Asianet Suvarna News Asianet Suvarna News

ಟೀಕೆಗಳೇ ನನ್ನ ಯಶಸ್ಸಿನ ಮೆಟ್ಟಿಲು : ಕೃಷ್ಣಾಗೆ ಬಾಗಿನ ಅರ್ಪಿಸಿ ಸಿಎಂ ಬೊಮ್ಮಾಯಿ ಹೇಳಿಕೆ

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ  ಆಗಮಿಸಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು. ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದು ಆಲಮಟ್ಟಿ ಜಲಾಶಯ ಭರ್ತಿಯಾದ ಪರಿಣಾಮ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಆಗಮಿಸಿ, ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು. 

Chief Minister Basavaraj Bommai submit Bhagina to River Krishna in vijayapura akb
Author
First Published Sep 30, 2022, 1:58 PM IST

ವರದಿ:ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ.
ವಿಜಯಪುರ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇಂದು ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯಕ್ಕೆ  ಆಗಮಿಸಿ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದರು. ಕೃಷ್ಣಾ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಬಂದು ಆಲಮಟ್ಟಿ ಜಲಾಶಯ ಭರ್ತಿಯಾದ ಪರಿಣಾಮ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಆಗಮಿಸಿ, ಪೂಜೆ ಸಲ್ಲಿಸುವ ಮೂಲಕ ಬಾಗಿನ ಅರ್ಪಿಸಿದರು. 


ಇನ್ನು ಹೆಲಿಕಾಪ್ಟರ್ (Helicopter) ಮೂಲಕ ಆಗಮಿಸಿದ ಸಿಎಂ ಮೊದಲು ಆಲಮಟ್ಟಿ ಜಲಾಶಯದ (Alamatti dam) ಆಣೆಕಟ್ಟಿಗೆ ಆಗಮಿಸಿದರು. ನಂತರ ಗಂಗಾ ಪೂಜೆ ಸಲ್ಲಿಸಿ, ಮೈ ದುಂಬಿ ಹರಿಯುತ್ತಿರುವ ನದಿಗೆ ಬಾಗಿನ ಸಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ (Govinda Karajola), ಲೋಕೋಪಯೋಗಿ ಸಚಿವರಾದ ಸಿ.ಸಿ. ಪಾಟೀಲ ಸೇರಿದಂತೆ ಇತರ ಮುಖಂಡರು ಭಾಗಿಯಾಗಿದ್ದರು.

ಈ ವೇಳೆ ಮಾದ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿಎಂ,ಕೃಷ್ಣಾ ಮೇಲ್ದಂಡೆ ಯೋಜನೆಗೆ ಈ ವರ್ಷ 10 ಸಾವಿರ ಕೋಟಿ ಖರ್ಚು ಮಾಡುವ ಗುರಿ ಹಾಕಿಕೊಂಡಿದ್ದೇವೆ. ಈಗಾಗಲೇ 13 ಸಭೆಗಳನ್ನ ಮಾಡಿದ್ದು, ಮೊದಲು ಪುನರ್ವಸತಿ ಪುನರ್ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಈಗಾಗಲೇ 4 ಗ್ರಾಮಗಳ ಸ್ಥಳಾಂತರಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಇನ್ನುಳಿದ ಗ್ರಾಮಗಳ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಲಿದ್ದೇವೆ. ಕೋರ್ಟ್ ಆದೇಶ ಬಂದ ಮೇಲೆ ಆಲಮಟ್ಟಿ ಜಲಾಶಯದ ಎತ್ತರವನ್ನು‌ 519.6 ರಿಂದ 524 ಮೀಟರ್‌ ಗೆ ಎತ್ತರಿಸಿ, ನೀರನ್ನು  ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದರು.

ಯುಕೆಪಿ ಮೂರನೇ ಹಂತದ ನೀರು ಕೊಡಲು ಹಂತ ಹಂತವಾಗಿ ಕ್ರಮ ಕೈಗೊಳ್ಳಲಿದ್ದೇವೆ ಎಂದ ಸಿಎಂ, ಕೆಬಿಜೆ ಎನ್ ಎಲ್ ಕಚೇರಿಯನ್ನು ಶೀಘ್ರವಾಗಿ ಸ್ಥಳಾಂತರ ಮಾಡುತ್ತೇವೆ. ಜನವರಿ ಒಳಗೆ ಎಲ್ಲಾ ಕಚೇರಿ ಸ್ಥಳಾಂತರ ಮಾಡುತ್ತೇವೆ ಎಂದರು.

ಹೈಕಮಾಂಡ್‌ ಜೊತೆ ಚರ್ಚಿಸಿ ಶೀಘ್ರ ಸಂಪುಟ ವಿಸ್ತರಣೆ

ಇದೇ ಸಮಯದಲ್ಲಿ ಸಚಿವ ಸಂಪುಟ ವಿಸ್ತರಣೆ (Cabinet expansion) ಬಗ್ಗೆ ಮಾತನಾಡಿದ ಬೊಮ್ಮಾಯಿ, ದೆಹಲಿಗೆ ತೆರಳಿ, ಹೈಕಮಾಂಡ್ ಜೊತೆ ಚರ್ಚೆ ಮಾಡಿ ಅದಷ್ಟು ಬೇಗ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದರು.

ಇನ್ನು ಪಿಎಫ್ಐ ಬ್ಯಾನ್ (PFI Ban) ವಿಚಾರವಾಗಿ ಮಾತನಾಡಿದ ಅವರು, ಈಗಾಗಲೇ ಅದರ ಬಗ್ಗೆ ಸಾರ್ವಜನಿಕವಾಗಿ ವ್ಯಾಖ್ಯಾನವಾಗಿದೆ. ಅದರಿಂದ ಅವರಿಗೆ (ಕಾಂಗ್ರೆಸ್) ಲಾಭವಾಗಲ್ಲ, ಬೇಳೆ ಬೇಯಲ್ಲ. ಚುನಾವಣೆ ಅವಧಿಯಾಗಿರುವುದರಿಂದ  ಇನ್ನು ಜಾಸ್ತಿ ಟೀಕೆಗಳು ಬರುತ್ತಿವೆ. ಟೀಕೆ, ಟಿಪ್ಪಣಿಗಳೇ ನನ್ನ ಯಶಸ್ಸಿನ ಮೆಟ್ಟಲು, ಕಾಂಗ್ರೆಸ್ ನಾಯಕರೇ ವಿಧಾನಸಭೆಯಲ್ಲಿ ಬ್ಯಾನ್ ಮಾಡಿ ಅಂತಾ ಆಗ್ರಹಿಸ್ತಿದ್ದಾರೆ. ಸದನದ ಒಳಗಡೆ ಹಾಗೂ ಹೊರಗಡೆ, ಬ್ಯಾನ್ ಮಾಡಿ, ಯಾಕೆ ಬ್ಯಾನ್ ಮಾಡ್ತಿಲ್ಲ ಎಂದು ಡಿಮ್ಯಾಂಡ್ ಇಟ್ಟಿದರು. ಈಗ ಬ್ಯಾನ್ ಮಾಡಿದ್ದೇವಲ್ಲ, ಇದು ಒಂದು ದಿನದ ಕೆಲಸವಲ್ಲ. ಹತ್ತು ಹಲವಾರು ವರ್ಷಗಳಿಂದ ಆ ಸಂಘಟನೆಗಳು ಏನೇನೂ ದೇಶದ್ರೋಹ ಕೆಲಸ ಮಾಡಿದ್ದಾರೆ ಎಂದರು.

ಚರ್ಮಗಂಟಿಗೆ ಬಲಿಯಾದ ಜಾನುವಾರಿಗೆ ಪರಿಹಾರ: ಸಿಎಂ ಬೊಮ್ಮಾಯಿ ಘೋಷಣೆ

ಹವಾಲಾದಿಂದ ಏನ್ ದುಡ್ಡು ತಂದಿದ್ದಾರೆ. ಹೊರಗಡೆ ಇಂದ ಎನ್ ಟ್ರೇನಿಂಗ್ ತಗೊಂಡು ಬಂದಿದ್ದಾರೆ. ಭಯೋತ್ಪಾದನೆಯಲ್ಲಿ (Terrorism) ಹೇಗೆ ಸಾಥ್ ಕೊಟ್ಟಿದ್ದಾರೆ. ಎಲ್ಲ ಸಾಕ್ಷಿ ಸಮೇತ ಸಿಕ್ಕಿದೆ.  ಕರ್ನಾಟಕ (Karnataka), ಕೇರಳ (Kerala)ಮಾತ್ರವಲ್ಲ, ಇಡೀ ಭಾರತ ದೇಶದಲ್ಲಿ ವ್ಯಾಪಕವಾಗಿ ಚರ್ಚೆ ಆಗಿದೆ. ಇವತ್ತು ವ್ಯವಸ್ಥಿತವಾಗಿ ಕಾನೂನು ಬದ್ಧವಾಗಿ ಬ್ಯಾನ್ ಮಾಡಿದ್ದೇವೆ ಎಂದರು.

ಕಾಂಗ್ರೆಸ್ ವಿರುದ್ಧ ಸಿಎಂ ವಾಗ್ದಾಳಿ

ಆರ್.ಎಸ್.ಎಸ್ ಹಾಗೂ ಭಜರಂಗದಳ ಬ್ಯಾನ್ ಯಾಕಿಲ್ಲ ಎಂಬ ಕಾಂಗ್ರೆಸ್ ನಾಯಕರ (Congress Leaders) ಪ್ರಶ್ನೆ ವಿಚಾರವಾಗಿ ಮಾತನಾಡಿದ ಸಿಎಂ, ಆರ್.ಎಸ್.ಎಸ್ ಬ್ಯಾನ್ ಏಕಿಲ್ಲ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆ ಮೂರ್ಖತನದಿಂದ ಕೂಡಿದೆ. ದೇಶ ಭಕ್ತಿಯ ಸಂಘಟನೆಗಳನ್ನು ಪಿ.ಎಫ್.ಐಗೆ ಹೋಲಿಸುವುದು ಸರಿಯಲ್ಲ. ಯಾರಾದ್ರೂ ಪಿ.ಎಫ್‌.ಐ ಸಮರ್ಥನೆ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ಕಾಂಗ್ರೆಸ್ ಇಂತಹ ಬೇಡಿಕೆ ಇಟ್ಟಿದೆ. ರಾಜಕೀಯ ತುಷ್ಟೀಕರಣದ ಫಲವಾಗಿ ಇಂದು ಪಿ.ಎಫ್.ಐ ಹುಟ್ಟಿಕೊಂಡಿದೆ. ಈಗ ಬ್ಯಾನ್  ಆಗಿದೆ ಎಂದರು.  

ಯಾರು ಭಾರತ್ ಜೋಡೋ ಮಾಡಿದ್ದಾರೆ, ತೋಡೋ ಮಾಡಿದ್ದಾರೆಂದು ಎಲ್ಲರಿಗೂ ಗೊತ್ತಿದೆ: ಸಿಎಂ ಬೊಮ್ಮಾಯಿ

ಭಾರತ್ ಜೋಡೋ ಸಮಾವೇಶ ರಾಜ್ಯಕ್ಕೆ ಎಂಟ್ರಿ ವಿಚಾರ ಬಗ್ಗೆ ಪ್ರತಿಕ್ರಿಯೆ ನೀಡಲು ಸಿಎಂ ನಿರಾಕರಿಸಿದರು. ರಾಜ್ಯಕ್ಕೆ ಬೇಕಾಗಿರುವ ಯುಕೆಪಿ ಯೋಜನೆಗಾಗಿ ನಾನು ಬಂದಿರುವೆ.
ಇಂತಹ ದೊಡ್ಡ ಯೋಜನೆ ಬಗ್ಗೆ ಮಾತನಾಡುವಾಗ, ರಾಜಕಾರಣ ಬಗ್ಗೆ ಮಾತನಾಡೋದು ಸಿಎಂ ಆಗಿ ಸರಿಯಲ್ಲ ಎಂದು ನುನುಚಿಕೊಂಡರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ಸಚಿವ ಸಿ.ಸಿ.ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
 

Follow Us:
Download App:
  • android
  • ios