ಜಾಗೃತಿ, ತಪಾಸಣೆ, ವಿಮೆ ಹೆಸರಲ್ಲಿ ಗ್ಯಾಸ್ ಬಳಕೆದಾರರಿಗೆ ಮೋಸ: ಗ್ರಾಹಕರ ಆಕ್ರೋಶ
ಕಡು ಬಡ ಗ್ರಾಹಕರಿಗೆ ಅನುಕೂಲವಾಗಲಿ, ಗ್ಯಾಸ್ ಬಳಕೆ ದುಬಾರಿಯಾಗದಿರಲಿ ಅಂತ ಕೇಂದ್ರ ಸರ್ಕಾರ ಸಬ್ಸಿಡಿ ಹಣ ನೀಡ್ತಿದೆ. ಆದ್ರೆ ಚಿತ್ರದುರ್ಗದ ಗ್ಯಾಸ್ ಕೆಲ ಏಜನ್ಸಿಗಳು, ಅಪಘಾತ ವಿಮೆ ಹಾಗು ಜಾಗೃತಿ ನೆಪದಲ್ಲಿ ಗ್ರಾಹಕರನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿವೆ.
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಸೆ.07): ಕಡು ಬಡ ಗ್ರಾಹಕರಿಗೆ ಅನುಕೂಲವಾಗಲಿ, ಗ್ಯಾಸ್ ಬಳಕೆ ದುಬಾರಿಯಾಗದಿರಲಿ ಅಂತ ಕೇಂದ್ರ ಸರ್ಕಾರ ಸಬ್ಸಿಡಿ ಹಣ ನೀಡ್ತಿದೆ. ಆದ್ರೆ ಚಿತ್ರದುರ್ಗದ ಗ್ಯಾಸ್ ಕೆಲ ಏಜನ್ಸಿಗಳು, ಅಪಘಾತ ವಿಮೆ ಹಾಗು ಜಾಗೃತಿ ನೆಪದಲ್ಲಿ ಗ್ರಾಹಕರನ್ನ ಸಂಕಷ್ಟಕ್ಕೆ ಸಿಲುಕಿಸುತ್ತಿವೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ನೋಡಿ ಹೀಗೆ ಗ್ಯಾಸ್ ಸ್ಟವ್ ಪರೀಕ್ಷಿಸುತ್ತಾ, ಅಪಘಾತ ವಿಮೆ ಹೆಸರಲ್ಲಿ ಹಣ ವಸೂಲಿ ಮಾಡ್ತಿರೋ ಯುವಕರು. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಚಿತ್ರದುರ್ಗ ಹೌದು, ಮದ್ಯ ಕರ್ನಾಟಕದ ಪ್ರಮುಖ ಜಿಲ್ಲೆಯಾದ ಚಿತ್ರದುರ್ಗ ನಗರದಲ್ಲಿ ನಾಲ್ಕು ಗ್ಯಾಸ್ ಏಜೆನ್ಸಿಗಳಿವೆ.
ಆದ್ರೆ ಅವುಗಳಲ್ಲಿ ಮೂರು ಖಾಸಗಿ ಗ್ಯಾಸ್ ಏಜೆನ್ಸಿಗಳು ಗ್ಯಾಸ್ ಸ್ಟವ್ ಪರೀಕ್ಷೆ, ಆಕ್ಸಿಡೆಂಟ್ ಜಾಗೃತಿ ಮತ್ತು ಅಪಘಾತ ವಿಮೆ ನೆಪದಲ್ಲಿ ಒಂದು ಕನೆಕ್ಷನ್ ಗೆ 150 ರೂಪಾಯಿ ವಸೂಲಿ ಮಾಡ್ತಿದ್ದಾರೆ. ಹೀಗಾಗಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ 1 ಲಕ್ಷದ 10 ಸಾವಿರಕ್ಕು ಅಧಿಕ ಗ್ರಾಹಕರಿಂದ ತಲಾ 150 ರೂಪಾಯಿ ವಸೂಲಿ ಮಾಡ್ತಿದ್ದು,ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಲಾಗ್ತಿದೆ. ಒಂದು ವೇಳೆ ಗ್ರಾಹಕರು ಹಣವನ್ನು ಪಾವತಿಸದಿದ್ರೆ, ನಿಮಗೆ ಸಿಲಿಂಡರ್ ಕೊಡಲ್ಲ ಅಲ್ಲದೇ ಏನಾದ್ರು ನಿಮ್ಮ ಮನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿದ್ರೆ ಅಪಘಾತ ವಿಮೆ ಬರಲ್ಲ ಅಂತ ಬೆದರಿಸ್ತಿದ್ದಾರೆಂಬ ಆರೋಪ ಗ್ರಾಹಕರಿಂದ ಕೇಳಿ ಬಂದಿದೆ.
ಮತ್ತೇ ಮುನ್ನಲೆಗೆ ಬಂತೂ ಮಡಹಳ್ಳಿ ಗುಡ್ಡ ಕುಸಿತ ಪ್ರಕರಣ: ಗಣಿಗಾರಿಕೆ ಆರಂಭಿಸಲು ಲಾಬಿ!
ಇನ್ನು ಗ್ಯಾಸ್ ಸ್ಟವ್ ತಪಾಸಣೆಗೆಂದು ಬಂದಿರೋ ಯುವಕರು ನಾವೆಲ್ಲಾ ಅಕ್ರಮವಾಗಿ ವಸೂಲಿ ಮಾಡ್ತಿಲ್ಲ. ನಮ್ಮಂತೆ ಹತ್ತಾರು ಜನ ತರಭೇತಿ ಪಡೆದು ಕಂಪನಿಯಿಂದ ಸರ್ವೀಸ್ ನೀಡ್ತಿದ್ದೇವೆ. ಅಲ್ಲದೇ ಭಾರತ್ ಗ್ಯಾಸ್ ಕಂಪನಿಯಿಂದ ತರ್ಡ್ ಪಾರ್ಟಿ ಇನ್ಸೂರೆನ್ಸ್ ಇರುತ್ತದೆ. ಅದಕ್ಕಾಗಿ 150 ರೂಪಾಯಿ ಸಂಗ್ರಹಿಸ್ತೇವೆ ಎನ್ನುತಿದ್ದು,ಮ್ಯಾನೇಜರ್ ಗೋವಿಂದರೆಡ್ಡಿ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಆದ್ರೆ ಇವರ ಏಜನ್ಸಿ ಆರಂಭವಾದಾಗಿನಿಂದ ಈವರೆಗೆ ಒಬ್ರಿಗೂ ಇನ್ಸೂರೆನ್ಸ್ ಬಂದಿಲ್ವಂತೆ. ಹೀಗಾಗಿ ಈ ಬಗ್ಗೆ ಚಿತ್ರದುರ್ಗಜಿಲ್ಲಾ ಆಹಾರ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಅವರನ್ನ ಕೇಳಿದ್ರೆ, ಗ್ರಾಹಕರಿಗೆ ಅಗತ್ಯವಿದ್ರೆ ಮಾತ್ರ ಕಂಪನಿಯ ಸರ್ವೀಸ್ ಪಡೆಯಬಹುದು ಹೊರೆತು ಕಡ್ಡಾಯವೇನಲ್ಲ.
ಕಸ್ತೂರಿ ರಂಗನ್ ವರದಿ 2013 ರದ್ದು, ಈಗ ಪರಿಸ್ಥಿತಿ ಬದಲಾಗಿದೆ: ಸಚಿವ ಈಶ್ವರ ಖಂಡ್ರೆ
ಒಂದು ವೇಳೆ ಒತ್ತಾಯ ಪೂರ್ವಕವಾಗಿ ಬ್ಲಾಕ್ ಮೇಲ್‌ಮಾಡೋದು ಕಂಡು ಬಂದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಒಟ್ಟಾರೆ ಗ್ಯಾಸ್ ಸರ್ವೀಸ್ ಹಾಗು ಅಪಘಾತ ವಿಮೆಗೆಂದು ಈ ಹಿಂದೆ ಕೇವಲ 20 ರೂಪಾಯಿ ಹಣವನ್ನು ಸಿಲಿಂಡರ್ ಡಿಲವರಿ ಬಾಯ್ ಗಳು ಸಂಗ್ರಹಿಸ್ತಿದ್ರು. ಆದ್ರೆ ಕಂಪನಿಯಿಂದ ಐದು ವರ್ಷದ ಸರ್ವೀಸ್ ಗಾಗಿ 236 ಪಡೆಯುತಿದ್ರು ಸಹ ಇದೀಗ ಕಂಪನಿ ಹೆಸರಲ್ಲಿ ಚಿತ್ರದುರ್ಗದ ಗ್ಯಾಸ್ ಏಜನ್ಸಿಗಳ ಮಾಲಿಕರೇ 150 ರೂಪಾಯಿಯನ್ನು ಗ್ರಾಹಕರ ಜೇಬಿಗೆ ಕತ್ತರಿ ಹಾಕ್ತಿರೋದು ವಿಪರ್ಯಾಸ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ಈ ಗೋಲ್ಮಾಲ್ ನತ್ತ ಗಮನ ಹರಿಸಿ ಅಕ್ರಮ ದಂಧೆಗೆ ಬ್ರೇಕ್ ಹಾಕಬೇಕಿದೆ.