Asianet Suvarna News Asianet Suvarna News

ಇತಿಹಾಸವನ್ನೇ ಸೃಷ್ಟಿಸಿದ್ದ ಜನಮೆಚ್ಚಿದ ಜಿಲ್ಲಾ ಪಂಚಾಯಿತಿ ಸಿಇಒ ದಿಢೀರ್‌ ವರ್ಗ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇತಿಹಾಸವನ್ನೇ ಸೃಷ್ಟಿಸಿ ಮೊದಲ ದರ್ಜೆಗೆ ಏರಿಸಿದ್ದ ಅಧಿಕಾರಿಯನ್ನು ಎರಡು ವರ್ಷ ತುಂಬುವ ಮೊದಲೇ ದಿಢೀರ್ ವರ್ಗಾವಣೆ ಮಾಡಲಾಗಿದೆ

Chikkaballapur CEO Fouzia taranum Transferred snr
Author
Bengaluru, First Published Sep 29, 2020, 12:21 PM IST

ಚಿಕ್ಕಬಳ್ಳಾಪುರ (ಸೆ.29):2019-20ನೇ ಸಾಲಿನ ವಾರ್ಷಿಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಇಡೀ ರಾಜ್ಯದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆಗೆ ಜಿಲ್ಲೆಯ ಶೈಕ್ಷಣಿಕ ಇತಿಹಾಸದಲ್ಲಿ ಪ್ರಥಮ ಸ್ಥಾನ ತಂದುಕೊಟ್ಟಜಿಪಂ ಸಿಇಒ ಬಿ.ಫೌಝೀಯಾಗೆ ಸರ್ಕಾರ ವರ್ಗಾವಣೆಗೊಳಿಸಿದೆ

ಕಲಬುರಗಿ ಮಹಾ ನಗರ ಪಾಲಿಕೆ ಆಯುಕ್ತರಾಗಿದ್ದ ಬಿ.ಫೌಝಿಯಾ ಜಿಲ್ಲೆಗೆ ಆಗಮಿಸಿ ಎರಡು ವರ್ಷ ಕಳೆಯುವುದಕ್ಕೂ ಮೊದಲೇ ವರ್ಗಗೊಂಡಿದ್ದಾರೆ. ನರೇಗಾ ಯೋಜನೆಯನ್ನು ಜಿಲ್ಲಾದ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದ ಮಾನವ ದಿನಗಳ ಸೃಜನೆಯಲ್ಲಿ ಸಾಕಷ್ಟುಪ್ರಗತಿ ಜೊತೆಗೆ ನರೇಗಾ ಬಳಸಿ ಸರ್ಕಾರಿ ಶಾಲೆಗಳ ಪುನಶ್ಚೇತನಕ್ಕೆ ಮುಂದಾಗಿದ್ದ ಸಿಇಒ ತಮ್ಮ ಆಡಳಿತದ ಕಾರ್ಯವೈಖರಿ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದ್ದರು.

ಒಂದೇ ತಿಂಗಳಲ್ಲಿ ಶರತ್ ಎತ್ತಂಗಡಿ :ಮೈಸೂರು ನೂತನ DCಯಾಗಿ ರೋಹಿಣಿ ಸಿಂಧೂರಿ : ..

ಐಎಎಸ್‌ ಅಧಿಕಾರಿಯಾದರೂ ಜಿಲ್ಲೆಯ ಗ್ರಾಮೀಣ ಕನ್ನಡ ಶಾಲೆಗಳಿಗೆ ಹೋಗಿ ಪಾಠ ಮಾಡಿದ್ದರು. ಫೌಝೀಯಾ ಅವರಿಗೆ ಸರ್ಕಾರ ಇನ್ನು ಸ್ಥಳ ತೋರಿಸಬೇಕಾಗಿದೆ.

ಪಿ.ಶಿವಶಂಕರ್‌ ಹೊಸ ಸಿಇಒ:  ಬಿ.ಫೌಝೀಯಾ ತರುನ್ನುಮ್‌ ಅವರಿಂದ ತೆರವಾದ ಸ್ಥಾನಕ್ಕೆ ರಾಜ್ಯ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ ರಾಜ್‌ ಇಲಾಖೆ ನಿರ್ದೇಶಕರಾಗಿದ್ದ ಪಿ.ಶಿವಶಂಕರ್‌ರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
 

Follow Us:
Download App:
  • android
  • ios