ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಕಾಗದ ರಹಿತ ಇ-ಆಸ್ಪತ್ರೆ
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯನ್ನು ಇಂದಿನಿಂದ ಪೇಪರ್‌ಲೆಸ್ ಮಾಡಲಾಗುತ್ತಿದೆ. ಮೊದಲ ಭಾರಿಗೆ ಈ ಪ್ರಯತ್ನ ನಡೆಯುತ್ತಿದೆ. ತ್ಯಾಜ್ಯ ಮುಕ್ತ ಹಾಗೂ ಪರಿಸರ ಸ್ನೇಯಾಗಿ ರೂಪಿಸುವ ಉದ್ದೇಶದಿಂದ ಇದನ್ನ ಅನುಷ್ಟಾನ ಮಾಡಲಾಗುತ್ತಿದೆ.
ವರದಿ : ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ (ಮಾ.08) : ಪಾರದರ್ಶಕ ಆಡಳಿತದ ಜೊತೆಗೆ ಆಸ್ಪತ್ರೆಗಳನ್ನು ತ್ಯಾಜ್ಯ ಮುಕ್ತ ಹಾಗೂ ಪರಿಸರ ಸ್ನೇಯಾಗಿ ರೂಪಿಸುವ ಉದ್ದೇಶದಿಂದ ರಾಜ್ಯದಲ್ಲಿಯೆ ಪ್ರಪ್ರಥಮ ಬಾರಿಗೆ ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಯಲ್ಲಿ ಕಾಗದ ರಹಿತ ಇ-ಆಸ್ಪತ್ರೆ ಕಾರ್ಯಕ್ರಮ ಸೋಮವಾರದಿಂದ ಅನುಷ್ಟಾನಗೊಳ್ಳಲಿದೆ.
ಜಿಲ್ಲೆಯವರಾದ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಆದೇಶದಂತೆ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇ-ಆಸ್ಪತ್ರೆ ಕಾರ್ಯಕ್ರಮ ಅನುಷ್ಠಾನಕ್ಕೆ ಆಯ್ಕೆ ಮಾಡಿದ್ದಾರೆ. ಇದರ ಯಶಸ್ಸುನ್ನು ನೋಡಿ ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಇದರ ಅನುಷ್ಠಾನಕ್ಕೆ ಆರೋಗ್ಯ ಇಲಾಖೆ ನಿರ್ಧರಿಸಿದೆ.
ಹಳ್ಳಿ ಆಸ್ಪತ್ರೆಗಳಲ್ಲೂ ಕೊರೋನಾ ಲಸಿಕೆ: ಸಚಿವ ಸುಧಾಕರ್ ...
ಜಿಲ್ಲೆಯಲ್ಲಿ ಜಿಲ್ಲಾ ಆಸ್ಪತ್ರೆಯಿಂದ ಹಿಡಿದು ತಾಲೂಕು ಕೇಂದ್ರಗಳಲ್ಲಿರುವ ಸಾರ್ವಜನಿಕ ಆಸ್ಪತ್ರೆಗಳು, ಹೋಬಳಿ ಮಟ್ಟದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಗರ ಆರೋಗ್ಯ ಕೇಂದ್ರಗಳಲ್ಲಿ ಸಂಪೂರ್ಣವಾಗಿ ಕಾಗದ ರಹಿತವಾಗಿ ನಿರ್ವಹಿಸಲು ಇ ಆಸ್ಪತ್ರೆ ಯೋಜನೆ ರೂಪಿಸಿ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಭಾನುವಾರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದರು.
ಮಂಗಳೂರು ವೈದ್ಯ ಪದ್ಮನಾಭ ಕಾಮತ್ ಶ್ಲಾಘಿಸಿದ ಪ್ರಧಾನಿ ಮೋದಿ ...
ಆಸ್ಪತ್ರೆಗಳಿಗೆ ಚಿಕಿತ್ಸೆ ಬಯಸಿ ಬರುವ ರೋಗಿಗಳಿಗೆ ಆರೋಗ್ಯ ಸೇವೆಗಳು ವಿಳಂಬ ಆಗದೇ ತ್ವರಿತವಾಗಿ ಸಿಗಬೇಕು, ರೋಗಿಗಳ ಸಮಗ್ರ ಆರೋಗ್ಯದ ಡೇಟಾ ದಾಖಲಾಗಬೇಕು, ಪಾರದರ್ಶಕ ಆಡಳಿತದ ಜೊತೆಗೆ ಆಸ್ಪತ್ರೆಗಳನ್ನು ತ್ಯಾಜ್ಯ ಮುಕ್ತ ಮಾಡುವ ಉದ್ದೇಶದೊಂದಿಗೆ ಇ-ಆಸ್ಪತ್ರೆಗಳು ಕಾರ್ಯನಿರ್ವಹಿಸಲಿವೆ.
ಏನಿದು ಇ-ಆಸ್ಪತ್ರೆ?
ಆಸ್ಪತ್ರೆಗೆ ಬರುವ ರೋಗಿಯ ಹೊರ ರೋಗಿ ವಿಭಾಗದ ನೋಂದಣಿಯಿಂದ ಹಿಡಿದು ಎಲ್ಲಾ ಸೇವೆಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಿದ್ದು ಪ್ರತಿ ರೋಗಿಗೆ ಪ್ರತ್ಯೇಕ ನೊಂದಣಿ ಸಂಖ್ಯೆಯನ್ನು ನೀಡಲಾಗುವುದು. ಪ್ರತಿ ಬಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುವ ವೇಳೆ ನೊಂದಣಿ ಸಂಖ್ಯೆಯನ್ನು ಬಾರ್ ಕೋಡ್‌ನಲ್ಲಿ ಸ್ಕ್ಯಾನ್ ಮಾಡಿ ರೋಗಿಗಿಗೆ ನೀಡಲಾಗುವ ಚಿಕಿತ್ಸೆ ಮತ್ತು ಸಲಹೆ ಸೂಚನೆಗಳನ್ನು ಆನ್ ಲೈನ್‌ನಲ್ಲಿ ನಮೂದಿಸಿ ಸಂಗ್ರಹಿಸಲಾಗುವುದು.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯನ್ನು ರಾಜ್ಯದಲ್ಲಿಯೆ ಮೊದಲ ಬಾರಿಗೆ ಇ-ಆಸ್ಪತ್ರೆಯಾಗಿ ಅನುಷ್ಠಾನಕ್ಕೆ ತರಲಾಗುತ್ತಿದೆ. ಆಸ್ಪತ್ರೆಗೆ ಬರುವ ರೋಗಿಯ ನೊಂದಣಿಯಿಂದ ಹಿಡಿದು ಔಷಧ ವಿತರಣೆವರೆಗೂ ಸಂಪೂರ್ಣ ಕಾಗದ ರಹಿತವಾಗಿ ಎಲ್ಲವನ್ನು ಆನ್‌ಲೈನ್ ಮೂಲಕ ಒದಗಿಸಲಾಗುತ್ತದೆ.
ಡಾ.ರಮೇಶ್, ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರು.