ ಘೋಷಣೆ ಮಾಡಿರುವ ಹಿನ್ನಲೆಯಲ್ಲಿ ಟಿಕೆಟ್‌ ಸಮಸ್ಯೆ ಇಲ್ಲ. ಆದರೆ ನಾಗರಾಜರೆಡ್ಡಿ ಟಿಕೆಟ್‌ ಘೋಷಣೆ ಮಾಡಿರುವುದಕ್ಕೆ ಕೆಲ ನಿಷ್ಠಾವಂತ ಪಕ್ಷದ ಕಾರ್ಯಕರ್ತರು ಅಸಾಮಧಾನ ಹೊರ ಹಾಕಿದ್ದಾರೆ.

 ಕೈ, ಕಮಲ, ಸಿಪಿಎಂ ಟಿಕೆಟ್‌ಗೆ ಶೀತಲ ಸಮರ

ಕಾಂಗ್ರೆಸ್‌ಗೆ ಸುಬ್ಬಾರೆಡ್ಡಿ, ದಳಕ್ಕೆ ನಾಗರಾಜರೆಡ್ಡಿ, ಬಿಜೆಪಿ ಮತ್ತು ಸಿಪಿಎಂ ಟಿಕೆಟ್‌ಗೆ ಲಾಬಿ - ಬಿ.ಟಿ.ಚಂದ್ರಶೇಖರರೆಡ್ಡಿ

ಬಂಡಾಯದ ನೆಲದಲ್ಲಿ ದಂಗಲ್

ಶಿವಕುಮಾರ ಕುಷ್ಟಗಿ

ಗದಗ (ಡಿ.3) : ರಾಜ್ಯದ ರೈತ ಚಳವಳಿಯ ಮೂಲ ನೆಲವಾದ ನರಗುಂದ ವಿಧಾನಸಭಾ ಕ್ಷೇತ್ರದಲ್ಲಿ ಟಿಕೆಟ್‌ ಫೈಟ್‌ ಜೋರಾಗಿದೆ. ಬಿಜೆಪಿಯಲ್ಲಿ ಹಾಲಿ ಸಚಿವ ಸಿ.ಸಿ.ಪಾಟೀಲ್‌ ಮಾತ್ರ ಟಿಕೆಟ್‌ ಆಕಾಂಕ್ಷಿಯಾಗಿದ್ದರೆ, ಕಾಂಗ್ರೆಸ್‌ನಲ್ಲಿ ಮಾಜಿ ಸಚಿವ ಬಿ.ಆರ್‌.ಯಾವಗಲ್‌ ಸೇರಿದಂತೆ ಆರುಮಂದಿ ಟಿಕೆಟ್‌ ಬಯಸಿ ಕೆಪಿಸಿಸಿಗೆ ಅರ್ಜಿ ಸಲ್ಲಿಸಿರುವುದು ಪೈಪೋಟಿಗೆ ಕಾರಣವಾಗಿದೆ.

ಮಾಜಿ ಸಚಿವ, ಹಿರಿಯ ನಾಯಕ ಬಿ.ಆರ್‌. ಯಾವಗಲ್ಲ ಅವರ ಜತೆಗೆ ಯುವ ಕಾಂಗ್ರೆಸ್‌ ಮುಖಂಡರಾದ ಸಿದ್ಧಲಿಂಗೇಶ್ವರ ಪಾಟೀಲ, ಡಾ. ಸಂಗಮೇಶ ಕೊಳ್ಳಿ, ಪ್ರಕಾಶ ಕರಿ, ದಶರಥ ಗಾಣಿಗೇರ, ವಿವೇಕ ಯಾವಗಲ್ಲ ಟಿಕೆಟ್‌ಗಾಗಿ ತೊಡೆ ತಟ್ಟಿರುವುದು ನರಗುಂದ ಕ್ಷೇತ್ರದ ಹೆಸರು ಬೆಂಗಳೂರಿನಲ್ಲಿ ಧ್ವನಿಸುತ್ತಿದೆ.

Ground Report: ಗದಗದಲ್ಲಿ ಟಿಕೆಟ್‌ಗೆ ಪೈಪೋಟಿ, ಹೇಗಿದೆ ಅಖಾಡ?

ಕಾಂಗ್ರೆಸ್‌ ಮತ್ತು ಜನತಾ ಪರಿವಾರದ ನೆಲವಾಗಿದ್ದ ನರಗುಂದ ಬಿಜೆಪಿ ತೆಕ್ಕೆಗೆ ಹೋದಾಗಲೇ ಈ ಕ್ಷೇತ್ರದ ಹಿರಿಯ ಮುಖಂಡ ಯಾವಗಲ್‌ ಅವರ ವಿರೋಧಿ ಅಲೆಯೂ ಹೆಚ್ಚಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚುವಂತೆ ಮಾಡಿದೆ. ಅದೇ ಕಾಂಗ್ರೆಸ್‌ ಸೋಲಿಗೆ ಕಾರಣವಾಗುತ್ತ ಬರುತ್ತಿದೆ.

ಬಿಜೆಪಿಯಲ್ಲಿ ಸಿಸಿಪಾ ಒಬ್ಬರೇ:

ಹಾಲಿ ಶಾಸಕ, ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ಒಬ್ಬರೇ ಬಿಜೆಪಿಯ ಟಿಕೆಟ್‌ ಆಕಾಂಕ್ಷಿಯಾಗಿದ್ದು, ಇದುವರೆಗೂ ಪಕ್ಷದಲ್ಲಿ ಬೇರೆ ಯಾರೂ ಸ್ಪರ್ಧೆಯ ಕುರಿತು ಇಂಗಿತ ವ್ಯಕ್ತಪಡಿಸದಿರುವುದು ಈ ಕ್ಷೇತ್ರದ ವಿಶೇಷ.

ನರಗುಂದ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ, ಆರ್‌ಎಸ್‌ಎಸ್‌, ವಿಶ್ವ ಹಿಂದೂ ಪರಿಷತ್‌, ಬಜರಂಗ ದಳ ಸೇರಿದಂತೆ ಎಲ್ಲ ಹಿಂದೂ ಪರ ಸಂಘಟನೆಗಳು, ಸಚಿವರು ಪ್ರತಿನಿಧಿಸುವ ಪಂಚಮಸಾಲಿ ಸಮುದಾಯ, ಲಿಂಗಾಯತರ ಒಳ ಪಂಡಗಳು ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ಸಚಿವ ಸಿ.ಸಿ. ಪಾಟೀಲ್‌ ಒಳ್ಳೆಯ ಹೆಸರು, ಸಂಪರ್ಕ ಹೊಂದಿದ್ದಾರೆ. ಹಾಗಾಗಿ ಪಾಟೀಲ ಮತ್ತೊಮ್ಮೆ ನರಗುಂದ ಕ್ಷೇತ್ರದಿಂದ ಕಣಕ್ಕಿಳಿಯುವ ಹುಮ್ಮಸ್ಸಿನಲ್ಲಿದ್ದಾರೆ.