ಮಂಗಳೂರು ವೈದ್ಯ ಪದ್ಮನಾಭ ಕಾಮತ್ ಶ್ಲಾಘಿಸಿದ ಪ್ರಧಾನಿ ಮೋದಿ
ಮಂಗಳೂರಿನ ವೈದ್ಯ ಡಾ. ಪದ್ಮನಾಭ ಕಾಮತ್ ಜೊತೆ ಪ್ರಧಾನಿ ಮೋದಿ ಸಂವಾದ/ ಜನೌಷಧಿ ಕೇಂದ್ರಗಳನ್ನು ಪ್ರೋತ್ಸಾಹಿಸುತ್ತಿರುವ ವೈದ್ಯ ಡಾಕ್ಟರ್ ಪದ್ಮನಾಭ ಕಾಮತ್/ ಡಾ.ಪದ್ಮನಾಭ ಕಾಮತ್ ಮಂಗಳೂರಿನ ಖ್ಯಾತ ಹೃದಯ ವೈದ್ಯರು/ ಡಾ.ಪದ್ಮನಾಭ ಕಾಮತ್ ಮಾತಿನ ಸಾರಾಂಶ
ಮಂಗಳೂರು(ಮಾ. 07) ಮಂಗಳೂರಿನ ವೈದ್ಯ ಡಾ. ಪದ್ಮನಾಭ ಕಾಮತ್ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ ಜನೌಷಧಿ ಕೇಂದ್ರ ಗಳನ್ನು ಪ್ರೋತ್ಸಾಹಿಸುತ್ತಿರುವ ವೈದ್ಯ ಡಾಕ್ಟರ್ ಪದ್ಮನಾಭ ಕಾಮತ್ ಅವರ ಜತೆ ಸಂವಾದದಲ್ಲಿ ಮಾತನಾಡಿದ್ದಾರೆ.
ಡಾ.ಪದ್ಮನಾಭ ಕಾಮತ್ ಮಂಗಳೂರಿನ ಖ್ಯಾತ ಹೃದಯ ವೈದ್ಯರು. ಮೂರು ವರ್ಷದಿಂದ ಜನೌಷಧಿ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ ಗ್ರಾಮೀಣ ಭಾಗದ ಬಡಜನರಿಗೆ ಹೃದಯಾಘಾತ ಆಗುತ್ತಿತ್ತು. ಅವರಿಗೆ ತಕ್ಷಣದ ಚಿಕಿತ್ಸೆ ನೀಡುವುದು ಕಷ್ಟ ಆಗುತ್ತಿತ್ತು. ಹಾಗಾಗಿ ಜನೌಷಧಿ ಕೇಂದ್ರದಲ್ಲಿ ಇಸಿಜಿ ಮೆಶೀನ್ ಹಾಕಿದೆ. ಆರಂಭದಲ್ಲಿ ಜನರು ನನಗೆ ಹುಚ್ಚು ಅಂದ್ರು ಆದರೆ ನನಗೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯವಾಗಿತ್ತು. ಆರು ಕಡೆ ಜನೌಷಧಿಕೇಂದ್ರದಲ್ಲಿ ಇಸಿಜಿ ಯಂತ್ರ ಅಳವಡಿಕೆ ಮಾಡಿದೆ. ಇದರ ಫಲಾನುಭವಿಗಳ ಸಂತೋಷ ಕಂಡರೆ ಸಾರ್ಥಕ ಅನುಭವ ಆಗುತ್ತೆ. ಈ ಮೂಲಕ ನೂರು ಹೃದಯಾಘಾತವಾಗುವ ಪ್ರಕರಣ ಪತ್ತೆ ಮಾಡಿದ್ದೇವೆ. ರೋಗಿಗಳ ಜೀವ ಉಳಿಸಿದ್ದೇವೆ ಎಂದು ಕಾಮತ್ ತಿಳಿಸಿದರು.
ಅಪ್ಪನ ಸಾವಿನ ನಡುವೆಯೂ ಇಬ್ಬರ ಜೀವ ಉಳಿಸಿದ ಕಾಮತ್..ನಿಮಗೊಂದು ಸಲಾಂ
ಜನೌಷಧಿ ಸೇವೆ ಮತ್ತು ಉದ್ಯೋಗದ ಉತ್ತಮ ಸಂದೇಶ ನೀಡಿದೆ. ಓರ್ವ ನಿರುದ್ಯೋಗಿ ಯುವಕನಿಗೆ ಹಣ ಕೊಟ್ಟು ಜನೌಷಧ ಆರಂಭಿಸಲು ಪ್ರೇರಣೆ ನೀಡಿದೆ. ಈಗ ಆ ಕೇಂದ್ರ ಅಗ್ರಪಂಕ್ತಿಯಲ್ಲಿದೆಇಷ್ಟು ದೊಡ್ಡ ವೈದ್ಯನಾಗಿ ಯಾಕೆ ಜನೌಷಧಿ ಕೇಂದ್ರಗಳ ಜೊತೆ ಇದ್ದೀಯಾ ಎಂಬ ಪ್ರಶ್ನೆ ಬರುತ್ತಿತ್ತು. ಜನೌಷಧಿ ಜನೋಪಯೋಗಿ ಅನ್ನೋದು ನನ್ನ ಅಭಿಪ್ರಾಯ ಎಂದರು.
ವೈದ್ಯರ ಸಾಧನೆಯನ್ನು ಕೊಂಡಾಡಿದ ಪ್ರಧಾನಿ, ನಮ್ಮ ಕಲ್ಪನೆಯ ಮೂರ್ತರೂಪ ನೀವು ಮಾಡಿತೋರಿಸಿದ್ದೀರಿ. ಓರ್ವ ಯುವಕನಿಗೆ ದಾರಿ ತೋರಿಸಿಒಳ್ಳೇದಿ ಮಾಡಿದ್ರಿ. ಜನೌಷಧಿ ಕೇಂದ್ರದಲ್ಲಿ ಇಸಿಜಿ ಆರಂಭಿಸಿದ್ದು ಮೆಚ್ಚಿಕೊಳ್ಳುವ ಕೆಲಸ ಎಂದರು.