ಮಕ್ಕಳಾಗಿಲ್ಲ ಅಂತ ದೇವರ ಮೊರೆ: ಭಕ್ತೆಯ ಜತೆ ಪರಾರಿಯಾಗಿದ್ದ ಪೂಜಾರಿ ತಾತ ಪತ್ತೆ!
54 ವರ್ಷದ ವ್ಯಕ್ತಿಯ ಜೊತೆ 24 ವರ್ಷದ ವಿವಾಹಿತ ಮಹಿಳೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿಯಲ್ಲಿ ನಡೆದಿದೆ. ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ ಮಹಿಳೆ ಕೊನೆಗೆ ಪೂಜಾರಿ ಜೊತೆಯೇ ಪರಾರಿಯಾಗಿದ್ದಳು. ಇವರಿಬ್ಬರನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ.
ಚಿಕ್ಕಬಳ್ಳಾಪುರ (ಆ.17): 54 ವರ್ಷದ ವ್ಯಕ್ತಿಯ ಜೊತೆ 24 ವರ್ಷದ ವಿವಾಹಿತ ಮಹಿಳೆ ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಡಶೀಗೇನಹಳ್ಳಿಯಲ್ಲಿ ನಡೆದಿದೆ. ಮಕ್ಕಳಾಗಿಲ್ಲ ಅಂತ ದೇವರ ಮೊರೆ ಹೋಗಿದ್ದ ಮಹಿಳೆ ಕೊನೆಗೆ ಪೂಜಾರಿ ಜೊತೆಯೇ ಪರಾರಿಯಾಗಿದ್ದಳು. ಇವರಿಬ್ಬರನ್ನೂ ಪೊಲೀಸರು ಪತ್ತೆ ಮಾಡಿದ್ದಾರೆ. ಪೂಜಾರಿಗೆ ಮೂರು ಮಕ್ಕಳು, ಮೊಮ್ಮಕ್ಕಳು ಸಹ ಇದ್ದಾರೆ. ಈತ ಗೃಹಿಣಿ ಲಲಿತಾ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಎನ್ನಲಾಗಿದೆ. ಈ ವಿಷಯ ಅಕೆಯ ಗಂಡ ಮನೆಯವರಿಗೆ, ಪೂಜಾರಿ ಮನೆಯವರಿಗೆ, ಮತ್ತು ಊರೆಲ್ಲಾ ಗೊತ್ತಾದಾಗ ಇವರಿಬ್ಬರು ಊರು ಬಿಟ್ಟು ಪರಾರಿಯಾಗಿದ್ದರು.
ಲಲಿತಾಗೆ ಮದುವೆಯಾಗಿ ಐದಾರು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಹೀಗಾಗಿ ಗ್ರಾಮದ ದೇವಾಲಯಕ್ಕೆ ಪೂಜೆಗೆ ಅಂತ ಹೋಗಿ ಬರುತ್ತಿದ್ದಳು. ಆಗ ಆಕೆಗೆ ಪೂಜಾರಿ ಮುನಿರಾಜು ಜತೆ ಸಲುಗೆ ಬೆಳೆದು,ಪ್ರಣಯಕ್ಕೆ ತಿರುಗಿ ಇಬ್ಬರೂ ಜೂನ್ 15ರಂದು ಊರುಬಿಟ್ಟು ಪರಾರಿಯಾಗಿ ಆಂಧ್ರಪ್ರದೇಶ ಅನಂತಪುರದಲ್ಲಿ ಜೀವನ ಮಾಡಿಕೊಂಡಿದ್ದರು. ಲಲಿತಾ ಕಾಣೆಯಾದ ಬಗ್ಗೆ ಪತಿ ನರಸಿಂಹಮೂರ್ತಿ ಪೊಲೀಸರಿಗೆ ದೂರು ನೀಡಿದ್ದನು.
2024ಕ್ಕೆ ನರೇಂದ್ರ ಮೋದಿಯೇ ಪ್ರಧಾನಿ: ಎಂಟಿಬಿ ನಾಗರಾಜ್
ಇದನ್ನರಿತ ಮುನಿರಾಜು ಮತ್ತು ಲಲಿತಾ ಆತ್ಮಹತ್ಯೆ ಮಾಡಿಕೊಂಡಿರುವ ನಾಟಕವಾಡಿದ್ದಾರೆ. ಆ. 12 ರಂದು ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ ಈ ಜೋಡಿ ತಮ್ಮ ಬಟ್ಟೆಇದ್ದ ಬ್ಯಾಗ್, ತಮ್ಮ ಚಪ್ಪಲಿ ಹಾಗೂ ಬಳಸುತ್ತಿದ್ದ ಒಂದು ಮೊಬೈಲ್ ಅನ್ನು ಅಮಾನಿ ಗೋಪಾಲ ಕೃಷ್ಣ ಕೆರೆಗೆ ಹೊಂದಿ ಕೊಂಡಿರುವ ಬನ್ನಿಕುಪ್ಪೆ ಗ್ರಾಮದ ಕೆರೆಯಂಗಳದಲ್ಲಿ ಇಟ್ಟು ಪರಾರಿಯಾಗಿದ್ದರು. ಇದನ್ನು ನೋಡಿದ ಪೊಲೀಸರು ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿರಬೇಕೆಂದು ಕೆರೆಯನ್ನು ಜಾಲಾಡಿದೂ ಮೃತದೇಹ ಪತ್ತೆಯಾಗಿರಲಿಲ್ಲ.
ಬಿ.ಸಿ.ರೋಡ್ ರೈಲು ನಿಲ್ದಾಣ ಅಭಿವೃದ್ಧಿಗೆ 26 ಕೋಟಿ ಅನುದಾನ ಬಿಡುಗಡೆ: ನಳಿನ್ ಕಟೀಲ್
ಮೊಬೈಲ್ ಸಿಕ್ಕಾಗ ಮತ್ತೆ ಅಲರ್ಟ್ ಆದ ಪೊಲೀಸರು ಜೋಡಿಯ ಬಳಿ ಇದ್ದ ಮತ್ತೊಂದು ಮೊಬೈಲ್ ನಂಬರ್ ಅನ್ನು ಸಿಡಿಆರ್ ಹಾಕಿ ಕರೆಗಳನ್ನ ಪರಿಶೀಲಿಸಿ ಕಾರ್ಯಾಚರಣೆ ನಡೆಸಿದಾಗ ಅಮಾನಿ ಗೋಪಾಲ ಕೃಷ್ಣ ಕೆರೆ ಪಕ್ಕದಲ್ಲಿರೋ ಆರಣ್ಯ ಪ್ರದೇಶದಲ್ಲಿ ಇವರಿಬ್ಬರೂ ಸಿಕ್ಕಿಬಿದ್ದಿದ್ದಾರೆ. ಚಿಕ್ಕಬಳ್ಳಾಫುರ ಮಹಿಳಾ ಠಾಣಾ ಪೊಲೀಸರು ಮಹಿಳೆಯನ್ನ ಗಂಡನ ಜೊತೆ ಕಳುಹಿಸಿದ್ದು, ಪೂಜಾರಿಗೆ ಬುದ್ದಿವಾದ ಹೇಳಿ ಬಿಟ್ಟು ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.