ಚಿಕ್ಕಬಳ್ಳಾಪುರ(ಡಿ.04): ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಡಿ.5 ರಂದು ನಡೆಯಲಿರುವ ಮತದಾನಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದ್ದು, 254 ಮತಗಟ್ಟೆಕೇಂದ್ರಗಳಲ್ಲಿ ಕುಡಿಯುವ ನೀರು, ವಿದ್ಯುತ್‌ ವ್ಯವಸ್ಥೆ ಸೇರಿದಂತೆ ಮತ್ತಿತರ ಮೂಲಸೌಕರ್ಯಗಳನ್ನು ಕಲ್ಪಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್‌. ಲತಾ ತಿಳಿಸಿದ್ದಾರೆ.

ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,00218 ಮತದಾರರಿದ್ದು, ಇದರಲ್ಲಿ 99,449 ಪುರುಷ, 1,00747 ಮಹಿಳೆಯರು, 22 ತೃತೀಯ ಲಿಂಗಿಗಳು, 46 ಮಂದಿ ಸೇವಾ ಮತದಾರರಿದ್ದಾರೆ ಎಂದು ತಿಳಿಸಿದ್ದಾರೆ.

ಕ್ಷೇತ್ರದಲ್ಲಿ 254 ಮತಗಟ್ಟೆಗಳು

ಕ್ಷೇತ್ರದಲ್ಲಿ 254 ಮತಗಟ್ಟೆಗಳಲ್ಲಿ ಈಗಾಗಲೇ 45 ಕೇಂದ್ರಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರ್ತಿಸಲಾಗಿದೆ. ಈ ಮತಗಟ್ಟೆಗಳಿಗೆ 1,253 ಮಂದಿ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕಾಗಿ ನೇಮಿಸಲಾಗಿದ್ದು, ಸೂಕ್ತ ಭದ್ರತೆ ಕಲ್ಪಿಸಲಾಗುತ್ತದೆ ಎಂದು ಹೇಳಿದ್ದಾರೆ.

ಕಾಲ್ನಡಿಗೆ ಮೂಲಕ ಪ್ರಚಾರಕ್ಕಿಳಿದ ಬಿಜೆಪಿ ಅಭ್ಯರ್ಥಿ

ಮಹಿಳೆಯರಿಗಾಗಿ ಬಚ್ಚಹಳ್ಳಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ(ನಂ.327) ಪ್ರತ್ಯೇಕವಾದ ಸಖಿ ಮತಗಟ್ಟೆತೆರೆಯಲಾಗಿದೆ. ವಿಶೇಷ ಚೇತನ ಮತದಾರರಿಗೆ ಚಿಕ್ಕಬಳ್ಳಾಪುರ ತಾಲೂಕಿನ ಬಡವರ ಸಂಘ ಕಾಲೋನಿಯಲ್ಲಿರುವ ತೋಟಗಾರಿಕೆ ಇಲಾಖೆ ಕಚೇರಿ ಮತಗಟ್ಟೆ(ನಂ.952)ಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ವಿಶೇಷಚೇತನ ಮತದಾರರಿರುವ ಗ್ರಾಪಂಗೆ ಆಟೋ ವ್ಯವಸ್ಥೆ, ವ್ಹೀಲ್‌ಚೇರ್‌ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.

ಮದ್ಯ ಮಾರಾಟ ನಿಷೇಧ

ಮತದಾನದ ದಿನ 48 ಗಂಟೆಗಳಿಂದ ಮತದಾನದ ಮರುದಿನದವರೆಗೂ ಒಣ ದಿನ ಎಂದು ಘೋಷಿಸಿದ್ದು, ಮದ್ಯ ಮಾರಾಟವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಲ್ಲದೆ, ಮತದಾನ ನಡೆಸಲಿರುವ ಪ್ರದೇಶಗಳು, ಮತ ಕ್ಷೇತ್ರಗಳಿಗೆ ಅನ್ವಯವಾಗುವಂತೆ ಕ್ರಿಮಿನಲ್‌ ಪ್ರಕ್ರಿಯೆ ಸಂಹಿತೆ ಸೆಕ್ಷನ್‌ 144 ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗುತ್ತದೆ ಎಂದು ಹೇಳಿದ್ದಾರೆ.

'ಟೈಮ್ ಸೆನ್ಸ್ ಇಲ್ವಾ'..? ಚುನಾವಣಾ ಸಿಬ್ಬಂದಿಗೆ ಕ್ಲಾಸ್..!

48 ಗಂಟೆ ಕಾನೂನು ಬಾಹಿರವಾಗಿ ಗುಂಪು ಕೂಡುವುದನ್ನು ಮತ್ತು ಸಾರ್ವಜನಿಕವಾಗಿ ಸಭೆ ನಡೆಸುವುದು ನಿಷೇಧಿಸಲಾಗುವುದು. ಚುನಾವಣಾ ಪ್ರಚಾರ ಹಾಗೂ ಜಾಹೀರಾತನ್ನು ಮತದಾನ ಪೂರ್ಣಗೊಳ್ಳುವ 48 ಗಂಟೆಗಳ ಕಾಲ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮದಲ್ಲಿ ನಿಷೇಧಿಸಲಾಗುವುದು. ಮತದಾನದ ದಿನ ಎಲ್ಲ ಸರ್ಕಾರಿ, ಖಾಸಗಿ ಶಾಲಾ, ಕಾಲೇಜುಗಳಿಗೆ, ಎಲ್ಲ ಖಾಸಗಿ ಕಂಪನಿಗಳು ಮತ್ತು ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ವೇತನ ಸಹಿತ ರಜೆ ಘೋಷಿಸಲಾಗಿದೆ ಎಂದು ತಿಳಿಸಿದ್ದಾರೆ.

ಮತದಾನಕ್ಕೆ ಗುರುತು ಚೀಟಿ ಕಡ್ಡಾಯ

ಮತದಾನದ ದಿನ ಎಫಿಕ್‌ಕಾರ್ಡ್‌ (ಮತದಾರರ ಗುರುತಿನ ಚೀಟಿ) ಇಲ್ಲದಿದ್ದಲ್ಲಿ ಪಾಸ್‌ಪೋರ್ಟ್‌, ಡ್ರೈವಿಂಗ್‌ ಲೈಸನ್ಸ್‌, ಬ್ಯಾಂಕ್‌ ಪಾಸ್‌ಬುಕ್‌, ಪಾನ್‌ ಕಾರ್ಡ್‌, ಆರ್‌ಜಿಐಯ ಸ್ಮಾರ್ಟ್‌ ಕಾರ್ಡ್‌, ನರೇಗಾ ಉದ್ಯೋಗ ಕಾರ್ಡ್‌, ಆರೋಗ್ಯ ವಿಮೆ ಕಾರ್ಡ್‌, ಪಿಂಚಣಿ ಕಾರ್ಡ್‌, ಎಂಪಿ, ಎಂಎಲ್‌ಎ, ಎಂಎಲ್‌ಸಿಗಳಿಂದ ನೀಡುವ ಅಧಿಕೃತ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಸೇರಿದಂತೆ 13 ದಾಖಲೆಗಳನ್ನು ಮತದಾನದ ದಿನ ಹಾಜರುಪಡಿಸಲು ನಿಗದಿಪಡಿಸಲಾಗಿದೆ. ಇದರಲ್ಲಿ ಯಾವುದಾದರೂ ಒಂದು ಹಾಜರುಪಡಿಸಬಹುದು ಎಂದು ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಆರತಿ ಆನಂದ್‌, ಉಪವಿಭಾಗಾಧಿಕಾರಿ ಎ.ಎನ್‌. ರಘುನಂದನ್‌, ತಹಸೀಲ್ದಾರ್‌ ಕೆ. ನರಸಿಂಹಮೂರ್ತಿ, ಗೌರಿಬಿದನೂರು ತಹಸೀಲ್ದಾರ್‌ ಶ್ರೀನಿವಾಸ್‌ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಮತದಾನ ದಿನ ಬಿಗಿಭದ್ರತೆ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಮತದಾನ ದಿನದಂದು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬಿಗಿಭದ್ರತೆ ಕಲ್ಪಿಸಲಾಗಿದೆ. ಶಾಂತಿಯುತವಾಗಿ ಮತದಾನ ನಡೆಯಲು 21 ಮಂದಿ ಸೆಕ್ಟರ್‌ ಅಧಿಕಾರಿಗಳನ್ನು ನೇಮಿಸಲಾಗಿದೆ. 10 ಚೆಕ್‌ಪೋಸ್ಟ್‌ಗಳಲ್ಲಿ ಎಸ್‌ಎಸ್‌ಟಿ ತಂಡದವರಿಂದ ಪ್ರತಿ ವಾಹನವನ್ನು ಕಡ್ಡಾಯವಾಗಿ ತಪಾಸಣೆ ನಡೆಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ ತಿಳಿಸಿದ್ದಾರೆ.