Asianet Suvarna News Asianet Suvarna News

Chikkaballapur Utsav: ಚಿಕ್ಕಬಳ್ಳಾಪುರ ಭವಿಷ್ಯದಲ್ಲಿ ದೊಡ್ಡ ನಗರವಾಗಲಿದೆ: ಸಚಿವ ಸುಧಾಕರ್‌

ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ವಿದ್ಯಾವಂತ ಯುವಕರಿದ್ದಾರೆ, ಪ್ರಗತಿಪರ ರೈತರಿದ್ದಾರೆ, ನೈಸರ್ಗಿಕ ಸಂಪನ್ಮೂಲಗಳಿವೆ. ಭವಿಷ್ಯದ ದಿನಗಳಲ್ಲಿ ಚಿಕ್ಕಬಳ್ಳಾಪುರ ದೊಡ್ಡ ನಗರವಾಗಿ ಬೆಳೆಯಲಿದೆಯೆಂದು ಸಚಿವ ಡಾ.ಕೆ.ಸುಧಾಕರ್‌ ಭರವಸೆ ವ್ಯಕ್ತಪಡಿಸಿದರು. 

Chikkaballapur Will Become a Big City in Future Says Minister Dr K Sudhakar gvd
Author
First Published Jan 13, 2023, 1:30 AM IST

ಚಿಕ್ಕಬಳ್ಳಾಪುರ (ಜ.13): ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ವಿದ್ಯಾವಂತ ಯುವಕರಿದ್ದಾರೆ, ಪ್ರಗತಿಪರ ರೈತರಿದ್ದಾರೆ, ನೈಸರ್ಗಿಕ ಸಂಪನ್ಮೂಲಗಳಿವೆ. ಭವಿಷ್ಯದ ದಿನಗಳಲ್ಲಿ ಚಿಕ್ಕಬಳ್ಳಾಪುರ ದೊಡ್ಡ ನಗರವಾಗಿ ಬೆಳೆಯಲಿದೆಯೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಭರವಸೆ ವ್ಯಕ್ತಪಡಿಸಿದರು. ಚಿಕ್ಕಬಳ್ಳಾಪುರ ಉತ್ಸವದ ಹಿನ್ನಲೆಯಲ್ಲಿ ಗುರುವಾರ ರಾಷ್ಟ್ರೀಯ ಯುವ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಯುವಕ ಹಾಗೂ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.

ನೀವು ಶಾಸಕರು, ಸಚಿವರಾಗಿ ಪರಿಚಯ ಇದೆ, ನಿಮ್ಮ ವ್ಯಕ್ತಿತ್ವ ಏನು? ಎಂಬ ಪ್ರಶ್ನೆಗೆ ಉತ್ತರಿಸಿ, ನಾನು ಸಾರ್ವಜನಿಕ ಜೀವನಕ್ಕೆ ಬಂದು 10 ವರ್ಷ ಆಯಿತು. ನಿಮಗೆ ಗೊತ್ತಿದೆ. ಸಾರ್ವಜನಿಕ ಜೀವನಕ್ಕೆ ಬರುವ ಮೊದಲು ಯಾರೊಂದಿಗೂ ಬೆರೆಯುತ್ತಿರಲಿಲ್ಲ. ಈಗ ಜನರ ಮಧ್ಯೆಯೇ ಇರುವ ಅನುಭವ ಇಷ್ಟ. ಜನರೊಂದಿಗೆ ಮಾತನಾಡುವಾಗ ಅವರ ಕಷ್ಟಗಳನ್ನು ಕೇಳಿ ಪರಿಹರಿಸುವ ಯತ್ನ ಮಾಡುತ್ತಿದ್ದೇನೆ. ಇದರಿಂದ ವಿಶೇಷತೆ ಕಾಣುತ್ತೇನೆ, ಹೊಸ ಅನುಭವ ನನಗೂ ಆಗುತ್ತಿದೆ ಎಂದರು. ವೈದ್ಯನಾಗಿಯೇ ಕೆಲಸ ಮಾಡಿಕೊಂಡಿದಿದ್ದರೆ, ಕ್ಲಿನಿಕ್‌ನಲ್ಲಿ ದಿನಕ್ಕೆ 70 ರಿಂದ 100 ಜನರನ್ನು ನೋಡುತ್ತಿದ್ದೆ. ಆದರೆ ಆರೋಗ್ಯ ಸಚಿವನಾಗಿರುವುದರಿಂದ ರಾಜ್ಯಕ್ಕೆ 5 ಹೊಸ ವೈದ್ಯಕೀಯ ಕಾಲೇಜು ತಂದಿದ್ದೇನೆ.

ಸುಧಾಕರ್‌ಗೆ ಸಿಎಂ ಆಗುವ ಎಲ್ಲಾ ಅರ್ಹತೆಯಿದೆ: ಸಚಿವ ಎಸ್‌.ಟಿ.ಸೋಮಶೇಖರ್‌

3 ಸಾವಿರ ಇದ್ದ ಆಮ್ಲಜನಕ ಸಹಿತದ ಹಾಸಿಗೆಗಳನ್ನು 30 ಸಾವಿರ ಹಾಸಿಗೆಗೆ ಹೆಚ್ಚಿಸಿದ್ದೇನೆ. 438 ನಮ್ಮ ಕ್ಲಿನಿಕ್‌ ತೆರೆದಿದ್ದೇನೆ, ಮಹಿಳೆಯರಿಗಾಗಿಯೇ ವಿಶೇಷವಾಗಿ 250 ಆಯುಷ್ಮತಿ ಕ್ಲಿನಿಕ್‌ ತೆರೆಯಲಾಗಿದೆ. ಇವೆಲ್ಲವೂ ನಿಮ್ಮ ಆಶೀರ್ವಾದದಿಂದ ಎಂದು ಹೇಳಿದರು. ನಿಮಗೆ ಯಾವ ರಾಜಕಾರಣಿ ಇಷ್ಟ ಎಂಬ ಪ್ರಶ್ನೆಗೆ ಒಬ್ಬರನ್ನು ಹೆಸರಿಸಲು ಕಷ್ಟ, ಮಹಾತ್ಮಾ ಗಾಂಧೀಜಿ, ಡಾ. ಅಂಬೇಡ್ಕರ್‌, ತಮ್ಮ ರಾಜಕೀಯ ಗುರುಗಳಾದ ಎಸ್‌.ಎಂ. ಕೃಷ್ಣ, ಪ್ರಧಾನಿ ಮೋದಿ, ವಾಜಪೇಯಿ, ಸರ್ದಾರ್‌ ವಲ್ಲಭಬಾಯಿ ಪಟೇಲ್‌ ತಮಗೆ ಸ್ಫೂರ್ತಿಯಾಗಿರುವುದಾಗಿ ಹೇಳಿದರು.

ಈವರೆಗೆ ವೃತ್ತಿ ಬದುಕು ಎಂಬುದು ಕೇವಲ ವೈದ್ಯ, ಇಂಜಿನಿಯರ್‌ ಮಾತ್ರ ಎಂಬ ಪರಿಸ್ಥಿತಿ ಇತ್ತು. ಈಗ ಬದಲಾಗಿದೆ. ಆದರೆ ಹೆಚ್ಚು ಜನರು ರಾಜಕಾರಣಕ್ಕೆ ಆಸಕ್ತಿ ತೋರುತ್ತಿಲ್ಲ. ಕೆಡುತ್ತಿರುವ ವ್ಯವಸ್ಥೆಯನ್ನು ಸರಿ ಮಾಡುವವರು ಯಾರು, ಅರ್ಹ ವಿದ್ಯಾರ್ಥಿಗಳು ರಾಜಕಾರಣಕ್ಕೆ ಬರುವ ಆಸಕ್ತಿ ಬರಬೇಕು. ಉನ್ನತ ಶಿಕ್ಷಣ ಮಾಡಿದವರು, ದೇಶದ ಮೇಲೆ ವಿಶೇಷ ಅಭಿಮಾನ ಹೊಂದಿರುವವರು ರಾಜಕಾರಣಕ್ಕೆ ಬಂದರೆ ಸುಧಾರಣೆ ತರಲು ಸಾಧ್ಯ. ಮುಂದಿನ ದಿನಗಳಲ್ಲಿ ನೀವೂ ಚಿಕ್ಕಬಳ್ಳಾಪುರದ ಶಾಸಕ, ಸಂಸದರಾಗುವ ಕನಸು ಹೊಂದಬೇಕು, ನಿಮ್ಮಲ್ಲಿಯೂ ನಾಯಕರಾಗುವ ಗುಣ ಹುಟ್ಟಬೇಕು ಎಂದರು.

Chikkaballapur Utsav: ರಾಜ್ಯದ ಯಾವುದೇ ಶಾಸಕರು ಮಾಡದ ಸಾಹಸ ಸುಧಾಕರ್ ಮಾಡಿದ್ದಾರೆ: ಸಚಿವ ಸೋಮಶೇಖರ್

ನೀವು ಭವಿಷ್ಯದಲ್ಲಿ ಮುಖ್ಯಮಂತ್ರಿಯಾದರೆ?: ಚಿಕ್ಕಬಳ್ಳಾಪುರದಿಂದ ಈವರೆಗೆ ಯಾರೂ ಮುಖ್ಯಮಂತ್ರಿಯಾಗಿಲ್ಲ, ಭವಿಷ್ಯದಲ್ಲಿ ನೀವು ಮುಖ್ಯಮಂತ್ರಿಯಾದರೆ ಏನು ಸಿದ್ಧತೆ ಮಾಡಿಕೊಂಡಿದ್ದೀರಿ? ಎಂಬ ವಿದ್ಯಾರ್ಥಿನಿಯೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವ ಡಾ.ಕೆ.ಸುಧಾಕರ್‌, ಮುಖ್ಯಮಂತ್ರಿ ಹುದ್ದೆ ನಿಭಾಯಿಸಲು ಸಿದ್ಧತೆ ಅಗತ್ಯವಿಲ್ಲ, ನಿಮ್ಮ ಆಶೀರ್ವಾದದಿಂದ ಶಾಸಕನಾಗಿ, ಈಗ ರಾಜ್ಯದ ಆರೋಗ್ಯ ಸಚಿವನಾಗಿದ್ದೇನೆ. ಯಾವುದೇ ಹುದ್ದೆ ನಿಭಾಯಿಸುವ ಸಾಮರ್ಥ್ಯ ಇದೆ ಎಂದು ತಿಳಿದಿರುವುದಾಗಿ ಹೇಳಿದರು. ಅಲ್ಲದೆ ಯಾವುದೇ ಕೆಲಸ ಮಾಡುವಾಗ ಪ್ರೀತಿಯಿಂದ, ಬದ್ಧತೆ ಮತ್ತು ಜವಾಬ್ದಾರಿಯಿಂದ ಮಾಡುತ್ತೇನೆ, ನಿಮ್ಮ ಆಶೀರ್ವಾದ ಮತ್ತು ಭಗವಂತನ ಕೃಪೆ ಇದ್ದರೆ, ಮುಂದೆ ದೊಡ್ಡ ಅವಕಾಶ ಸಿಕ್ಕಿದರೆ ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಎಲ್ಲ ರೀತಿಯ ಪ್ರಯತ್ನ ಮಾಡುತ್ತೇನೆ. ಆದರೆ ನಾನು ಸ್ಪರ್ಧೆಯಲ್ಲಿಲ್ಲ, ಅವಕಾಶ ಸಿಕ್ಕಾಗ ಅದಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.

Follow Us:
Download App:
  • android
  • ios